ಇ.ಡಿ. ಮುಂದೆ ರಿಯಾ ಹಾಜರು; ಹಣಕಾಸು ಅವ್ಯವಹಾರ ಕುರಿತು ವಿಚಾರಣೆ; ಆಸ್ತಿ ವಿವರ ಕೊಡದ ನಟಿ
Team Udayavani, Aug 8, 2020, 11:07 AM IST
ಇ.ಡಿ.ಕಚೇರಿಗೆ ಶುಕ್ರವಾರ ವಿಚಾರಣೆಗಾಗಿ ಆಗಮಿಸಿದ ರಿಯಾ ಚಕ್ರವರ್ತಿ
ಮುಂಬಯಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ಶುಕ್ರವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಹಣಕಾಸು ಅಕ್ರಮ ಪ್ರಕರಣ ಸಂಬಂಧ ಬಲ್ಲಾರ್ಡ್ ಎಸ್ಟೇಟ್ನಲ್ಲಿರುವ ಇಡಿ ಕಚೇರಿಗೆ ರಿಯಾ ಮತ್ತು ಸಹೋದರ ಶೋವಿಕ್ ಹಾಜರಾಗಿದ್ದಾರೆ. ಇದೇ ವೇಳೆ, ಅವರ ಬ್ಯುಸಿನೆಸ್ ಮ್ಯಾನೇಜರ್ ಶ್ರುತಿ ಮೋದಿಗೆ ಕೂಡ ಸಮನ್ಸ್ ಜಾರಿಯಾದ ಕಾರಣ, ಅವರೂ ಇ.ಡಿ. ಕಚೇರಿಗೆ ಆಗಮಿಸಿದ್ದರು. ಇದಕ್ಕೂ ಮುನ್ನ ತಮಗೆ ಇ.ಡಿ. ಮುಂದೆ ಹಾಜರಾಗುವು ದಕ್ಕೆ ವಿನಾಯ್ತಿ ನೀಡಬೇಕೆಂದು ರಿಯಾ ಕೋರಿದ್ದ ಮನವಿಯನ್ನು ತಿರಸ್ಕರಿಸಲಾಗಿತ್ತು. ಇದೇ ವೇಳೆ, ತನ್ನ ಆಸ್ತಿಪಾಸ್ತಿಯ ದಾಖಲೆಗಳನ್ನು ಇ.ಡಿ.ಗೆ ನೀಡಲು ರಿಯಾ ನಿರಾಕರಿಸಿದ್ದಾರೆ ಎಂದೂ ಹೇಳಲಾಗಿದೆ.
ಸುಶಾಂತ್ರ ಖಾತೆಯಿಂದ 15 ಕೋಟಿ ರೂ.ಗಳನ್ನು ಬೇರೆ ಖಾತೆಗೆ ವರ್ಗಾಯಿಸಲಾಗಿದೆ ಹಾಗೂ ಹಣಕಾಸು ವಂಚನೆ ಮಾಡುವ ಮೂಲಕ ರಿಯಾ ಸುಶಾಂತ್ರ ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಸುಶಾಂತ್ ತಂದೆ ದೂರು ನೀಡಿದ್ದರು.
ಬಿಹಾರದ ಅಧಿಕಾರಿ ಬಿಡುಗಡೆ
ಸುಶಾಂತ್ ಪ್ರಕರಣದ ತನಿಖೆಗೆಂದು ಮುಂಬಯಿಗೆ ಆಗಮಿಸಿದ್ದ ಬಿಹಾರ ಐಪಿಎಸ್ ಅಧಿಕಾರಿಯನ್ನು ಶುಕ್ರವಾರ ಕ್ವಾರಂಟೈನ್ನಿಂದ ಬಿಡುಗಡೆ ಮಾಡಲಾಗಿದೆ. ಜತೆಗೆ, ಬಿಹಾರಕ್ಕೆ ಮರಳಲು ಅವಕಾಶ ಕಲ್ಪಿಸಲಾಗಿದೆ. ಇದೇ ವೇಳೆ ಮಾತನಾಡಿರುವ ಅಧಿಕಾರಿ ವಿನಯ್ ತಿವಾರಿ, ಇಷ್ಟು ದಿನ ಮುಂಬಯಿ ಪೊಲೀಸರು ಕ್ವಾರಂಟೈನ್ನಲ್ಲಿ ಇಟ್ಟಿದ್ದು ನನ್ನನ್ನಲ್ಲ, ಬದಲಿಗೆ ಸುಶಾಂತ್ ಸಾವಿನ ತನಿಖೆಯನ್ನು ಎಂದು ಹೇಳಿದ್ದಾರೆ.
ಈ ನಡುವೆ, ತಮ್ಮ ವಿರುದ್ಧದ ಪ್ರಕರಣವನ್ನು ಪಾಟ್ನಾದಿಂದ ಮುಂಬಯಿಗೆ ವರ್ಗಾಯಿಸುವಂತೆ ಕೋರಿ ರಿಯಾ ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡುವಂತೆ ಸುಪ್ರೀಂ ಕೋರ್ಟ್ಗೆ ಬಿಹಾರ ಸರಕಾರ ಶುಕ್ರವಾರ ಮನವಿ ಸಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.