ಪ್ರವಾಹ ಪರಿಸ್ಥಿತಿ: 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ ಟೋಪಣ್ಣ!
Team Udayavani, Aug 8, 2020, 11:12 AM IST
ನಾರಾಯಣಪುರ (ಯಾದಗಿರಿ): ಕೃಷ್ಣಾ ನದಿಗೆ 1.80 ಲಕ್ಷ ಕ್ಯೂಸೆಕ್ ನಷ್ಟು ಭಾರಿ ಪ್ರಮಾಣದ ನೀರು ಹರಿಬಿಟ್ಟಿದ್ದರಿಂದ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರದ ಶ್ರೀ ಛಾಯಾ ಭಗವತಿ ಬಳಿ ಎಡದನಮಾಳಿ ತಪ್ಪಲು ಪ್ರದೇಶದ ನಡುಗಡ್ಡಿಯಲ್ಲಿ 165 ಕುರಿಗಳೊಂದಿಗೆ ಓರ್ವ ಕುರಿಗಾಹಿ ಸಿಲುಕಿ ಹಾಕಿಕೊಂಡಿದ್ದಾನೆ.
ಕಳೆದ ರವಿವಾರದಂದು ನದಿಗೆ ನೀರು ಹರಿ ಬಿಡುವದನ್ನು ಸ್ಥಗಿತಗೊಳಿಸಿದ್ದರಿಂದ ನದಿಯಲ್ಲಿ ನೀರು ಇಲ್ಲದೆ ಇರುವದನ್ನು ಗಮನಿಸಿದ ಕುರಿಗಾಹಿಗಳಾದ ಟೋಪಣ್ಣ ಹಾಗೂ ಢೀಕಪ್ಪ ಇಬ್ಬರು ಸೇರಿ ತಮ್ಮ ಹಾಗೂ ಇತರರ ಕುರಿಗಳು ಸೇರಿ 165 ಕುರಿಗಳೊಂದಿಗೆ ಶ್ರೀ ಛಾಯಾ ಭಗವತಿ ಬಳಿ ನದಿಯ ಮಧ್ಯದಲ್ಲಿ ಇರುವ ಎಡದನಮಾಳಿ ತಪ್ಪಲಿನಲ್ಲಿ ಕುರಿಗಳನ್ನು ಮೇಯಿಸಲು ನಡುಗಡ್ಡಿಯಲ್ಲಿ ಕುರಿಗಳೊಂದಿಗೆ ಬೀಡು ಬಿಟ್ಟಿದ್ದಾರೆ. ಆದರೆ ಗುರುವಾರ ಬಸವ ಸಾಗರದಿಂದ ನದಿಗೆ 1 ಲಕ್ಷ ಕ್ಯೂಸೆಕ್ ನಷ್ಟು ನೀರು ಬಿಡಲು ಆರಂಭಿಸಿ ಶುಕ್ರವಾರ 1.80 ಲಕ್ಷ ಕ್ಯೂಸೆಕ್ ಏರಿಕೆಯಾಗಿದ್ದರಿಂದ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ: ಆ. 9ರ ಮಹಾ ಪ್ರವಾಹಕ್ಕೆ ಒಂದು ವರ್ಷ; ಇನ್ನೂ ಬಾಡಿಗೆ ಮನೆಯಲ್ಲೇ ಸಂತ್ರಸ್ತರ ವಾಸ
ನದಿಯಲ್ಲಿ ನೀರು ಏರಿಕೆಯಾಗುತ್ತಿರುವುದನ್ನು ಗಮನಿಸಿದ ಇಬ್ಬರು ಕುರಿಗಾಹಿಗಳ ಪೈಕಿ ಢೀಕಪ್ಪ ಎಂಬವರು ತಮ್ಮ ಗ್ರಾಮವಾದ ಐಬಿ ತಾಂಡಾದ ನಿವಾಸಿಗಳಿಗೆ ಮಾಹಿತಿ ನೀಡಲು ಕಡಿಮೆ ನೀರು ಹರಿವು ಪ್ರದೇಶದಿಂದ ಈಜಿ ದಡ ಸೇರಿದ್ದಾನೆ. ಬಳಿಕ ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದಾನೆ. ಸದ್ಯ ಟೋಪಣ್ಣ 165 ಕುರಿಗಳೊಂದಿಗೆ ನಡುಗಡ್ಡೆಯಲ್ಲಿ ಸಿಲುಕಿ ಹಾಕಿಕೊಂಡಿದ್ದಾನೆ.
ಮಾಹಿತಿ ತಿಳಿದು ಶನಿವಾರ ಬೆಳಿಗ್ಗೆ ಕಂದಾಯ ಇಲಾಖೆಯ ಆರ್ ಐ ಬಸವರಾಜ ಬಿರಾದರ ಅಗ್ನಿಶಾಮಕದಳದ ಪಿಎಸ್ ಐ ಪ್ರಮೋದ ವಾಲಿ ಹಾಗೂ ಸ್ಥಳೀಯ ಪೊಲೀಸ್ ಠಾಣೆ ಸಿಬ್ಬಂದಿ ನೇತೃತ್ವದ ತಂಡ ರಕ್ಷಣಾ ಕಾರ್ಯಕ್ಕಾಗಿ ನದಿ ತೀರದಲ್ಲಿ ಬೀಡು ಬಿಟ್ಟಿದ್ದಾರೆ.
ಕಳೆದೆ ಬಾರಿಯು ಇದೆ ರೀತಿ ಪ್ರವಾಹದಲ್ಲಿ ತಪ್ಪಲುಗಡ್ಡಿಯಲ್ಲಿ ಕುರಿಗಳು ಸಿಲುಕಿಕೊಂಡಿದ್ದವು. ನದಿಯಲ್ಲಿ ನೀರು ಕಡಿಮೆಯಾದಾಗ ಮರಳಿ ದಡಕ್ಕೆ ಕರೆತರಲಾಗಿರತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.