ವಿವೇಕ್ ಟ್ರೇಡರ್ಸ್ ಮಂಗಳೂರು “ಆಯುಷ್ ಚಿಕ್ಕಿ’ ಮಾರುಕಟ್ಟೆಗೆ
Team Udayavani, Aug 8, 2020, 12:07 PM IST
ಮಂಗಳೂರು: ಕೇಂದ್ರ ಸರಕಾರದ ಆಯುಷ್ ಇಲಾಖೆ ಪ್ರಮಾಣೀಕೃತ ಆಯುಷ್ ಕ್ವಾಥ ಒಳಗೊಂಡ ತುಳಸಿ ಶುಂಠಿ ಮರೀಚ ತ್ವಕ್ ಮಿಶ್ರಿತ “ಆಯುಷ್ ಚಿಕ್ಕಿ’ಯನ್ನು ನಗರದ ಆಯುರ್ವೇದಿಕ್ ಉತ್ಪನ್ನಗಳ ಮಾರಾಟ ಸಂಸ್ಥೆ ವಿವೇಕ್ ಟ್ರೇಡರ್ಸ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಬಡವರ ಬಾದಾಮಿ ಎಂದೇ ಕರೆಯಲ್ಪಡುವ ಕಡಲೆ ಬೀಜ (ಶೇಂಗಾ) ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಖನಿಜಗಳು, ಉತ್ಕರ್ಷಣ ನಿರೋಧಕ ಗಳು, ಜೀವಸತ್ವಗಳನ್ನು ಒಳಗೊಂಡಿದೆ. ಇದರಲ್ಲಿ ಪಾರ್ಶ್ವವಾಯು ಸಂಬಂಧಿತ ರೋಗ ಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯವೂ ಇದೆ.
ಆರೋಗ್ಯ ವರ್ಧಕ
ಈಗಾಗಲೇ ಕೇಂದ್ರ ಸರಕಾರದ ಆಯುಷ್ ಇಲಾಖೆ ಅಂಗೀಕೃತ ಆಯುಷ್ ಕ್ವಾಥಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಅದರಲ್ಲಿ ಬಳಸಲಾಗುವ ತುಳಸಿ, ದಾಲ್ಚಿನಿ, ಶುಂಠಿ, ಕರಿ ಮೆಣಸು ದೇಹದಲ್ಲಿ ರೋಗ ನಿರೋಧ ಕಶಕ್ತಿಯನ್ನು ಹೆಚ್ಚಿಸಿ ಕೊರೊನಾದಿಂದ ಪಾರಾಗಿರುವ ಅನುಭವವನ್ನು ನಾಗರಿಕರು ಒಪ್ಪಿಕೊಂಡಿದ್ದಾರೆ. ಈಗ ಆಯುರ್ ಚಿಕ್ಕಿಗಳ ತಯಾರಿಕೆಯಲ್ಲಿ ವಿಶೇಷವಾಗಿ ಆಯುಷ್ ಕ್ವಾಥ ಬಳಕೆಯಾಗುತ್ತಿದೆ. ಆದ್ದರಿಂದ ಇದು ಸಾಮಾನ್ಯ ಚಿಕ್ಕಿಯಾಗಿರದೇ ಆರೋಗ್ಯ ವೃದ್ಧಿಸುವ ರುಚಿಯಾದ ತಿಂಡಿಯೂ ಆಗಲಿದೆ. ಮಕ್ಕಳಿಗೆ, ಹಿರಿಯರಿಗೆ ಆಯುಷ್ ಚಿಕ್ಕಿ ನೀಡುವುದರಿಂದ ನಿಸ್ಸಂದೇಹವಾಗಿ ಇದು ಅವರ ದೇಹಕ್ಕೆ ಉಪಯೋಗವಾಗುತ್ತದೆ.
ಚಿಕ್ಕಿಯಲ್ಲಿ ಬಳಕೆಯಾಗುವ ಬೆಲ್ಲ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜತೆಗೆ ಉಸಿರಾಟದ ಕೊಳವೆ ಯನ್ನು, ಶ್ವಾಸಕೋಶವನ್ನು, ಕರುಳನ್ನು, ಹೊಟ್ಟೆಯನ್ನು ಶುಚಿಗೊಳಿಸುವ ಸತ್ವಾಂಶಗಳನ್ನು ಒಳಗೊಂಡಿದೆ. ಬೆಲ್ಲ ದೇಹದಲ್ಲಿನ ಅನಗತ್ಯ ಲವಣಾಂಶಗಳನ್ನು ಹೊರಹಾಕುತ್ತದೆ. ಅಷ್ಟೇ ಅಲ್ಲದೆ ಇದು ಕರುಳಿನ ಕ್ರಿಯಾತ್ಮಕ ಶಕ್ತಿಯನ್ನು ವೃದ್ಧಿಸಿ, ಮಲಬದ್ಧತೆ ಆಗದಂತೆ ನೋಡಿಕೊಳ್ಳುತ್ತದೆ.
ಉಪಯೋಗ ಹಲವು
ಶೇಂಗಾ, ಬೆಲ್ಲದ ಸಮ್ಮಿಲನ ರಕ್ತಹೀನತೆ ಅಥವಾ ಅನೀಮಿಯಾ ರೋಗದಿಂದ ಆಗುವ ನಿಶ್ಯಕ್ತಿಯನ್ನು ನೀಗಿಸಿ, ಹಿಮೋಗ್ಲೋಬಿನ್ ಹೆಚ್ಚಿಸುವ ಕಬ್ಬಿಣ ಮತ್ತು ಪೋಲೇಟ್ ಅಂಶ
ವನ್ನು ಒಳಗೊಂಡಿದ್ದು, ದೇಹಕ್ಕೆ ಮುಖ್ಯವಾಗಿ ಬೇಕಾಗಿರುವ ಕೆಂಪು ರಕ್ತಕಣಗಳ ಸಂಖ್ಯೆಯನ್ನು ಸರಿಯಾದ ಪ್ರಮಾಣ
ದಲ್ಲಿ ಇರಿಸುತ್ತದೆ. ನಾವು ರಕ್ತಹೀನತೆಯಿಂದ ಬಳಲುವುದನ್ನು ತಪ್ಪಿಸುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿ ಇರುತ್ತದೆ. ಮೂಳೆಗಳ ಗಟ್ಟಿತನಕ್ಕೂ ಇದು ಸಹಕಾರಿ. ಆಯುಸ್ಸು ವೃದ್ಧಿ, ತಾರುಣ್ಯ ಕಾಪಾಡಲು ಸಹಾಯ ಮಾಡುತ್ತದೆ. ಬಾಯಿರುಚಿಗಾಗಿ ಆರೋಗ್ಯ ಕೆಡಿಸುವ ಯಾವುದೋ ಆಹಾರದ ಬದಲು ದೇಹಕ್ಕೆ ಉಪಯೋಗಕರ ಮತ್ತು ಬಾಯಿಗೂ ರುಚಿಯಿರುವ ಸತ್ವಭರಿತ ಆಯುಷ್ ಚಿಕ್ಕಿಯನ್ನು ಸೇವಿಸುವುದು ಬಹಳ ಉತ್ತಮ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Sheikh ಹಸೀನಾರನ್ನು ಬಾಂಗ್ಲಾದೇಶಕ್ಕೆ ವಾಪಸ್ ಕಳುಹಿಸಿ: ಭಾರತಕ್ಕೆ ಬಾಂಗ್ಲಾ ಮನವಿ
Seema Haider; 4 ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಈಗ ಗರ್ಭಿಣಿ!!
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.