![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 8, 2020, 2:32 PM IST
ಬಳ್ಳಾರಿ: ಜಿಲ್ಲೆಯ ನೆಲ, ಜಲ,ಸಂಪನ್ಮೂಲ ಸೇರಿದಂತೆ ಸಕಲವನ್ನು ಉಪಯೋಗಿಸಿಕೊಂಡು ಲಾಭಗಳಿಸುತ್ತಿರುವ ಜಿಂದಾಲ್ ಈ ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯ ನೆರವಿಗೆ ಪರಿಣಾಮಕಾರಿಯಾಗಿ ಧಾವಿಸಬೇಕಿತ್ತು; ಇದುವರೆಗೆ ಕೈಜೋಡಿಸದಿರುವುದು ವಿಷಾದಕರ. ಜಿಂದಾಲ್ ಕೂಡಲೇ 10 ದಿನದೊಳಗೆ 1 ಸಾವಿರ ಬೆಡ್‍ಗಳ ವ್ಯವಸ್ಥೆಯ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು; ಇಲ್ಲದಿದ್ದಲ್ಲಿ ಬಳ್ಳಾರಿಯಿಂದ ಜಿಂದಾಲ್‍ವರೆಗೆ ಪಾದಯಾತ್ರೆ ನಡೆಸಿ ಕಾರ್ಖಾನೆ ಎದುರು ಪ್ರತಿಭಟನೆಗೆ ಕುಳಿತುಕೊಳ್ಳುವೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೊಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿದ್ದು, ಬೆಡ್‍ಗಳ ಕೊರತೆ ಕಾಣುತ್ತಿದೆ. ಇದನ್ನು ನೀಗಿಸಲು ಜಿಂದಾಲ್ ಸಂಸ್ಥೆಯವರು ಸಾವಿರ ಬೆಡ್‍ಗಳ ತಾತ್ಕಾಲಿಕ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಬೇಕು ಮತ್ತು ಅಗತ್ಯ ಸಹಾಯ-ಸಹಕಾರ ಕಲ್ಪಿಸಬೇಕು.ಇದಕ್ಕೆ 10 ದಿನಗಳ ಗಡುವು ನೀಡಲಾಗುವುದು. ಅಷ್ಟರೊಳಗೆ ಸ್ಪಂದಿಸದಿದ್ದಲ್ಲಿ ಜಿಂದಾಲ್ ಸಂಸ್ಥೆ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿರುವ ಗಣಿ ಮಾಲೀಕರು ಸಹ ಮುಂದೆ ಬಂದು ಎಲ್ಲರೊಡಗೂಡಿ 2 ಸಾವಿರ ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಗಳ ವ್ಯವಸ್ಥೆ ಮಾಡಿಕೊಡಬೇಕು. ಖಾಸಗಿ ಆಸ್ಪತ್ರೆಗಳು ಕೂಡಲೇ ಶೇ.50ರಷ್ಟು ಬೆಡ್‍ಗಳನ್ನು ನೀಡುವುದಕ್ಕೆ ಮುಂದಾಗಬೇಕು ಎಂದರು.
2 ವಾರ ಲಾಕ್‍ಡೌನ್ ಮಾಡಿ
ಜಿಲ್ಲೆಯಲ್ಲಿ ಕೋವಿಡ್ ಪ್ರತಿದಿನ ಅತ್ಯಂತ ವೇಗದಲ್ಲಿ ಹಬ್ಬುತ್ತಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತ ಸಂಪೂರ್ಣವಾಗಿ ಎರಡು ವಾರಗಳ ಕಾಲ ಲಾಕ್‍ಡೌನ್ ಮಾಡುವುದಕ್ಕೆ ಮುಂದಾಗಬೇಕು ಎಂದು ಶಾಸಕ ಸೋಮಶೇಖರರೆಡ್ಡಿ ಹೇಳಿದರು.
ಲಾಕ್‍ಡೌನ್ ಮಾಡುವುದಕ್ಕಿಂತ ಮುಂಚೆಯೇ ಜನರು ಪಡಿತರ ಮತ್ತು ತರಕಾರಿಗಳ ಖರೀದಿಸುವುದಕ್ಕೆ ವ್ಯವಸ್ಥೆ ಮಾಡಬೇಕು. ಒಟ್ಟಿನಲ್ಲಿ ಸಂಪೂರ್ಣ ಲಾಕ್‍ಡೌನ್ ಆದಾಗ ಈ ವೇಗಕ್ಕೆ ಕಡಿವಾಣ ಬಿಳಬಹುದು ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಬಳ್ಳಾರಿ ನಗರಕ್ಕೆ 2 ವೆಂಟಲೇಟರ್ ಅಂಬ್ಯುಲೆನ್ಸ್‍ಗಳನ್ನು ನೀಡುವುದಕ್ಕೆ ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಒಪ್ಪಿಕೊಂಡಿದ್ದು,ಎರಡು ವಾರಗಳಲ್ಲಿ ಬಳ್ಳಾರಿಗೆ ಬರಲಿವೆ ಎಂದರು.
ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗೆ 12ರಿಂದ 15ಕೋಟಿ ರೂ. ಖರ್ಚು ಮಾಡಿದಲ್ಲಿ ಬಳಕೆಗೆ ಸಿದ್ಧವಾಗಲಿದೆ; ಜಿಲ್ಲಾ ಖನಿಜ ನಿಧಿ ಅಡಿ ಖರ್ಚು ಮಾಡಿ ಕೋವಿಡ್ ಸೊಂಕಿತರ ಚಿಕಿತ್ಸೆಗೆ ಬಳಕೆ ಮಾಡಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಮುಖಂಡರಾದ ವೀರಶೇಖರ್,ಶ್ರೀನಿವಾಸ್ ಮೋತ್ಕರ್ ಮತ್ತಿತರರು ಇದ್ದರು.
Hosapete: ತುಂಬಿದ ಕೊಡ ತುಳುಕಿತಲೇ ಪರಾಕ್.. ಶ್ರೀಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ
Kampli: ಕಣವಿ ತಿಮ್ಮಾಪುರದಲ್ಲಿ ಶ್ರೀ ಕೃಷ್ಣದೇವರಾಯನ ಕಾಲದ ತೆಲುಗು ಶಾಸನ ಪತ್ತೆ
BJP: ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಎಲ್ಲರನ್ನೂ ಒಂದುಗೂಡಿಸುವೆ: ಬಿ.ಶ್ರೀರಾಮುಲು
Prayagraj: ಕುಂಭಮೇಳದಲ್ಲಿ ಶ್ರೀರಾಮುಲು ದಂಪತಿಯಿಂದ ಪುಣ್ಯಸ್ನಾನ
Siruguppa: ತಹಶೀಲ್ದಾರ್ ಗೆ ಬೆದರಿಕೆ ಪ್ರಕರಣ, ಕೇಸು ದಾಖಲು
You seem to have an Ad Blocker on.
To continue reading, please turn it off or whitelist Udayavani.