ಕೇರಳ ದುರಂತದ ಕೊನೆ ಕ್ಷಣ ನಡೆದಿದ್ದೇನು, ಪೈಲಟ್ ಸಾಠೆ ಬಗ್ಗೆ ಗೆಳೆಯ ಬಿಚ್ಚಿಟ್ಟ ಸಾಹಸಗಾಥೆ!
ದೀಪಕ್ ಸಾಠೆ 36 ವರ್ಷಗಳ ಕಾಲ ಪೈಲಟ್ ಆಗಿರುವ ದೀರ್ಘಾವಧಿಯ ಅನುಭವವಿದೆ.
Team Udayavani, Aug 8, 2020, 3:22 PM IST
ಮಣಿಪಾಲ:ದುಬೈನಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಶುಕ್ರವಾರ(ಆಗಸ್ಟ್ 07-2020) ಕೇರಳದ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಕೆಳಗಿಳಿಯುತ್ತಿದ್ದಂತೆಯೇ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾದ ಪರಿಣಾಮ ಸುಮಾರು ಇಪ್ಪತ್ತು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಈ ವೇಳೆ ಪೈಲಟ್ ಅವರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ನೂರಾರು ಪ್ರಯಾಣಿಕರ ಜೀವವನ್ನು ಉಳಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಇದೀಗ ಪೈಲಟ್ ದೀಪಕ್ ಸಾಠೆ ಅವರ ಬಗ್ಗೆ ಹಾಗೂ ದುರಂತ ಹೇಗೆ ಸಂಭವಿಸಿತು ಎಂಬ ಕುರಿತು ಗೆಳೆಯ ನಿಲೇಶ್ ಸಾಠೆ ಹಲವು ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಅದರ ಸಾರಾಂಶ ಇಲ್ಲಿದೆ…
“ದೀಪಕ್ ಸಾಠೆ ನನ್ನ ಗೆಳೆಯ ಅದಕ್ಕಿಂತ ಹೆಚ್ಚಾಗಿ ನನ್ನ ಸಹೋದರರನಂತಿದ್ದರು. ಆದರೆ ಅವರು ಕೇರಳ ವಿಮಾನ ದುರಂತದಲ್ಲಿ ನಮ್ಮನ್ನು ಅಗಲಿದ್ದಾರೆ. ವಂದೇ ಭಾರತ್ ಮಿಷನ್ ನಡಿ ದುಬೈನಿಂದ ಕೇರಳಕ್ಕೆ ಪ್ರಯಾಣಿಕರನ್ನು ಕರೆ ತರುತ್ತಿದ್ದ ವೇಳೆ ನಿನ್ನೆ ರಾತ್ರಿ ಕೋಝಿಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರಂತ ಸಂಭವಿಸಿದೆ.
ಇದನ್ನೂ ಓದಿ: ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ
ನನಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಲ್ಯಾಂಡಿಂಗ್ ಗಿಯರ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲವಾಗಿತ್ತು. ಪ್ರಯಾಣಿಕರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಮಾಜಿ ಐಎಎಫ್ ನ ಪೈಲಟ್ ಸಾಠೆ ನಿಲ್ದಾಣ ಸುತ್ತ ವಿಮಾನವನ್ನು ಮೂರು ಬಾರಿ ಸುತ್ತಾಡಿಸಿದ್ದರು. ಯಾಕೆಂದರೆ ಇಂಧನ ಖಾಲಿ ಮಾಡಲು. ವಿಮಾನಕ್ಕೆ ಬೆಂಕಿ ಹಿಡಿಯಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಇಂಧನ ಖಾಲಿ ಮಾಡಿದ್ದರು. ಇದರಿಂದಾಗಿಯೇ ವಿಮಾನ ಅಪಘಾತಕ್ಕೀಡಾದ ಸಂದರ್ಭದಲ್ಲಿ ಹೊಗೆ ಕಾಣಿಸಿಕೊಂಡಿರಲಿಲ್ಲವಾಗಿತ್ತು.
ವಿಮಾನ ಸ್ಕಿಡ್ ಆಗುವ ಮುನ್ನ ಎಂಜಿನ್ ಅನ್ನು ಸಾಠೆ ಬಂದ್ ಮಾಡಿದ್ದರು. ಎರಡು ಬಾರಿ ವಿಮಾನ ಲ್ಯಾಂಡ್ ಮಾಡಲು ಪ್ರಯತ್ನಿಸಿದ್ದು, ಮೂರನೇ ಬಾರಿ ವಿಮಾನ ಸ್ಕಿಡ್ ಆಗಿ ಅಪಘಾತಕ್ಕೀಡಾದ ಪರಿಣಾಮ ಪೈಲಟ್ ಹುತಾತ್ಮರಾಗಿದ್ದಾರೆ. ಆದರೆ 170 ಜನರ ಪ್ರಾಣವನ್ನು ಉಳಿಸಿದ್ದಾರೆ.
ದೀಪಕ್ ಸಾಠೆ 36 ವರ್ಷಗಳ ಕಾಲ ಪೈಲಟ್ ಆಗಿರುವ ದೀರ್ಘಾವಧಿಯ ಅನುಭವವಿದೆ. ಎನ್ ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ಪದವೀಧರ, ಕಲಿಕೆಯಲ್ಲಿ ಟಾಪರ್ ಆಗಿದ್ದ ಸಾಠೆ “Sword of Honour” ಅವಾರ್ಡ್ ಗೆ ಭಾಜನರಾಗಿದ್ದರು. ಭಾರತೀಯ ವಾಯುಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ಏರ್ ಇಂಡಿಯಾದಲ್ಲಿ ಕಮರ್ಷಿಯಲ್ ಪೈಲಟ್ ಆಗಿ ಸೇರ್ಪಡೆಗೊಂಡಿದ್ದರು.
ಇದನ್ನೂ ಓದಿ: ದೇಶದಲ್ಲಿ ಸಂಭವಿಸಿರುವ ವಿಮಾನ ದುರಂತಗಳ ಪಟ್ಟಿ
ನನಗೆ ಒಂದು ವಾರದ ಹಿಂದಷ್ಟೇ ದೀಪಕ್ ಕರೆ ಮಾಡಿದ್ದರು. ಯಾವಾಗಲೂ ಖುಷಿಯಾಗಿರುವ ವ್ಯಕ್ತಿ ಅವರು..ನಾನು ಅವರಲ್ಲಿ ವಂದೇ ಭಾರತ್ ಮಿಷನ್ ಬಗ್ಗೆ ಕೇಳಿದಾಗ..ಅರಬ್ ದೇಶಗಳಿಂದ ಭಾರತೀಯರನ್ನು ವಾಪಸ್ ಕರೆತರುತ್ತಿರುವುದು ತುಂಬಾ ಹೆಮ್ಮೆಯ ವಿಚಾರ ಎಂದಿದ್ದರು. ನಾನಾಗ ಕೇಳಿದೆ ದೀಪಕ್ ಒಂದು ವೇಳೆ ಈ ದೇಶಗಳು ಪ್ರಯಾಣಿಕರು ಪ್ರಯಾಣಿಸಲು ಅನುಮತಿ ನೀಡದಿದ್ದರೆ ಹಾಗೆ ಖಾಲಿ ವಿಮಾನದಲ್ಲಿಯೇ(ಪ್ರಯಾಣಿಕ ರಹಿತ)ಹೋಗುತ್ತೀರಾ? ಆಗ ಆತ ಕೊಟ್ಟ ಉತ್ತರ..ಓಹ್..ಇಲ್ಲ..ನಾನು ಭಾರತದಿಂದ ಹೋಗುವಾಗ ಹಣ್ಣು, ತರಕಾರಿ ಹಾಗೂ ಔಷಧಗಳನ್ನು ತುಂಬಿಸಿಕೊಂಡು ಹೋಗುತ್ತೇನೆ. ಅಲ್ಲದೇ ಯಾವತ್ತೂ ಈ ದೇಶಗಳಿಗೆ ಖಾಲಿ ವಿಮಾನ ಹಾರಾಟ ನಡೆಸಿದ್ದೇ ಇಲ್ಲ” ಎಂದಿದ್ದರು. ಇದು ನಾನು ಆತನ ಜತೆ ನಡೆಸಿದ ಕೊನೆಯ ಸಂಭಾಷಣೆ!
ಇದನ್ನೂ ಓದಿ: ಏನಿದು ಟೇಬಲ್ ಟಾಪ್ ರನ್ ವೇ? ಭಾರತದಲ್ಲಿ ಎಷ್ಟಿವೆ? ಇವು ಯಾಕೆ ಅಪಾಯಕಾರಿ?
90ಇಸವಿಯಲ್ಲಿ ನಡೆದ ದುರಂತದಲ್ಲಿ ಪವಾಡ ಸದೃಶ ಪಾರಾಗಿದ್ದರು:
ಸಾಠೆ ಭಾರತೀಯ ವಾಯುಪಡೆಯಲ್ಲಿದ್ದಾಗ 1990ರ ದಶಕದ ಆರಂಭದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಪವಾಡ ಸದೃಶವಾಗಿ ಬದುಕುಳಿದಿದ್ದ. ಹಲವಾರು ಮೂಳೆ ಮುರಿತ, ಗಾಯಗಳಿಂದ ಸುಮಾರು ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ. ಈತ ಮತ್ತೆ ವಿಮಾನ ಹಾರಿಸುತ್ತಾನೆ ಎಂಬುದನ್ನು ಯಾರೂ ಊಹಿಸಿರಲೂ ಇಲ್ಲ. ಆದರೆ ಅವನ ಬಲವಾದ ವಿಲ್ ಪವರ್ ಮತ್ತು ವಿಮಾನ ಹಾರಿಸುವ ಅದಮ್ಯ ಪ್ರೀತಿ ಆತ ಮೊದಲಿನಂತಾಗಿದ್ದ. ಇದು ನಿಜಕ್ಕೂ ಪವಾಡವೇ ಆಗಿತ್ತು.
ನೂರಾರು ಪ್ರಯಾಣಿಕರ ಜೀವ ಉಳಿಸಿ ಪ್ರಾಣ ತ್ಯಾಗ ಮಾಡಿದ ಪೈಲಟ್: ಪ್ರಯಾಣಿಕರ ಶ್ಲಾಘನೆ
ಸಾಠೆ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಇಬ್ಬರು ಮಕ್ಕಳು ಮುಂಬೈ ಐಐಟಿ ಪದವೀಧರರು. ಮಗ ಕರ್ನಲ್ ವಸಂತ್ ಸಾಠೆ , ಈತ ಪತ್ನಿ ಜತೆ ನಾಗ್ಪುರದಲ್ಲಿ ವಾಸವಾಗಿದ್ದಾನೆ. ಈತನ ಸಹೋದರ ಕ್ಯಾಪ್ಟನ್ ವಿಕಾಸ್ ಸಾಠೆ, ಈತನೂ ಕೂಡಾ ಯೋಧ. ಜಮ್ಮು ಪ್ರದೇಶದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.