ವಾಟ್ಸ್ಯಾಪ್ ನ 5 ನೂತನ ಫೀಚರ್ಸ್


Team Udayavani, Aug 10, 2020, 4:19 PM IST

ವಾಟ್ಸ್ಯಾಪ್ ನ 5 ನೂತನ ಫೀಚರ್ಸ್

ವಾಟ್ಸ್ಯಾಪ್‌, ಸದಾ ಅಪ್‌ ಡೇಟ್‌ಗಳನ್ನು ಕೊಡುತ್ತಲೇ ಬಳಕೆದಾರರ ಮನಗೆದ್ದಿರುವ ಜನಪ್ರಿಯ ಅಪ್ಲಿಕೇಶನ್‌. ಜಗತ್ತಿನಾದ್ಯಂತ 2 ಬಿಲಿಯನ್‌ ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್‌ ಈಗ 5 ನೂತನ ಫೀಚರ್‌ಗಳನ್ನು ಪರಿಚಯಿಸುತ್ತಿದೆ. ಏನವು..?

 ಹಳೇ ಮೆಸೇಜ್‌ ಡಿಲೀಟ್‌ :  ಯಾರ ಜೊತೆಗೋ, ಯಾವತ್ತೋ ನೀವು ಚಾಟ್‌ ಇಲ್ಲವೇ ಮೆಸೇಜ್‌ ಮಾಡಿರುತ್ತೀರಿ. ಇಂಥ ಚಾಟ್‌ಗಳಿಗೆ ಮುಕ್ತಿ ಕಾಣಿಸಲು “ಎಕ್ಸ್‌ಪೈರಿಂಗ್‌ ಮೆಸೇಜಸ್‌’ ಫೀಚರ್‌ ಅಳವಡಿಕೆ ಆಗುತ್ತಿದೆ. ನಿರ್ದಿಷ್ಟ ಅವಧಿಯ ಬಳಿಕ ಆಟೋಮ್ಯಾಟಿಕ್‌ ಆಗಿ ಹಳೇ ಮೆಸೇಜುಗಳು ಡಿಲೀಟ್‌ ಆಗಲಿವೆ. ಈ ಫೀಚರ್‌ ಬಳಸಿಕೊಳ್ಳಲು ಇಚ್ಚಿಸು ವವರಿಗೆ ಸೆಟ್ಟಿಂಗ್ಸ್‌ನಲ್ಲಿ ಆನ್‌/ ಆಫ್ ಆಯ್ಕೆಗಳನ್ನು ನೀಡಲಾಗುತ್ತದೆ.

ಸರ್ಚ್‌ ಆನ್‌ ವೆಬ್‌ :  ಫಾರ್ವರ್ಡ್‌ ಮೆಸೇಜ್‌ ಹಾವಳಿ ವಾಟ್ಸ್ಯಾಪ್‌ ಬಳಕೆದಾರರಿಗೆ ದೊಡ್ಡ ತಲೆನೋವು. ಯಾವುದು ಸುಳ್ಳು, ಯಾವುದು ಸತ್ಯ ಎಂಬ ಫ್ಯಾಕ್ಟ್ ಚೆಕ್‌ ಕೆಲಸವನ್ನು ಸರ್ಚ್‌ ಆನ್‌ ವೆಬ್‌ ಫೀಚರ್‌ ಮಾಡಲಿದೆ. ಈ ಆಯ್ಕೆ ವೆಬ್‌ ಜಾಲತಾಣಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ನೂತನ ಫೀಚರ್‌ ಜಾರಿಗೆ ಬಂದಿದ್ದರೂ ಭಾರತೀಯ ಬಳಕೆದಾರರಿಗೆ ಇದಿನ್ನೂ ಲಭ್ಯವಿಲ್ಲ.

ಮ್ಯೂಟ್‌ ಆಲ್ವೇಸ್‌ :  ವಾಟ್ಸ್ಯಾಪ್‌ನಲ್ಲಿ ಗ್ರೂಪ್‌ ಇಲ್ಲವೇ ಚಾಟ್‌ಗಳನ್ನು ಮ್ಯೂಟ್‌ ಮಾಡಲು ಈಗಾಗಲೇ ಆಯ್ಕೆ ಇದೆ. ಆದರೆ ಇದು 8 ಗಂಟೆ, 1 ವಾರ, 1 ವರ್ಷಗಳವರೆಗೆ ಮಾತ್ರ ಮ್ಯೂಟ್‌ ಆಗಲಿದೆ. ಶಾಶ್ವತವಾಗಿ ಮ್ಯೂಟ್‌ ಮಾಡುವ “ಮ್ಯೂಟ್‌ ಆಲ್ವೇಸ್‌’ ಆಯ್ಕೆಯನ್ನು ವಾಟ್ಸ್ಯಾಪ್‌ ಈಗತಾನೆ ಪರಿಚಯಿಸಿದೆ.

ಪೇಮೆಂಟ್ಸ್‌  :  ವಾಟ್ಸ್ಯಾಪ್‌ ಪೇಮೆಂಟ್ಸ್ ಈಗಾಗಲೇ ಭಾರತದಲ್ಲಿ ಪ್ರಯೋಗ ಹಂತದಲ್ಲಿದೆ. ಆದರೆ ಇದು ಬೀಟಾದಲ್ಲಿನ ಬಳಕೆದಾರರಿಗೆ ಅಧಿಕೃತವಾಗಿ ಬಳಸಲು ಇನ್ನೂ ಅವಕಾಶ ಸಿಕ್ಕಿಲ್ಲ. ಅನ್ಯ ವಿದೇಶಿ ಆ್ಯಪ್‌ಗ್ಳಂತೆ ವಾಟ್ಸ್ಯಾಪ್‌ ಕೂಡ ಬಳಕೆದಾರರ ಡೇಟಾ ಭದ್ರತೆ ವಿಚಾರ ಕುರಿತು ವಿಚಾರಣೆಗೊಳಪಟ್ಟಿದೆ. ಆದರೆ, ಈ ಪರೀಕ್ಷೆಯಲ್ಲಿ ವಾಟ್ಸ್ಯಾಪ್‌ ಪಾಸ್‌ ಆಗಿದೆ ಎನ್ನಲಾಗುತ್ತಿದೆ. ಯುಪಿಐ ಆಧರಿಸಿ, ವಾಟ್ಸ್ಯಾಪ್‌ ಪೇಮೆಂಟ್ಸ್ ಕೆಲಸ ಮಾಡಲಿದೆ. ಐಸಿಐಸಿಐ, ಎಚ್‌ಡಿಎಫ್ಸಿ ಬ್ಯಾಂಕ್‌ ಈ ಸೇವೆಯಲ್ಲಿ ಪಾಲುದಾರಿಕೆ ಹೊಂದಿವೆ.

ಹೊಸ ಇಮೋಜಿಗಳು : ಈಗಾಗಲೇ ವಾಟ್ಸ್ಯಾಪ್‌ ನಲ್ಲಿ ಇಮೋಜಿಗಳು ಸಾಕಷ್ಟಿವೆ. ಈಗ ಮತ್ತೆ 138 ಹೊಸ ಇಮೋಜಿಗಳನ್ನು ಬಳಕೆದಾರರಿಗೆ ಪರಿಚಯಿಸಲಿದೆ. ಕಾಲಕ್ಕೆ ತಕ್ಕಂತೆ ಎಮೋಜಿಗಳು ಮನುಷ್ಯನ ಭಾವನೆಗಳನ್ನು ಪ್ರತಿನಿಧಿಸುತ್ತವೆ. ­

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.