ಪಾಲೆರ್ಮೊ ಲೇಡೀಸ್ ಟೆನಿಸ್ ಫಿಯೋನಾ ಫೆರೊ ಚಾಂಪಿಯನ್
ಅನೆಟ್ ಕೊಂಟಾವೀಟ್ ವಿರುದ್ಧ 6-2, 7-5 ಗೆಲುವು
Team Udayavani, Aug 10, 2020, 7:20 PM IST
ಪಾಲೆರ್ಮೊ (ಇಟಲಿ): ಸ್ಪೇನಿನ ಫಿಯೋನಾ ಫೆರೊ ಕಳೆದ 5 ತಿಂಗಳಲ್ಲಿ ಮೊದಲ ಟೆನಿಸ್ ಪ್ರಶಸ್ತಿ ಜಯಿಸಿದ ತಾರೆಯಾಗಿ ಮೂಡಿಬಂದಿದ್ದಾರೆ. ಕಳೆದ ರಾತ್ರಿ ನಡೆದ “ಪಾಲೆರ್ಮೊ ಲೇಡೀಸ್ ಓಪನ್ ಟೆನಿಸ್’ ಫೈನಲ್‌ನಲ್ಲಿ ಎಸ್ತೋನಿಯಾದ ಅನೆಟ್ ಕೊಂಟಾವೀಟ್ ಅವರನ್ನು ಫೆರೊ 6-2, 7-5ರಿಂದ ಹಿಮ್ಮೆಟ್ಟಿಸಿದರು.
23 ವರ್ಷದ ಫಿಯೋನಾ ಫೆರೊ ಪಾಲಿಗೆ ಇದು 2ನೇ ಡಬ್ಲ್ಯುಟಿಎ ಪ್ರಶಸ್ತಿಯಾಗಿದೆ. ಇನ್ನೊಂದೆಡೆ ಕೊಂಟಾವೀಟ್ ತನ್ನ 6 ಫೈನಲ್ ಸ್ಪರ್ಧೆಗಳಲ್ಲಿ ಐದನ್ನು ಕಳೆದುಕೊಂಡ ಸಂಕಟ ಅನುಭವಿಸಿದರು.
ಅಗ್ರ 50ರಲ್ಲಿ ಫೆರೊ
ಈ ಗೆಲುವಿನೊಂದಿಗೆ ಫಿಯೋನಾ ಫೆರೊ ಮೊದಲ ಸಲ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ ಟಾಪ್-50 ಯಾದಿಯಲ್ಲಿ ಕಾಣಿಸಿಕೊಂಡರು. ಸೋಮವಾರ ಬಿಡುಗಡೆಗೊಂಡ ನೂತನ ರ್‍ಯಾಂಕಿಂಗ್ ಯಾದಿಯಲ್ಲಿ ಅವರು 44ನೇ ಸ್ಥಾನದಲ್ಲಿದ್ದಾರೆ. ಇದು ಮಾರ್ಚ್ ಬಳಿಕ ನಡೆದ ಮೊದಲ ಟೆನಿಸ್ ಪಂದ್ಯಾವಳಿಯೆಂಬ ಹಿರಿಮೆಗೆ ಪಾತ್ರವಾಗಿತ್ತು. ಕೊರೊನಾ ಹಾವಳಿಯಿಂದಾಗಿ ಕಳೆದ 5 ತಿಂಗಳಿಂದ ಜಾಗತಿಕ ಟೆನಿಸ್ ಸ್ಥಗಿತಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.