ಕೋವಿಡ್ ವ್ಯಾಕ್ಸಿನ್‌ ಸ್ಪರ್ಧೆಯಲ್ಲಿ ರಷ್ಯಾ ಗೆಲುವು?


Team Udayavani, Aug 12, 2020, 6:06 AM IST

ಕೋವಿಡ್ ವ್ಯಾಕ್ಸಿನ್‌ ಸ್ಪರ್ಧೆಯಲ್ಲಿ ರಷ್ಯಾ ಗೆಲುವು?

ವಿಶ್ವದ ಮೊದಲ ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಪುಟಿನ್‌ ನೇತೃತ್ವದ ರಾಷ್ಟ್ರ ರಷ್ಯಾ ಘೋಷಿಸಿದೆ. ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಈ ಲಸಿಕೆ ಗೇಮ್‌ಚೇಂಜರ್‌ ಆಗಲಿದೆ ಎನ್ನುವುದು ರಷ್ಯಾದ ಭರವಸೆ. ಆದರೆ, ರಷ್ಯಾ ತರಾತುರಿಯಲ್ಲಿ ಈ ಲಸಿಕೆಗೆ ಒಪ್ಪಿಗೆ ನೀಡಿದ್ದು, ಇದರ ಅಡ್ಡಪರಿಣಾಮಗಳ ಬಗ್ಗೆ ಮತ್ತಷ್ಟು ಅಧ್ಯಯನ ಅಗತ್ಯ ಎನ್ನುವುದು ವೈಜ್ಞಾನಿಕ ವಲಯದಲ್ಲಿನ ಒಂದು ವರ್ಗದ ವಾದ…ಏನೇ ಇದ್ದರೂ ರಷ್ಯಾದ ಈ ಭರವಸೆಯ ನುಡಿಗಳು ನಿಜವಾದರೆ, ನಿಸ್ಸಂಶಯವಾಗಿಯೂ ಕೋವಿಡ್‌ ವಿರುದ್ಧದ ಹೋರಾಟ ನಿರ್ಣಾಯಕ ಹಂತ ತಲುಪಲಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಆರಂಭವಾದ ಕೊರೊನಾ ಹಾವಳಿ ಈಗ ಆಗಸ್ಟ್ ತಿಂಗಳಾದರೂ ಕಡಿಮೆಯಾಗುತ್ತಿಲ್ಲ. ಕಡಿಮೆಯಾಗುವುದಿರಲಿ, ಜಗತ್ತಿನಾದ್ಯಂತ ಒಟ್ಟು 2 ಕೋಟಿಗೂ ಅಧಿಕ ಜನರನ್ನು ಸೋಂಕಿಗೀಡಾಗಿಸಿ, 7 ಲಕ್ಷಕ್ಕೂ ಅಧಿಕ ಜನರನ್ನು ಬಲಿಪಡೆದಿದೆ ಈ ವೈರಸ್‌. ಬೇಸಿಗೆಯ ಬಿಸಿಗೆ ಅದು ತಾನಾ ಗಿಯೇ ಹೊರಟು ಹೋಗುತ್ತದೆ, ಹವಾಮಾನ ಬದಲಾವಣೆ ಅದರ ಓಟಕ್ಕೆ ಬ್ರೇಕ್‌ ಹಾಕುತ್ತದೆ ಎನ್ನುವ ಭವಿಷ್ಯವಾಣಿಗಳೆಲ್ಲ ಸುಳ್ಳಾಗಿವೆ. ಈಗೇನಿದ್ದರೂ ಲಸಿಕೆಯೇ ಈ ವೈರಸ್‌ನ ಅಬ್ಬರ ವನ್ನು ಕೊನೆಗೊಳಿಸಬಲ್ಲ ಕೊನೆಯ ಉಪಾಯ ಎನ್ನುವ ಒಮ್ಮ ತಾಭಿಪ್ರಾಯಕ್ಕೆ ಜಗದ ವೈಜ್ಞಾನಿಕ ವಲಯ ಬಂದಿದೆ. ಈ ಕಾರಣ ಕ್ಕಾಗಿಯೇ, ಭಾರತ ಸೇರಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳು ಲಸಿಕೆ ಸಂಶೋಧನೆಯಲ್ಲಿ, ಟ್ರಯಲ್‌ಗಳಲ್ಲಿ ನಿರತವಾಗಿವೆ.

ಭಾರತ, ಅಮೆರಿಕ, ಚೀನಾ, ಬ್ರಿಟನ್‌, ಆಸ್ಟ್ರೇಲಿಯಾ, ಜರ್ಮನಿ, ದಕ್ಷಿಣ ಕೊರಿಯಾ ಸೇರಿದಂತೆ ಹಲವು ರಾಷ್ಟ್ರಗಳ 26 ಲಸಿಕೆಗಳು ವಿವಿಧ ಹಂತದ ಟ್ರಯಲ್‌ನಲ್ಲಿ ಇರುವ ವೇಳೆಯಲ್ಲೇ, ಅತ್ತ ರಷ್ಯಾ ಮಾತ್ರ ತಾನು ಕೋವಿಡ್‌ ವಿರುದ್ಧ ಯಶಸ್ವಿಯಾಗಿ ಲಸಿಕೆ ಅಭಿವೃದ್ಧಿ ಪಡಿಸಿರುವುದಾಗಿ ಘೋಷಿಸಿದೆ.

ರಷ್ಯಾದ ಗಮಲೇಯ ಸಂಶೋಧನಾ ಸಂಸ್ಥೆ ಹಾಗೂ ರಕ್ಷಣಾ ಸಚಿವಾಲಯವು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಈ ಲಸಿಕೆಯ ವ್ಯಾಕ್ಸಿನೇಷನ್‌ನಲ್ಲಿ ಪಾಲ್ಗೊಂಡಿದ್ದ ಸ್ವಯಂಸೇವಕರೆ ಲ್ಲರಲ್ಲೂ ಪ್ರಬಲ ರೋಗ ನಿರೋಧಕ ಪ್ರಕ್ರಿಯೆ ಕಾಣಿಸಿ ಕೊಂಡಿರುವುದಾಗಿ ಹಾಗೂ ಅವರಲ್ಲಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಕಾಣಿಸಿಕೊಂಡಿಲ್ಲ ಎಂದೂ ರಷ್ಯಾದ ಆರೋಗ್ಯ ಇಲಾಖೆ ಹೇಳಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮೀರ್‌ ಪುಟಿನ್‌ ಅವರಂತೂ ಈ ಯಶಸ್ಸಿನಿಂದಾಗಿ ಅತ್ಯಂತ ಸಂಭ್ರಮದಲ್ಲಿದ್ದು, ಇದೇ ಮೊದಲ ಬಾರಿಗೆ ಜಗತ್ತಿನಲ್ಲಿ ಹೊಸ ಕೊರೊನಾ ವೈರಸ್‌ ವಿರುದ್ಧ ಲಸಿಕೆ ಸಿದ್ಧವಾಗಿದೆ, ಇದು ಪರಿಣಾಮಕಾರಿಯಾಗಿದ್ದು, ವೈರಸ್‌ ವಿರುದ್ಧ ಬಲಿಷ್ಠ ರೋಗ ನಿರೋಧಕ ಶಕ್ತಿಯನ್ನು ಉಂಟುಮಾಡುತ್ತದೆ ಎಂದಿದ್ದಾರೆ. ಅಲ್ಲದೇ ಈ ಲಸಿಕೆಯನ್ನು ಖುದ್ದು ತಮ್ಮ ಮಗಳಿಗೂ ಕೊಡಲಾಗಿದೆ ಎಂದು ಪುಟಿನ್‌ ಹೇಳುತ್ತಿದ್ದಾರೆ.

ವೈಜ್ಞಾನಿಕ ವಲಯದಲ್ಲಿ ಅನುಮಾನ
ಕೆಲವು ಔಷಧೋದ್ಯಮಿಗಳು ಹಾಗೂ ಪರಿಣತರು ಈ ವಿಚಾರದಲ್ಲಿ ಅನುಮಾನ-ಆತಂಕವನ್ನಂತೂ ವ್ಯಕ್ತಪಡಿಸುತ್ತಲೇ ಇದ್ದಾರೆ. ಮುಖ್ಯವಾಗಿ, ರಷ್ಯಾದ ಈ ಲಸಿಕೆಯು ಕ್ಲಿನಿಕಲ್‌ ಟ್ರಯಲ್‌ನ ಮೂರನೇ ಹಂತವನ್ನು/ಪೂರ್ಣ ಮಾನವ ಪ್ರಯೋಗವನ್ನು ಸರಿಯಾಗಿ ಕೈಗೊಂಡಿಲ್ಲ. ಕ್ಲಿನಿಕಲ್‌ ಟ್ರಯಲ್‌ನಲ್ಲಿ 3ನೇ ಹಂತವು ಬಹುಮುಖ್ಯವಾಗಿದ್ದು, ಕೇವಲ 38 ಜನರ ಮೇಲಷ್ಟೇ ಪ್ರಯೋಗ ನಡೆಸಿದೆ. 3ನೇ ಹಂತದ ಟ್ರಯಲ್‌ ನಡೆಯಲು ತಿಂಗಳುಗಟ್ಟಲೇ ಸಮಯ ಹಿಡಿಯುತ್ತದೆ, ಅಲ್ಲದೇ, ಸಾವಿರಾರು ಜನರ ಮೇಲಿನ ಪ್ರಯೋಗದ ನಂತರವೇ ಅದರ ಯಶಸ್ಸನ್ನು ನಿರ್ಧರಿಸ ಬೇಕಾ ಗುತ್ತದೆ. ರಷ್ಯನ್‌ ಸರ್ಕಾರ ಬೆರಳೆಣಿಕೆಯ ಜನರನ್ನಷ್ಟೇ ಪರೀಕ್ಷಿಸಿ, ಆತುರಾತುರವಾಗಿ ಲಸಿಕೆಗೆ ಒಪ್ಪಿಗೆ ನೀಡಿರುವುದೇಕೆ? ರಷ್ಯಾ ವಿಜ್ಞಾನ ಮತ್ತು ಸುರಕ್ಷತೆಯ ವಿಷಯವನ್ನು ಕಡೆಗಣಿಸಿ ಪ್ರತಿಷ್ಠೆಯನ್ನು ಆದ್ಯತೆಯಾಗಿಸಿಕೊಳ್ಳುತ್ತಿದೆ ಎಂಬ ಆರೋಪ ವ್ಯಕ್ತವಾಗುತ್ತಿದೆ. ರೋಗನಿರೋಧಕ ಪ್ರತಿಕ್ರಿಯೆ ಹೆಚ್ಚುಸುವು ದಷ್ಟೇ ಲಸಿಕೆಯ ಯಶಸ್ಸನ್ನು ಅವಲಂಬಿಸಿರುವುದಿಲ್ಲ, ಬದಲಾಗಿ, ಅದು ಜನರ ಆರೋಗ್ಯದ ಮೇಲೆ ದೀರ್ಘಾವಧಿ ದುಷ್ಪರಿಣಾಮ ಉಂಟುಮಾಡದಂತೆ ಖಾತ್ರಿಪಡಿಸಿಕೊಳ್ಳುವುದೂ ಮುಖ್ಯ ಎನ್ನುತ್ತಾರೆ ಅಮೆರಿಕದ ಅಲರ್ಜಿ ಮತ್ತು ಸೋಂಕು ಅಧ್ಯಯನ ಕೇಂದ್ರದ ನಿರ್ದೇಶಕ, ವಿಜ್ಞಾನಿ ಡಾ. ಆಂಥನಿ ಫೌಚಿ.

ಆದರೆ ರಷ್ಯನ್‌ ಸರ್ಕಾರ ಮತ್ತು ಗಮಲೇಯ ಸಂಶೋಧನಾ ಸಂಸ್ಥೆಯ ವಕ್ತಾರರು, ಲಸಿಕೆಯ ವಿಷಯದಲ್ಲಂತೂ ಭರವಸೆಯ ಮಾತನಾಡುತ್ತಿದ್ದಾರೆ. “”ಅಮೆರಿಕನ್‌ ತಜ್ಞರು, ರಷ್ಯಾದ ವಿರುದ್ಧದ ಅಸಹನೆಯಿಂದಾಗಿಯೇ ಈ ರೀತಿ ಮಾಡುತ್ತಿ¨ªಾರೆ, ಅವರಿಗಿಂತ ನಾವೇ ಮೊದಲು ಲಸಿಕೆ ಅಭಿವೃದ್ಧಿಯಲ್ಲಿ ಯಶಸ್ವಿ ಯಾಗಿದ್ದು ಈ ಅಸಹನೆಗೆ ಕಾರಣ” ಎನ್ನುತ್ತಾರೆ ರಷ್ಯನ್‌ ಸರ್ಕಾರದ ವಕ್ತಾರ ನಿಕೋಲಾಯ್‌ ವ್ಲಾಫ‌¤ರ್‌. ಇದೇ ವೇಳೆಯಲ್ಲೇ, ಫಿಲಿಪ್ಪೀನ್ಸ್‌ನ ಅಧ್ಯಕ್ಷ ರೋಡ್ರಿಗೋ ಡುಟರ್ಟೆ ಸಹ ತಮಗೆ ರಷ್ಯಾದ ವೈಜ್ಞಾನಿಕ ಸಾಮರ್ಥ್ಯದ ಮೇಲೆ ನಂಬಿಕೆ ಯಿದ್ದು, ತಾವು ರಷ್ಯಾದ ಈ ಪ್ರಯತ್ನದ ಭಾಗವಾಗಲು ಸಿದ್ಧವಿರುವುದಾಗಿ ಹೇಳಿ¨ªಾರೆ. ಲಸಿಕೆಯನ್ನು ನನ್ನ ಮೇಲೆ ಪ್ರಯೋಗಿಸಿ ಎನ್ನುತ್ತಾರೆ ಡುಟರ್ಟೆ.

ಹಾಗಿದ್ದರೆ, ಈ ತಿಂಗಳಿಂದಲೇ ರಷ್ಯನ್ನರೆಲ್ಲರಿಗೂ ಈ ವ್ಯಾಕ್ಸಿನ್‌ ಲಭ್ಯವಾಗಲಿದೆಯೇ? ಎನ್ನುವ ಪ್ರಶ್ನೆಗೆ, ಇಲ್ಲ ಎಂದು ಉತ್ತರಿಸುತ್ತಾರೆ ರಷ್ಯಾದ ಆರೋಗ್ಯ ಸಚಿವರು. ಅಕ್ಟೋಬರ್‌ ತಿಂಗಳಿಂದ ದೊಡ್ಡ ಪ್ರಮಾಣದಲ್ಲಿ ಈ ಲಸಿಕೆಯ ಉತ್ಪಾದನೆ ಆರಂಭವಾಗಲಿದ್ದು, ಸದ್ಯಕ್ಕೆ ಹೈ ರಿಸ್ಕ್ ಗ್ರೂಪ್‌ಗ್ಷ್ಟೇ…ಅಂದರೆ, ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಮತ್ತು ಸ್ವಯಂ ಸೇವಕರಿಗೆ ಈ ತಿಂಗಳಿಂದ ಲಸಿಕೆ ಕೊಡಲಿದ್ದೇವೆ ಎನ್ನುತ್ತಾರವರು.

ಲಸಿಕೆ ಪ್ರಯೋಗದಲ್ಲಿ ದೇಶಗಳು
ಈಗ ಜಗತ್ತಿನಾದ್ಯಂತ 26ಕ್ಕೂ ಹೆಚ್ಚು ಲಸಿಕೆಗಳ ಮೊದಲ ಒಂದೆರಡು ಹಂತದ ಟ್ರಯಲ್‌ಗ‌ಳನ್ನು ದಾಟಿದ್ದು, ಇವುಗಳಲ್ಲಿ ಕನಿಷ್ಠ ನಾಲ್ಕು ಲಸಿಕೆಗಳು ಮಾತ್ರ ಮೂರನೇ ಹಂತದ ಟ್ರಯಲ್‌ನಲ್ಲಿವೆ ಎನ್ನುತ್ತದೆ ವಿಶ್ವಸಂಸ್ಥೆ. ಗಮನಾರ್ಹ ಸಂಗತಿಯೆಂದರೆ, ವಿಜ್ಞಾನ ಲೋಕದ ಇತಿಹಾಸದಲ್ಲೇ ಈ ಪ್ರಮಾಣದಲ್ಲಿ ಜಗದಗಲ ಏಕ ಕಾಲಕ್ಕೆ ಒಂದು ರೋಗದ ವಿರುದ್ಧ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿರಲೇ ಇಲ್ಲ.
ಇದೇನೇ ಇದ್ದರೂ, ರಷ್ಯಾ ಮಾತ್ರ ಕೋವಿಡ್‌ ವಿರುದ್ಧ ಮೊದಲ ಲಸಿಕೆಯ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಲಸಿಕೆ ಪರಿಣಾಮಕಾರಿ ಯೆಂದು ಸಾಬೀತಾದರೆ, ರಷ್ಯಾ ಜಾಗತಿಕ ವೈಜ್ಞಾನಿಕ ಇತಿಹಾಸದಲ್ಲೇ ಬಹು ಎತ್ತರದ ಹೆಸರು ಪಡೆಯಲಿದೆ. ಆದರೆ, ಈ ಲಸಿಕೆ ಸಾರ್ವಜನಿಕವಾಗಿ ಲಭ್ಯವಾದರೂ, ಇದನ್ನು ದೇಶಗಳು ಬಳಸಲು ಸಿದ್ಧವಾಗುತ್ತವೆಯೇ ಎನ್ನುವ ಪ್ರಶ್ನೆಗಂತೂ ಉತ್ತರವಿಲ್ಲ.

ಭಾರತದಲ್ಲೂ ವೇಗ ಪಡೆದ ಪ್ರಯತ್ನ
ಭಾರತದಲ್ಲೂ ಲಸಿಕೆ ಸಂಶೋಧನೆ ವೇಗ ಪಡೆದಿದ್ದು, ಮೂರು ಲಸಿಕೆಗಳೀಗ ಕ್ಲಿನಿಕಲ್‌ ಟ್ರಯಲ್‌ಗ‌ಳ ವಿವಿಧ ಹಂತದಲ್ಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳಿದೆ. ಇವುಗಳಲ್ಲಿ ಭಾರತ್‌ ಬಯೋಟೆಕ್‌ ಲಸಿಕೆ ಹಾಗೂ ಜೈಡಸ್‌ ಕ್ಯಾಡಿಲಾದ ಡಿಎನ್‌ಎ ಲಸಿಕೆ ಮೊದಲ ಹಂತದ ಕ್ಲಿನಿಕಲ್‌ ಟ್ರಯಲ್‌ನಲ್ಲಿ ಯಶಸ್ವಿಯಾಗಿದ್ದು, ಎರಡನೇ ಹಂತವನ್ನು ಪ್ರವೇಶಿಸಲಿವೆ. ಇನ್ನು ಸೀರಂ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ, ಬಯೋಕಾನ್‌ ಕೂಡ ಲಸಿಕೆಯ ಸಂಶೋಧನೆಯಲ್ಲಿ ತೊಡಗಿವೆ. ಗಮನಾರ್ಹ ಸಂಗತಿಯೆಂದರೆ, ಬಹುನಿರೀಕ್ಷಿತ ಆಕ್ಸ್‌ಫ‌ರ್ಡ್‌ ವ್ಯಾಕ್ಸಿನ್‌ ಯಶಸ್ವಿಯಾದರೆ, ಅದನ್ನು ಬೃಹತ್‌ ಪ್ರಮಾಣದಲ್ಲಿ ಉತ್ಪಾದಿಸುವ ಒಪ್ಪಂದ ಮಾಡಿಕೊಂಡಿರುವುದು ಪುಣೆಯಲ್ಲಿ ಮುಖ್ಯ ಉತ್ಪಾದನಾ ಘಟಕ ಹೊಂದಿರುವ ಸೀರಂ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾ.

ಜಗದಗಲ ಸಂಶೋಧನೆ
ಕೋವಿಡ್‌ ವಿರುದ್ಧ ಲಸಿಕೆ ಅಭಿವೃದ್ಧಿಪಡಿಸಲು ಜಗತ್ತಿನ ವಿವಿಧ ಸಂಶೋಧನಾ ಸಂಸ್ಥೆಗಳು ಹಗಲುರಾತ್ರಿ ಶ್ರಮಿಸುತ್ತಿವೆ.

ಅಮೆರಿಕದಲ್ಲಿ ಮಾಡರ್ನಾ, ಜಾನ್ಸನ್‌ ಆ್ಯಂಡ್‌ ಜಾನ್ಸನ್‌, ಫಿಜರ್‌ ಸಂಸ್ಥೆಗಳು ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ನ ಆರಂಭಿಕ ಹಂತಗಳಲ್ಲಿ ಯಶಸ್ವಿಯಾಗಿದ್ದರೆ, ಜರ್ಮನಿಯ ಬಯೋ ಎನ್‌ಟೆಕ್‌ ಕೂಡ ಸಂಶೋಧನೆಯಲ್ಲಿ ತೊಡಗಿದ್ದು, ಅದು ಅಮೆರಿಕದ ಫಿಜರ್‌ ಸಂಸ್ಥೆಯೊಂದಿಗೆ ಸಂಶೋಧನೆಯಲ್ಲಿ ಕೈಜೋಡಿಸಿದೆ. ಈ ಎಲ್ಲಕ್ಕೂ ಐರೋಪ್ಯ ರಾಷ್ಟ್ರಗಳು, ಜಪಾನ್‌ ಸೇರಿದಂತೆ ವಿವಿಧ ದೇಶಗಳ ಲಸಿಕೆ ಸಂಶೋಧನೆ ಹಾಗೂ ಉತ್ಪಾದನಾ ಕಂಪೆನಿಗಳು ಸಹಕರಿಸುತ್ತಿವೆ. ಭಾರತದ ಹಲವು ಸಂಶೋಧನಾ ಸಂಸ್ಥೆಗಳೂ ಈ ರೀತಿಯ ಸಹಕಾರದಲ್ಲಿ ಪಾಲುದಾರರಾಗಿವೆ.

ಕೋವಿಡ್‌ ವಿರುದ್ಧದ ಲಸಿಕೆ ಸಂಶೋಧನೆಯಲ್ಲಿ ಹೆಚ್ಚು ಸದ್ದು ಮಾಡಿರುವುದು ಆಕ್ಸ್‌ಫ‌ರ್ಡ್‌ ವಿಶ್ವವಿದ್ಯಾಲಯ ಸಿದ್ಧಪಡಿಸಿರುವ ಲಸಿಕೆ. ಇದೂ ಸಹ ಪ್ರಮುಖ ಪ್ರಯೋಗ ಹಂತದಲ್ಲಿದ್ದು, ಅದರ 2 ಮತ್ತು 3ನೇ ಕ್ಲಿನಿಕಲ್‌ ಟ್ರಯಲ್‌ಗ‌ಳು ಹಲವೆಡೆ ನಡೆಯುತ್ತಿವೆ. ಭಾರತ ಸೇರಿದಂತೆ, ಹಲವು ದೇಶಗಳು ಆಕ್ಸ್‌ಫ‌ರ್ಡ್‌ ವಿವಿಯ ಲಸಿಕೆಯ ಮೇಲೆ ಭರವಸೆ ವ್ಯಕ್ತಪಡಿಸುತ್ತಿದ್ದು, ಅದು ಯಶಸ್ವಿಯಾಗಲೆಂಬ ನಿರೀಕ್ಷೆಯಲ್ಲಿವೆ.

ಚೀನಾದಲ್ಲೂ ಲಸಿಕೆ ಸಂಶೋಧನೆ ದೊಡ್ಡ ಮಟ್ಟದಲ್ಲೇ ಆಗುತ್ತಿದ್ದು, ಅಲ್ಲಿ ಕ್ಯಾನ್‌ಸೀನೋ ಬಯಾಲಾಜಿಕ್ಸ್‌, ಸಿನೋವ್ಯಾಕ್‌ ಬಯೋಟೆಕ್‌ ಮತ್ತು ಮುಖ್ಯವಾಗಿ ಸಿನೋಫಾರ್ಮ್ ಕೋವಿಡ್‌ ವಿರುದ್ಧ ಲಸಿಕೆ ಹಾಗೂ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಯಲ್ಲಿ ತೊಡಗಿವೆ. ಚೀನಿ ಸರ್ಕಾರ 143 ಶತಕೋಟಿ ಡಾಲರ್‌(1 ಟ್ರಿಲಿಯನ್‌ ಯುವಾನ್‌) ಆರ್ಥಿಕ ಅನುದಾನವನ್ನು ಈ ಸಂಸ್ಥೆಗಳಿಗೆ ಒದಗಿಸಿದೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

1-kanchi

Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.