8 ತಿಂಗಳ ಮಗು ಕಾಪಾಡಿದ ವೈದ್ಯರು
Team Udayavani, Aug 12, 2020, 6:38 AM IST
ಸಾಂದರ್ಭಿಕ ಚಿತ್ರ
ಕೊಚ್ಚಿ: ಉಪಾಹಾರ ಸೇವನೆ ವೇಳೆ ಮಗುವಿನ ಶ್ವಾಸಕೋಶದೊಳಗೆ ಆಕಸ್ಮಿಕವಾಗಿ ಸೇರಿಕೊಂಡ ಆಹಾರದ ತುಣುಕನ್ನು ಕೇರಳ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ವೈದ್ಯರ ಕೃಪೆಯಿಂದ 8 ತಿಂಗಳ ಹಸುಗೂಸು ಪ್ರಾಣಾಪಾಯದಿಂದ ಪಾರಾಗಿದೆ.
ಕೇಕ್ ಹಾಗೂ ರಸ್ಕಿನ ತುಣುಕುಗಳನ್ನು ಮಗುವಿಗೆ ಆಹಾರವಾಗಿ ನೀಡಲಾಗಿತ್ತು. ಹಠಾತ್ತನೆ ಕೆಮ್ಮು ಬಂದಿದ್ದರಿಂದ ರಸ್ಕಿನ ಕಣಗಳು ಅನ್ನನಾಳದ ಮೂಲಕ ಶ್ವಾಸಕೋಶವನ್ನು ಸೇರಿದೆ. ಉಸಿರಾಟ ಕಷ್ಟವಾದ ಕಾರಣ ಕೂಡಲೇ ಮಗುವನ್ನು ಕೊಚ್ಚಿನ್‌ನ ಅಮೃತ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಗೆ ದಾಖಲಿಸಿ, ಫಾರಿನ್ ಬಾಡಿಯನ್ನು ಪರೀಕ್ಷೆಗೊಳಪಡಿಸಲಾಯಿತು.
ಏನಿದು “ಫಾರಿನ್ ಬಾಡಿ’?: “ದೇಹಕ್ಕೆ ಮುಳ್ಳು ಚುಚ್ಚಿದಾಗ ಅಥವಾ ನಾಣ್ಯ ಇತ್ಯಾದಿ ವಸ್ತುಗಳು ಒಳ ಸೇರಿದಾಗ ಆ ದೇಹವನ್ನು ಫಾರಿನ್ ಬಾಡಿ ಎನ್ನುತ್ತೇವೆ. ಮಗುವಿನ ಫಾರಿನ್ ಬಾಡಿಯ ಒಳಗೆ ಬ್ರಾಂಕೋಸ್ಕೋಪಿಯನ್ನು ತೂರಿಸಿ, ಅದರಲ್ಲಿನ ಕ್ಯಾಮೆರಾದ ಮೂಲಕ ಶ್ವಾಸನಾಳದ ಸ್ಥಿತಿಗತಿಗಳನ್ನು ಪರಿಶೀಲಿಸಿ ಕೇವಲ 30 ನಿಮಿಷಗಳಲ್ಲಿ ರಸ್ಕಿನ ತುಣುಕುಗಳನ್ನು ಹೊರತೆಗೆದೆವು’ ಎಂದು ಆಸ್ಪತ್ರೆಯ ತಜ್ಞ ಡಾ. ಟಿಂಕು ಜೋಸೆಫ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Kiccha Sudeepa: ಕ್ರಿಸ್ಮಸ್ ಗೆ ಬರುತ್ತಿದೆ ʼಮ್ಯಾಕ್ಸ್ʼ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.