ಜೀವಯಾನ: ಅನುಭವದಿಂದ ಕಲಿತುಕೊಳ್ಳೋಣ


Team Udayavani, Aug 12, 2020, 12:30 PM IST

ಅನುಭವದಿಂದ ಕಲಿತುಕೊಳ್ಳೋಣ

ದೇವರು ನಮಗೆ ಬದುಕನ್ನಷ್ಟೇ ಕೊಟ್ಟಿಲ್ಲ; ಅದರ ಜತೆ ಸಾಧ್ಯತೆಗಳ ವಿಶಿಷ್ಟವಾದ ಕೀಲಿ ಗೊಂಚಲನ್ನೂ ಕೊಟ್ಟಿದ್ದಾನೆ. ಅವುಗಳನ್ನು ಪ್ರಯೋಗಿಸಿ ಯಾವುದರಲ್ಲಿ ಯಾವ ಸಂಪತ್ತು ಇದೆ ಎಂದು ನೋಡಬೇಕು. ಅದೇ ನಮ್ಮ ಭವಿಷ್ಯ. ಈ ತಿಳಿವಿನ ಬೆಳಕು ನಮ್ಮೊಳಗೆ ಪ್ರಜ್ವಲಿಸಲು ಧರ್ಮ ಗ್ರಂಥಗಳು, ಸದ್ಗುರುಗಳ ಮಾರ್ಗದರ್ಶನ, ಹಿರಿಯರ ಅನುಭವದ ಮಾತುಗಳಲ್ಲಿನ ಸಾರ ಎಲ್ಲದರ ಸಹಾಯ ಖಂಡಿತ ಬೇಕು.

ಪ್ರತಿದಿನವೂ ಹೊಸದಾಗಿ ಮೂಡಣದಲ್ಲಿ ಮೂಡಿಬರುವ ನೇಸರನಂತೆ “ಜೀವಯಾನ’ವೂ ದಿನಂಪ್ರತಿಯ ಹೊಸ ಬದುಕಿಗೆ ಖುಷಿ ನೀಡುವ ವಿಚಾರಗಳೊಂದಿಗೆ ಈ ಅಂಕಣ ಮೂಡಿಬರಲಿದೆ.

ಜ್ಞಾನಿಗಳು, ವಿಜ್ಞಾನಿಗಳು, ಚಿಂತಕರು, ಸಾಧಕರ ಪ್ರೇರಣದಾಯಕ ಸಂಗತಿಗಳಲ್ಲಿ ಆಯ್ದವುಗಳನ್ನು ಇಲ್ಲಿ ಸಂಗ್ರಹಿಸಿ ಕೊಡುತ್ತೇವೆ. ನಮ್ಮೆಲ್ಲರ ಸಂತಸದ ಬದುಕಿಗೆ ದೀವಿಗೆಯಾಗಲೆಂಬುದು ನಮ್ಮ ಆಶಯ. ಹೊಸೆದ ಬತ್ತಿ ಜ್ಞಾನದ ತೈಲದಲ್ಲಿ ಉರಿಯುವ ಸ್ಫೂರ್ತಿದೀಪ “ಜೀವಯಾನ’ ಇಂದಿನಿಂದ ಆರಂಭ.

ಒಮ್ಮೆ ರಾಮಕೃಷ್ಣ ಪರಮಹಂಸರ ಬಳಿಗೆ ಒಬ್ಟಾಕೆ ಹೆಂಗಸು ತನ್ನ ಮಗನೊಂದಿಗೆ ಬಂದಳು.
ಗುರುದೇವಾ, ನನ್ನ ಮಗನಿಗೆ ಸಿಹಿತಿಂಡಿ ತಿನ್ನುವುದು ಚಟದಂತೆ ಆಗಿಬಿಟ್ಟಿದೆ. ದಿನಂಪ್ರತಿ ಸಿಹಿಗಾಗಿ ನನ್ನನ್ನು ಪೀಡಿಸುತ್ತಾನೆ. ಅವನಿಗೆ ಜಿಲೇಬಿ, ಮಿಠಾಯಿ, ಹೋಳಿಗೆ ಕೊಟ್ಟು ಕೊಟ್ಟು ಸಾಕಾಗಿದೆ. ಮೇಲಾಗಿ ನಾನೇನೂ ಸ್ಥಿತಿವಂತಳಲ್ಲ. ಪ್ರತೀ ದಿನ ಇವನಿಗೆ ಸಿಹಿ ತಿಂಡಿ ಕೊಡುವುದೆಲ್ಲಿಂದ? ಅಲ್ಲದೆ ಸಿಹಿ ತಿಂದು ಅವನ ಹಲ್ಲುಗಳೂ ಹಾಳಾಗಿವೆ. ನಾನು ಹೇಳಿದರೆ ಕೇಳುತ್ತಿಲ್ಲ, ನೀವಾದರೂ ಹೇಳಿ ಎಂದಳು ಆಕೆ.

ರಾಮಕೃಷ್ಣರು ಬಾಲಕನ ಕಡೆಗೊಮ್ಮೆ, ಅವನ ತಾಯಿಯ ಕಡೆಗೊಮ್ಮೆ ನೋಡಿದರು. ಹುಡುಗನಿಗೆ ಏನೂ ಹೇಳದೆ ಎರಡು ವಾರ ಬಿಟ್ಟು ಬರುವಂತೆ ತಿಳಿಸಿದರು.

ಎರಡು ವಾರ ಕಳೆದವು. ತಾಯಿ ಮಗನೊಂದಿಗೆ ಮತ್ತೆ ಪರಮಹಂಸರ ಬಳಿ ಬಂದಳು. ಆಗ ಶ್ರೀ ರಾಮಕೃಷ್ಣ ಪರಮ ಹಂಸರು ಹುಡುಗನನ್ನು ವಾತ್ಸಲ್ಯದಿಂದ ಹತ್ತಿರ ಕುಳ್ಳಿರಿಸಿ ಕೊಂಡು ಅತಿಯಾಗಿ ಸಿಹಿ ತಿನ್ನುವುದರಿಂದ ಆಗುವ ತೊಂದರೆ, ಅಮ್ಮನಿಗೆ ಉಂಟಾಗುವ ಕಷ್ಟಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದರು. ಅವರ ಮಾತುಗಳು ಬಾಲಕನ ಹೃದಯಕ್ಕೆ ನಾಟಿದವು. ಇನ್ನು ಮುಂದೆ ದಿನವೂ ಅಮ್ಮನನ್ನು ಸಿಹಿಗಾಗಿ ಪೀಡಿಸುವುದನ್ನು ಬಿಟ್ಟುಬಿಡುತ್ತೇನೆ ಎಂದು ಒಪ್ಪಿಕೊಂಡ ಆತ. ರಾಮಕೃಷ್ಣರು ಅವನನ್ನು ಹರಸಿ, ಆಟವಾಡಲು ಹೊರಕ್ಕೆ ಕಳುಹಿಸಿದರು.

“ನೀವು ಇದನ್ನು ಮೊನ್ನೆಯೇ ಹೇಳಬಹುದಿತ್ತಲ್ಲ ಗುರುದೇವಾ’ ಎಂದು ಮಗ ಹೊರಗೆ ಹೋದ ಮೇಲೆ ಅವನಮ್ಮ ಪ್ರಶ್ನಿಸಿದಳು. ರಾಮಕೃಷ್ಣ ಪರಮಹಂಸರು ಮುಗುಳ್ನಕ್ಕು ಹೇಳಿದರು, “ದಿನವೂ ಸಿಹಿ ತಿನ್ನುವ ಅಭ್ಯಾಸ ನನಗೂ ಇತ್ತು. ಎರಡು ವಾರಗಳ ಹಿಂದೆ ನೀವು ಬಂದಾಗ ಅದೇ ನನಗೆ ಸಮಸ್ಯೆ ಯಾದದ್ದು. ನಾನೇ ಪ್ರತೀ ದಿನ ಸಿಹಿ ತಿನ್ನುವವನಾಗಿ “ನೀನು ತಿನ್ನಬಾರದು’ ಎಂದು ಅವನಿಗೆ ಉಪದೇಶಿಸುವುದು ಹೇಗೆ? ನಮ್ಮ ನಡೆಯೂ ನುಡಿಯೂ ಒಂದೇ ಆಗಿದ್ದಾಗ ಮಾತ್ರ ಮಾತಿಗೆ ಬೆಲೆ. ಆಗ ಮಾತ್ರ ಮಾತು ಪ್ರಾಮಾಣಿಕವಾಗಿರುತ್ತದೆ, ಪರಿಣಾಮ ಬೀರುತ್ತದೆ’ ಎಂದರು ಶ್ರೀ ರಾಮಕೃಷ್ಣರು.

ಟಾಪ್ ನ್ಯೂಸ್

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

1-horoscope

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು, ಅನಿರೀಕ್ಷಿತ ಧನಾಗಮ ಸಂಭವ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Puttur: ಇದು ಅಜಿತರ ಸಾಹಸ : ರಬ್ಬರ್‌ ತೋಟದಲ್ಲಿ ಕಾಫಿ ಘಮ ಘಮ

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kasaragod: ನಿದ್ದೆಯಲ್ಲಿದ್ದ ಗಂಡು ಮಗು ಸಾ*ವು

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ

Kundapura: ಕಾಂತಾರ ಸಿನೆಮಾದೊಂದಿಗೆ ಪ್ರಸಿದ್ಧಿ ಪಡೆದ ಕೆರಾಡಿ ಕಂಬಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಇಂದಿನಿಂದ ಎಂಜಿಎಂ ಕಾಲೇಜಿನ ಅಮೃತ ಮಹೋತ್ಸವ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Photo of female commando with Modi goes viral: Was it real?

Commando: ಮೋದಿ ರಕ್ಷಣೆಯ ಮಹಿಳಾ ಕಮಾಂಡೋ ಫೋಟೊ ವೈರಲ್:‌ ಏನಿದರ ಅಸಲೀಯತ್ತು?

mohammed shami

‌Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!

SPB: ತಿರುವಳ್ಳೂರ್ ನಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ಮಾರಕ ನಿರ್ಮಾಣ

SPB: ಎಸ್‌ಪಿಬಿ ಸ್ಮಾರಕ ನಿರ್ಮಾಣಕ್ಕಾಗಿ ಡಿ.8ರಂದು ಸಂಗೀತ ಕಛೇರಿ

naa ninna bidalare movie releasing today

Sandalwood: ನಿಮ್ಮ ನಿರೀಕ್ಷೆಗೆ ನಾವು ಜವಾಬ್ದಾರರು: ʼನಾ ನಿನ್ನ ಬಿಡಲಾರೆ’ ಇಂದು ತೆರೆಗೆ

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

ದಕ್ಷಿಣ ಭಾರತದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಪರಪ್ಪನ ಅಗ್ರಹಾರದಿಂದಲೇ ಸಂಚು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.