ರಷ್ಯಾ ಲಸಿಕೆಯ ಸುರಕ್ಷತೆ ಬಹಿರಂಗವಾಗಿಲ್ಲ
Team Udayavani, Aug 13, 2020, 6:15 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್ ಗೆ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ರಷ್ಯಾ ಘೋಷಿಸಿದ ಬೆನ್ನಲ್ಲೇ ವಿಶ್ವ ವೈದ್ಯಕೀಯ ಹಾಗೂ ವೈಜ್ಞಾನಿಕ ಸಮುದಾಯದಿಂದ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಮರ್ಪಕ ದತ್ತಾಂಶಗಳಿಲ್ಲದೆಯೇ ರಷ್ಯಾದ ಲಸಿಕೆಯ ಪರಿಣಾಮಕಾರಿತ್ವ ಮತ್ತು ಸುರಕ್ಷತೆಯ ಮಟ್ಟವನ್ನು ಊಹಿಸಲಾಗದು ಎಂದು ಹೈದರಾಬಾದ್‌ನ ಸಿಎಸ್‌ಐಆರ್ ಸೆಂಟರ್ ಫಾರ್ ಸೆಲ್ಯುಲರ್ ಆ್ಯಂಡ್ ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ನಿರ್ದೇಶಕ ರಾಕೇಶ್ ಕೆ.ಮಿಶ್ರಾ ಹೇಳಿದ್ದಾರೆ.
ಲಸಿಕೆಯ ಪರಿಣಾಮಕಾರಿತ್ವ ಮತ್ತು ಸುರಕ್ಷತೆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಇನ್ನೂ ಮೂರನೇ ಹಂತದ ಪ್ರಯೋಗವೂ ಪೂರ್ಣಗೊಂಡಿಲ್ಲ. ದೊಡ್ಡ ಮಟ್ಟದಲ್ಲಿ ಪರೀಕ್ಷೆ ನಡೆಸಿ, 2 ತಿಂಗಳು ಕಾಯಬೇಕಾಗುತ್ತದೆ. ಆದರೆ, ರಷ್ಯಾ ಅದನ್ನು ಮಾಡಿದೆಯೇ, ಮಾಡಿದ್ದರೆ ಅದಕ್ಕೆ ಸಾಕ್ಷ್ಯವನ್ನು ನೀಡಬೇಕಾಗುತ್ತದೆ. ಈ ವಿಚಾರದಲ್ಲಿ ಯಾವುದನ್ನೂ ಗುಟ್ಟಾಗಿಡುವಂತಿಲ್ಲ ಎಂದಿದ್ದಾರೆ.
2 ವಾರಗಳಲ್ಲಿ ಬಿಡುಗಡೆ: ಮತ್ತೂಂದೆಡೆ ರಷ್ಯಾದ ಸ್ಪುಟ್ನಿಕ್ 5 ವಾಕ್ಸಿನ್‌ನ ಮೊದಲ ಹಂತದ ಉತ್ಪಾದನೆ 2 ವಾರಗಳಲ್ಲಿ ಶುರುವಾಗಲಿದೆ ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಸ್ಕೋ ತಿಳಿಸಿದ್ದಾರೆ. ಲಸಿಕೆ ಬೇಕು ಎಂದು ಮುಂದೆ ಬಂದವರಿಗೆ ಮಾತ್ರ ರಷ್ಯಾದಲ್ಲಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Temperature: ಕರಾವಳಿಯಲ್ಲಿ ಹೆಚ್ಚಿದ ಚಳಿಯ ತೀವ್ರತೆ: ಗ್ರಾಮೀಣ ಭಾಗದಲ್ಲಿ ಹೆಚ್ಚು ಕಚಗುಳಿ
Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.