ಕಲ್ಪನಾ ಚಾವ್ಲಾ – ಉಪಾಸನಾ ; ಕೃಷ್ಣಾ – ಮಂಜು ಶರ್ಮಾ: ಏನಿದು ಪುನರ್ಜನ್ಮದ ರೋಚಕ ವೃತ್ತಾಂತ!?

ತರಂಗಾಂತರಂಗ: ಪುನರ್ಜನ್ಮದ ಘಟನೆಗಳ ಸುತ್ತ ಒಂದು ರೋಚಕ ಸುತ್ತು!

Team Udayavani, Aug 13, 2020, 6:26 PM IST

ಕಲ್ಪನಾ ಚಾವ್ಲಾ – ಉಪಾಸನಾ ; ಕೃಷ್ಣಾ – ಮಂಜು ಶರ್ಮಾ: ಏನಿದು ಪುನರ್ಜನ್ಮದ ರೋಚಕ ವೃತ್ತಾಂತ!?

ಜನ್ಮ ಜನ್ಮಾಂತರದ ಬಂಧ, ಋಣಾನುಬಂಧ, ಏಳೇಳು ಜನ್ಮಗಳ ಬಂಧ… ಇಂತಹ ಹಲವಾರು ಪದಬಳಕೆಗಳನ್ನು ಜನರ ಆಡುಮಾತಿನಲ್ಲಿ ನಾವು ಪ್ರತಿನಿತ್ಯವೆಂಬಂತೆ ಕೇಳುತ್ತಲೇ ಇರುತ್ತೇವೆ. ದೇಹ ಮಾತ್ರವೇ ನಶಿಸುತ್ತದೆ, ಆತ್ಮಕ್ಕೆ ಸಾವಿಲ್ಲ ಎಂಬ ನಂಬಿಕೆಯೂ ಇದೆ. ಪುನರ್ಜನ್ಮ ಎಂಬುದು ಸಾಮಾನ್ಯರಿಗೆ ಭಯಮಿಶ್ರಿತ ಕುತೂಹಲದ, ತತ್ವಜ್ಞಾನಿಗಳಿಗೆ ಶೋಧನೆಯ, ವಿಜ್ಞಾನಿಗಳಿಗೆ ಅನ್ವೇಷಣೆಯ ಮತ್ತು ನಾಸ್ತಿಕರಿಗೆ ‘ಹಾಗೇನಿಲ್ಲ ಬಿಡಿ’ ಎಂಬ ಕುತೂಹಲದ ವಿಷಯವಾಗಿದೆ. ಈ ಹಿನ್ನಲೆಯಲ್ಲಿ ಪುನರ್ಜನ್ಮ ವಿಷಯದ ಕುರಿತಾಗಿ ಒಂದಷ್ಟು ವಿಚಾರಗಳನ್ನು ನಿಮಗೆ ತಿಳಿಸಿಕೊಡುವ ಪ್ರಯತ್ನ ನಮ್ಮದು.

ಈ ಹಿಂದೆ ‘ತರಂಗ’ ವಾರಪತ್ರಿಕೆಯಲ್ಲಿ ಪ್ರಕಟಗೊಂಡು ಜನಮನ್ನಣೆ ಪಡೆದುಕೊಂಡಿದ್ದ ಈ ಲೇಖನದ ಯಥಾವತ್ ರೂಪ ಇದೀಗ ನಿಮ್ಮ ಮುಂದೆ…

– ಡಾ| ಎನ್‌. ಗೋಪಾಲಕೃಷ್ಣ

2003ರಲ್ಲಿ ಫೆಬ್ರವರಿ ಒಂದರಂದು ಗಗನ ಯಾತ್ರೆ ಮುಗಿಸಿ, ಕೊಲಂಬಿಯಾ ಸ್ಪೇಸ್‌ ಶಟಲ್‌ನಲ್ಲಿ ಭೂಮಿಗೆ ಮರಳುತ್ತಿದ್ದ, ಭಾರತೀಯ ಸಂಜಾತೆ, ಗಗನಯಾತ್ರಿ ಡಾ| ಕಲ್ಪನಾ ಚಾವ್ಲಾ ಸಾವನ್ನಪ್ಪಿದ್ದು ಈಗ ಇತಿಹಾಸ.

ನಾಲ್ಕು ವರ್ಷಗಳ ಬಳಿಕ ಉತ್ತರ ಪ್ರದೇಶದ ಬುಲಂದ್‌ಶಹರ್‌ ಎಂಬಲ್ಲಿ ಹುಟ್ಟಿದ ಮಗುವೊಂದು ತಾನು ಹಿಂದಿನ ಜನ್ಮದಲ್ಲಿ ಕಲ್ಪನಾ ಚಾವ್ಲಾ ಆಗಿದ್ದೆ, ಈಗ ಇಲ್ಲಿ ಜನಿಸಿದ್ದೇನೆ ಎನ್ನತೊಡಗಿದ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆ ಮಗುವಿನ ಹೆಸರು ಉಪಾಸನಾ.

ಉಪಾಸನಾಗೆ ಈಗ ವಿಮಾನಗಳೆಂದರೆ ಭಯವಂತೆ. ಕಲ್ಪನಾ ಚಾವ್ಲಾ ವಿಮಾನ ದುರಂತದಿಂದಾಗಿಯೇ ಸಾವನ್ನಪ್ಪಿದ್ದಷ್ಟೆ. ಉಪಾಸನಾಳ ತಂದೆ ರಾಜಕುಮಾರ್‌ ಅವರು ಕಲ್ಪನಾ ಚಾವ್ಲಾಳ ಹೆಸರನ್ನೇ ಕೇಳಿಲ್ಲ.

ಆದರೆ ಉಪಾಸನಾ ಮಾತ್ರ ತಾನು ಹಿಂದೆ ಕಲ್ಪನಾ ಚಾವ್ಲಾ ಆಗಿದ್ದೆ, ತನ್ನ ತಂದೆಯ ಹೆಸರು ಬನಾರಸಿದಾಸ್‌ ಚಾವ್ಲಾ ಎನ್ನುತ್ತಿದ್ದಾಳೆ. ಈ ಬಗ್ಗೆ ಇನ್ನೂ ನಿಖರವಾಗಿ ವಿಚಾರಣೆ ನಡೆಸಿದಲ್ಲಿ ಆಕೆ ಕಲ್ಪನಾ ಚಾವ್ಲಾಳೇ ಎಂಬುದು ದೃಢಪಟ್ಟಲ್ಲಿ ಅಪಘಾತ ಸಂಭವಿಸಿದ್ದು ಹೇಗೆ ಎಂಬಿತ್ಯಾದಿ ವಿವರಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.

ಇದನ್ನೂ ಓದಿ: ತರಂಗಾಂತರಂಗ: ಪುನರ್ಜನ್ಮ- ಹುಟ್ಟು, ಸಾವು, ಮರುಹುಟ್ಟು ; ಇವುಗಳ ಗುಟ್ಟೇನು?

ಮಂಜು ಶರ್ಮಾ ಪ್ರಕರಣ
ಮಂಜು ಶರ್ಮಾ ಹುಟ್ಟಿದ್ದು 1969ರ ನವೆಂಬರ್‌ 23ರಂದು. ಅವಳು ಉತ್ತರಪ್ರದೇಶದ ಮಥುರಾ ಜಿಲ್ಲೆಯ ಪಸೌಲಿ ಎಂಬ ಸಣ್ಣ ಊರಿನವಳು.

ಎರಡು ವರ್ಷ ವಯಸ್ಸಿನಲ್ಲಿದ್ದಾಗ ಅದೇ ಜಿಲ್ಲೆಯ ಚೌಮುಹಾ ಗ್ರಾಮಕ್ಕೆ ಸೇರಿದವಳು ತಾನೆಂದು ಹೇಳುತ್ತಿದ್ದಳು. ತನ್ನ ಹಿಂದಿನ ಜನ್ಮದ ಬಗ್ಗೆ ಆಕೆ ವಿವರಣೆ ನೀಡುತ್ತಿದ್ದದನ್ನು ಚೌಮುದಾ ಗ್ರಾಮದಿಂದ ಪಸೌಲಿ ಗ್ರಾಮಕ್ಕೆ ಬಂದಿದ್ದ ಬಾಬುರಾಂ ಎಂಬಾತ ಕೇಳಿಸಿಕೊಂಡ.

ಮಂಜು ಶರ್ಮಾ ಬಾಬುರಾಂನನ್ನು ಕಂಡವಳೇ ಅವನ ಗುರುತು ಹಿಡಿದು, ಅವನ ಸೈಕಲ್‌ ಹಿಡಿದು ನಿಲ್ಲಿಸಿಕೊಂಡು, ‘ನೀವು ನನ್ನ ಚಾ ಚಾ ಬಾಬುರಾಂ ಅಲ್ಲವೇ?’ ಎಂದು ಕೇಳಿದಳು. ‘ಇಲ್ಲ ಮಗು, ನೀನು ಯಾರೆಂದು ನನಗೆ ಗೊತ್ತಿಲ್ಲವಲ್ಲ’ ಎಂದ ಬಾಬುರಾಂ.

ಬಾಬುರಾಂ, ಚೌಮುಹಾ ಗ್ರಾಮಕ್ಕೆ ಮರಳಿದ ಮೇಲೆ ಮಂಜು ಶರ್ಮಾಳ ವಿಷಯವನನ್ನು ತನ್ನಮನೆಯಲ್ಲಿ ತಿಳಿಸಿದ. ಇದನ್ನು ಕೇಳಿದ ಮಂಜು ಶರ್ಮಾಳ ಮನೆಯವರೆಲ್ಲ ಪಸೌಲಿ ಗ್ರಾಮಕ್ಕೆ ಹೋಗಿ ನೋಡಿದರು. ಅವರನ್ನೆಲ್ಲಾ ಕಂಡು ಮಂಜು ಶರ್ಮಾ ಕಣ್ಣೀರಿಟ್ಟಳು. 1965ರಲ್ಲಿ ಬಾವಿಗೆ ಬಿದ್ದು, ಸತ್ತುಹೋದ ತಮ್ಮ ಕೃಷ್ಣಾ ಎಂಬ ಮಗುವೇ ಈಗಿನ ಮಂಜು ಶರ್ಮಾ ಎಂದು ಅವರಿಗೆ ಖಚಿತವಾಯಿತು.

ಈಗ ಎರಡೂ ಕುಟುಂಬಗಳ ಸಮ್ಮತಿಯ ಮೇರೆಗೆ ಮಂಜು ತನ್ನ ಹಿಂದಿನ ತಂದೆ-ತಾಯಿಯ ಮನೆಗೆ ಹೋಗಿ ಬರುತ್ತಿರುತ್ತಾಳೆ. ಆ ಊರಿನಲ್ಲಿ ತನ್ನ ಹಿಂದಿನ ಹಳೆಯ ಸ್ನೇಹಿತೆಯರನೇಕರನ್ನು ಮಂಜು ಗುರುತಿಸಿದ್ದಾಳೆ. ಹಿಂದೆ ತಾನು ಕೃಷ್ಣಾ ಆಗಿದ್ದಾಗ ಆ ಮನೆಯಲ್ಲಿ ತನಗೆ ಪ್ರಿಯವಾಗಿದ್ದ ಕೆಲವು ವಸ್ತುಗಳನ್ನು ಹುಡುಕಿ ತೋರಿಸಿದ್ದಾಳೆ.

ಇದನ್ನೂ ಓದಿ: ಪುರಾಣಗಳಲ್ಲಿ ಪುನರ್ಜನ್ಮದ ಉಲ್ಲೇಖ : ಅಭಿಮನ್ಯುವಿಗೆ ಗರ್ಭಾವಸ್ಥೆಯಲ್ಲೇ ಚಕ್ರವ್ಯೂಹದ ಪಾಠ!

ಕೃಷ್ಣಾ ಬನಿಯಾ ಜನಾಂಗದ, ಅಷ್ಟೇನೂ ಆರ್ಥಿಕವಾಗಿ ಸುಭದ್ರವಾಗಿಲ್ಲದ ಕುಟುಂಬದ ಮಗಳಾಗಿದ್ದಳು. ಅವಳ ತಂದೆ ಆಗಾಗ ಚಿಕ್ಕಪುಟ್ಟ ವ್ಯಾಪಾರ-ವ್ಯವಹಾರ ನಡೆಸುತ್ತಿದ್ದ. 1969ರಲ್ಲಿ ಮಂಜು ಶರ್ಮಾ ಆಗಿ ಮಧ್ಯಮ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಬಂದಿದ್ದಳು. 1977ರಲ್ಲಿ ಪುನರ್ಜನ್ಮ ಪ್ರಕರಣಗಳ ಸಂಶೋಧನೆ ಮಾಡುತ್ತಿದ್ದ ನಿಮ್ಹಾನ್ಸ್‌ನ ಮನೋವಿಜ್ಞಾನ ಪ್ರಾಧ್ಯಾಪಕಿ ಡಾ| ಸತ್ವಂತ್‌ ಪಸ್ರೀಚಾ ಅವರು ಈ ಮಗುವನ್ನು ಭೇಟಿ ಮಾಡಿದಾಗ, ಇವಳು ತನ್ನ ಹಿಂದಿನ ತಂದೆ-ತಾಯಿಯ ಮನೆಗೆ ಆಗಾಗ ಹೋಗಿಬರುತ್ತಿದ್ದಳು.

ಮುಂದೆ ಪಸ್ರೀಚಾ ಅವರು 1988ರಲ್ಲಿ ಪುನಃ ಈಕೆಯನ್ನು ಕಂಡರು. 1985ರಲ್ಲಿ ಮಧ್ಯಮ ವರ್ಗದ ಬ್ರಾಹ್ಮಣ ವರನೊಂದಿಗೆ ಈಕೆಯ ವಿವಾಹವಾಗಿದ್ದಿದು ತಿಳಿದುಬಂತು. ಎರಡು ವರ್ಷದ ಮತ್ತು ಮೂರು ವಾರಗಳ ಮುದ್ದಾದ ಹೆಣ್ಣುಮಕ್ಕಳದ್ದವು.
ಇದನ್ನೂ ಓದಿ: ‘ನನಗೆ ಸಾವಿರಾರು ಜನ್ಮಗಳಾಗಿವೆ ; ಅವೆಲ್ಲದರಲ್ಲೂ ತಂದೆ- ತಾಯಿಗಳಿದ್ದರು ಅದರಲ್ಲಿ ನಿವ್ಯಾರು?’

ಮಂಜುಗೆ ಹಿಂದೆ ಇದ್ದ ನೀರಿನ ಭಯ ಈಗ ಹೊರಟುಹೋಗಿದೆ. ಆಕೆಯನ್ನೀಗ ಹಿಂದಿನ ನೆನಪುಗಳು ಕಾಡುತ್ತಿಲ್ಲ. ಪ್ರಕೃತಿಯಲ್ಲಿ ನಡೆಯುವ ಸಾವಿರಾರು ರಹಸ್ಯಗಳು ಇನ್ನೂ ನಿಗೂಢವಾಗಿಯೇ ಇವೆ; ಎಲ್ಲವನ್ನೂ ಸಾಬೀತುಪಡಿಸುವುದು ಹೇಗೆ ಎನ್ನುವವರೂ ಇದ್ದಾರೆ. ಆದರೆ, ಸಾಬೀತುಪಡಿವುದು ಹೇಗೆ ಎನ್ನುವವರೂ ಇದ್ದಾರೆ. ಆದರೆ, ಸಾಬೀತುಪಡಿಸಲು ಪ್ರಯತ್ನಗಳಂತೂ ನಡೆದೇ ಇವೆ.

ಮಕ್ಕಳು ತಮ್ಮ ಹಿಂದಿನ ಜನ್ಮದ ನೆನೆಪಿನಿಂದ ಕೊಟ್ಟ ವಿವರಗಳ ಆಧಾರದ ಮೇಲೆ ಅಮೆರಿಕಾದ ವರ್ಜೀನಿಯಾ ವಿಶ್ವವಿದ್ಯಾನಿಲಯದ ಸಂಶೋಧಕ ಡಾ| ಅಯಾನ್‌ ಸ್ಟೀವನ್‌ಸನ್‌ ಅವರು ಮೂರು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸಿ ಕಳೆದ 40 ವರ್ಷಗಳಿಂದ ಸಂಶೋಧನೆ ನಡೆಸುತ್ತಾ ಬಂದಿದ್ದಾರೆ.

ಇದನ್ನೂ ಓದಿ: ಮನದಲ್ಲಿದ್ದ ತೀವ್ರ ಬಯಕೆಯೇ ಜಿಂಕೆಯ ಜನ್ಮ ತಾಳಲು ಕಾರಣವಾದ ‘ಜಡ ಭರತ’ನ ರೋಚಕ ಕಥೆ!

ಇದನ್ನೂ ಓದಿ: ತರಂಗಾಂತರಂಗ: ಮಂಕಿ ಮ್ಯಾನ್ ಜ್ಯೋತಿರಾಜು ಹಿಂದಿನ ಜನ್ಮದಲ್ಲಿ ವಾನರ ಸೇನೆಯ ನಾಯಕನಾಗಿದ್ದ ಕಥೆ

ಟಾಪ್ ನ್ಯೂಸ್

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food-Punjab

ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

1-eee

Shiradi: ಬಸ್‌ ಢಿಕ್ಕಿಯಾಗಿ ಪಾದಚಾರಿ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.