18 ತಿಂಗಳು ಟಿಕ್‌ಟಾಕ್‌ನಿಂದ ರಹಸ್ಯ ಮಾಹಿತಿ ಸಂಗ್ರಹ
Team Udayavani, Aug 14, 2020, 5:49 AM IST
ನ್ಯೂಯಾರ್ಕ್: ಚೀನದ ಬೈಟ್‌ಡಾನ್ಸ್ ಮಾಲೀಕತ್ವದ ಕಿರು ವಿಡಿಯೊ ತಾಣ ಟಿಕ್‌ಟಾಕ್ ತಾನು ಎಷ್ಟೇ ಶುದ್ಧವೆಂದು ಹೇಳಿಕೊಂಡರೂ, ಅದರ ಮೇಲಿನ ಅನುಮಾನಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಐಫೋನ್‌ನ ಹೊಸ 14ನೇ ಆವೃತ್ತಿ ಐಒಎಸ್ ಬಿಡುಗಡೆಯಾದಾಗ, ಸಂದೇಶಗಳ ಮಾಹಿತಿಯನ್ನು ಟಿಕ್‌ಟಾಕ್ ಹಿನ್ನೆಲೆಯಲ್ಲಿ ಸಂಗ್ರಹಿಸುತ್ತಿದ್ದುªದ್ದು ಗಮನಕ್ಕೆ ಬಂದಿತ್ತು. ಇದೀಗ ವಾಲ್‌ಸ್ಟ್ರೀಟ್ ಜರ್ನಲ್ ಇನ್ನೊಂದು ಸ್ಫೋಟಕ ಸಂಗತಿ ಬಹಿರಂಗಪಡಿಸಿದೆ.
18 ತಿಂಗಳ ಕಾಲ ಟಿಕ್‌ಟಾಕ್, ಆ್ಯಂಡ್ರಾಯ್ಡ ಮೊಬೈಲ್ ಬಳಕೆದಾರರ ಮ್ಯಾಕ್ ವಿಳಾಸಗಳನ್ನು (ಮೊಬೈಲ್ ಒಂದರಲ್ಲಿ ವೈಫೈ, ಬ್ಲೂಟೂತ್, ಈಥರ್‌ನೆಟ್ ಮೂಲಕ ಸಂಪರ್ಕ ಸಾಧಿಸಲು ಇರುವ ವಿಳಾಸ) ಸಂಗ್ರಹಿಸುತ್ತಲೇ ಇತ್ತು. ಜಾಹೀರಾತಿಗೆ ಬಳಕೆಯಾಗುವ ಈ ಮಾಹಿತಿ ಸಂಗ್ರಹಿಸುವುದಕ್ಕೆ 2015ರಲ್ಲೇ ಗೂಗಲ್ ನಿಷೇಧ ಹಾಕಿದ್ದರೂ, ಟಿಕ್‌ಟಾಕ್ ಲೋಪವೊಂದನ್ನು ಬಳಸಿಕೊಂಡು ಕೃತ್ಯ ಮುಂದುವರಿಸಿತ್ತು. ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ 350 ಆ್ಯಪ್‌ಗ್ಳು ಇದನ್ನು ಮಾಡಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Netherlands: ಇಸ್ರೇಲ್ ಫುಟ್ಬಾಲ್ ಅಭಿಮಾನಿಗಳ ಮೇಲೆ ದಿಢೀರ್ ದಾಳಿ!
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.