ಟ್ಯಾಬ್‌ನಿಂದ ರಾಸುಗಳ ನೈಜ ಮಾಹಿತಿ ಸಂಗ್ರಹಿಸಿ
Team Udayavani, Aug 14, 2020, 10:46 AM IST
ಮಾಲೂರು: ಗ್ರಾಮಗಳಿಗೆ ತೆರಳಿ ಯೂನಿ ತಂತ್ರಜ್ಞಾನ ಮೂಲಕ ಹಸುಗಳ ಮಾಹಿತಿಯನ್ನು ಸಂಗ್ರಹಿಸಲು 23 ಮಂದಿ ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಅತ್ಯಾಧುನಿಕ ತಂತ್ರ ಜ್ಞಾನವುಳ್ಳ ಟ್ಯಾಬ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ಕೆ. ವೈ.ನಂಜೇಗೌಡ ತಿಳಿಸಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿಯ ಸಭಾಂಗಣದಲ್ಲಿ 23 ಮಂದಿಗೆ ಟ್ಯಾಬ್‌ಗಳನ್ನು ವಿತರಿಸಿ ಮಾತನಾಡಿ, ಹಸುಗಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲು ಕೇಂದ್ರ ಸರಕಾರ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಟ್ಯಾಬ್ ನೀಡಿ, ಗ್ರಾಮಗಳಲ್ಲಿ ಹಸುಗಳ ಗರ್ಭಧಾರಣೆ, ಕರು ಹಾಕುವುದು, ಹಾಲಿನ ಸಂಗ್ರಹಣೆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಿದೆ ಎಂದರು.
ಕೋಚಿಮುಲ್ ಹಾಗೂ ಪಶುವೈದ್ಯಕೀಯ ಇಲಾಖೆಯವರು ಗ್ರಾಮಗಳಿಗೆ ತೆರಳಿ ಹಸುಗಳು ಹಾಗೂ ಮಾಲಿಕರ ಹೆಸರನ್ನು ನೋಂದಣೆ ಮಾಡಿಕೊಂಡು ಕಿವಿಗೆ ಓಲೆಯನ್ನು ಹಾಕಿ ಬಾರ್ ಕೋಡ್ ನೀಡುವರು. ಇದೊಂದು ಉತ್ತಮ ತಂತ್ರಜ್ಞಾನವಾಗಿದ್ದು, ಇದರಿಂದ ಹೆಚ್ಚಿನ ಹಾಲು ಸಂಗ್ರಹಣೆಗೂ ಅನುಕೂಲವಾಗುತ್ತಿದೆ. ಕಿವಿಗೆ ಓಲೆ ಹಾಕಿದರೆ ವಿಮೆಯನ್ನು ಮಾಡಿಸಲು ಸಹ ಸಹಕಾರಿಯಾಗುತ್ತದೆ ಎಂದರು.
ಕೃತಕ ಗರ್ಭದಾರಣೆ ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ಹಸುಗಳ ಮಾಲಿಕರಿಂದ ನೈಜ ಮಾಹಿತಿಯನ್ನು ಸಂಗ್ರಹಿಸಿ ಟ್ಯಾಬ್‌ನಲ್ಲಿ ದಾಖಲು ಮಾಡುವಂತೆ ತಿಳಿಸಿದ ಅವರು, ಹಸುಗಳಮಾಲಿಕರು ಸಹ ಮಾಹಿತಿ ನೀಡಿ ಸಹಕರಿಸುವಂತೆ ತಿಳಿಸಿದರು. ಈ ವೇಳೆ ಕೋಚಿಮುಲ್ ಮಹಿಳಾ ನಿರ್ದೇಶಕಿ ಕಾಂತಮ್ಮ, ಅಂಜನಿ ಸೋಮಣ್ಣ, ಉಪವ್ಯವಸ್ಥಾಪಕ ಡಾ.ಚೇತನ್, ವಿಸ್ತರಣಾಧಿಕಾರಿಗಳಾದ ಆರ್.ನಾರಾಯಣಸ್ವಾಮಿ, ಮನೋಹರರೆಡ್ಡಿ, ಹುಲ್ಲೂರಪ್ಪ, ನರಸಿಂಹರೆಡ್ಡಿ, ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.