ಕೆರೆಯಲ್ಲಿ ಆಸ್ಪತ್ರೆ ಘನತ್ಯಾಜ್ಯ ವಿಲೇವಾರಿ
Team Udayavani, Aug 15, 2020, 1:33 PM IST
ಬಂಗಾರಪೇಟೆ: ಆಂಧ್ರದ ನೆಲ್ಲೂರು ಜಿಲ್ಲೆಯ ಆಸ್ಪತ್ರೆಯಲ್ಲಿ ಬಳಸಲಾದ ಘನತ್ಯಾಜ್ಯವನ್ನು ತಾಲೂಕಿನ ಟೆಂಪೋ ಚಾಲಕನೊಬ್ಬ ತಾಲೂಕಿನ ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂ ವ್ಯಾಪ್ತಿಯ ಬನಹಳ್ಳಿ ಗ್ರಾಮದ ಕೆರೆಯಲ್ಲಿ ವಿಲೇವಾರಿ ಮಾಡಿರುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ತಾಲೂಕಿನ ಬನಹಳ್ಳಿ ಗ್ರಾಮದ ಗ್ರಾಪಂ ಮಾಜಿ ಸದಸ್ಯರೊಬ್ಬರ ಪುತ್ರ ಕ್ಯಾಂಟರ್ ಇಟ್ಟುಕೊಂಡಿದ್ದು, ಬಾಡಿಗೆಗೆ ಆಂಧ್ರದ ನೆಲ್ಲೂರಿಗೆ ಹೋಗಿದ್ದಾನೆ. ಈ ವೇಳೆ ಅಲ್ಲಿನ ಆಸ್ಪತ್ರೆಯಲ್ಲಿ ಬಳಸುವ ಘನತ್ಯಾಜ್ಯ ತಂದು ಬನಹಳ್ಳಿ ಕೆರೆಯಲ್ಲಿ ವಿಲೇವಾರಿ ಮಾಡಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧಿಸಿದ್ದಾರೆ. ಈ ವೇಳೆ ಅರ್ಧದಲ್ಲಿಯೇ ಕ್ಯಾಂಟರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.
ಕ್ಯಾಂಟರ್‌ನಲ್ಲಿ ತಂದಿದ್ದ ತ್ಯಾಜ್ಯದಲ್ಲಿ ಆಸ್ಪತ್ರೆಯಲ್ಲಿ ಉಪಯೋಗಿಸುವ ಸಿರೆಂಜ್‌ಗಳು, ಪ್ಲಾಸ್ಟಿಕ್ ಪೈಪ್‌ಗ್ಳು, ವೆಂಟಿಲೇಟರ್‌ಗೆ ಉಪಯೋಗಿಸುವ ಸಲಕರಣಿಗಳು ಇದ್ದು, ಇವುಗಳನ್ನು ಗಮನಿಸಿದ ಗ್ರಾಮಸ್ಥರು ಕೋವಿಡ್ ಆಸ್ಪತ್ರೆಯ ಸಲಕರಣೆಗಳೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದರಿಂದ ಆತಂಕಕ್ಕೆ ಒಳಗಾಗಿರುವ ಗ್ರಾಮಸ್ಥರು ಆಲಂಬಾಡಿ ಜ್ಯೋತೇನಹಳ್ಳಿ ಗ್ರಾಪಂ ಪಿಡಿಒ, ಆಡಳಿತಾಧಿಕಾರಿಗೆ ಮೊಬೈಲ್ ಮೂಲಕ ಸಂಪರ್ಕ ಮಾಡಿದರೂ ಸಿಕ್ಕಿಲ್ಲ. ಕೊರೊನಾದಿಂದ ಈಗಾಗಲೇ ಜನ ಆತಂಕಗೊಂಡಿದ್ದಾರೆ. ಇಂತಹ ಸಮಯದಲ್ಲಿ ಆಂಧ್ರದ ನಲ್ಲೂ ರಿನ ಆಸ್ಪತ್ರೆಯೊಂದರ ಘನ ತ್ಯಾಜ್ಯ ತಂದು ಗ್ರಾಮದ ಕೆರೆಯಲ್ಲಿ ವಿಲೇವಾರಿ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿ, ಚಾಲಕನಿಗೆ ಬುದ್ಧಿಹೇಳಿ ವಾಪಸ್ ಕಳುಹಿಸಿದ್ದೇವೆ ಎಂದು ಬನಹಳ್ಳಿ ಗ್ರಾಮಸ್ಥ ವೆಂಕಟೇಶಪ್ಪ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Byrathi Suresh: ಪವರ್ ಪಾಲಿಟಿಕ್ಸ್, ಶೇರಿಂಗ್, ಕೇರಿಂಗ್ ಯಾವುದೂ ಇಲ್ಲ
Kolara: ಹೈಕೋರ್ಟ್ ಅನುಮತಿ ಬಳಿಕ ಬಿಗಿ ಭದ್ರತೆಯಲ್ಲಿ ಆರೆಸ್ಸೆಸ್ ಪಥಸಂಚಲನ
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.