ಇಂಗ್ಲೆಂಡ್-ಆಸೀಸ್ ಏಕದಿನ ಸರಣಿ ಹಿನ್ನಲೆ ಐಪಿಎಲ್ ಆರಂಭಿಕ ಸುತ್ತಿಗೆ ಸ್ಟಾರ್ ಆಟಗಾರರು ಗೈರು
Team Udayavani, Aug 15, 2020, 4:42 PM IST
ಹೊಸದಿಲ್ಲಿ: ಆಸ್ಟ್ರೇಲಿಯ ಮತ್ತು ಇಂಗ್ಲೆಂಡಿನ ಅನೇಕ ಸ್ಟಾರ್ ಆಟಗಾರರು ಐಪಿಎಲ್ ಪಂದ್ಯಾವಳಿಯ ಆರಂಭಿಕ ಸುತ್ತಿನ ಕೆಲವು ಪಂದ್ಯಗಳಿಗೆ ಗೈರಾಗಲಿದ್ದಾರೆ. ಐಪಿಎಲ್‌ಗೂ ಸ್ವಲ್ಪ ಮೊದಲು ಇಂಗ್ಲೆಂಡ್-ಆಸ್ಟ್ರೇಲಿಯ ನಡುವೆ ತಲಾ 3 ಪಂದ್ಯಗಳ ಏಕದಿನ ಮತ್ತು ಟಿ20 ಸರಣಿ ನಡೆಯಲಿರುವುದೇ ಇದಕ್ಕೆ ಕಾರಣ.
ಆಸ್ಟ್ರೇಲಿಯ ಏಕದಿನ ತಂಡದ ನಾಯಕ ಆ್ಯರನ್ ಫಿಂಚ್, ಸ್ಟೀವನ್ ಸ್ಮಿತ್, ಇಂಗ್ಲೆಂಡಿನ ವಿಶ್ವಕಪ್ ವಿಜೇತ ತಂಡದ ನಾಯಕ ಇಯಾನ್ ಮಾರ್ಗನ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್ ಮೊದಲಾದವರೆಲ್ಲ ಈ ಯಾದಿಯಲ್ಲಿದ್ದಾರೆ. ಇವರ್ಯಾರಿಗೂ ಸೆ. 26ರ ಮೊದಲು ಐಪಿಎಲ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದು. 2020ರ ಐಪಿಎಲ್ ಸೆ. 19ರಿಂದ ಆರಂಭವಾಗಲಿದೆ.
ಸೆ. 16ರ ತನಕ ಸರಣಿ
ಇಂಗ್ಲೆಂಡ್-ಆಸ್ಟ್ರೇಲಿಯ ನಡುವಿನ ಸರಣಿ ಸೆ. 4ರಿಂದ 16ರ ತನಕ ನಡೆಯಲಿದೆ. ಇದು ಮುಗಿದ ಕೂಡಲೇ ಯುಎಇಗೆ ಆಗಮಿಸಿದರೂ ಕ್ರಿಕೆಟಿಗರೆಲ್ಲ 6 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ಹಾಗೆಯೇ 3 ಕೋವಿಡ್ ಟೆಸ್ಟ್‌ಗೆ ಒಳಗಾಗಬೇಕಿದೆ. ಈ ಮೂರೂ ಪರೀಕ್ಷೆಗಳ ವೇಳೆ ನೆಗೆಟಿವ್ ಫಲಿತಾಂಶ ಬಂದರಷ್ಟೇ ಕ್ರಿಕೆಟಿಗರು ಜೈವಿಕ ಸುರಕ್ಷಾ ವಲಯವನ್ನು ಪ್ರವೇಶಿಸಬಹುದಾಗಿದೆ. ಈ ಕ್ವಾರಂಟೈನ್ ನಿಯಮವನ್ನು ಸಡಿಲಿಸಲು ಎಲ್ಲ ಫ್ರಾಂಚೈಸಿಗಳು ಮನವಿ ಮಾಡಿದರೂ ಬಿಸಿಸಿಐ ಇದನ್ನು ತಳ್ಳಿಹಾಕಿದೆ.
ಮುಂಬೈಗೆ ನಷ್ಟವಿಲ್ಲ
ಆಸ್ಟ್ರೇಲಿಯ ಮತ್ತು ಇಂಗ್ಲೆಂಡಿನ ಒಟ್ಟು 29 ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡಲಿದ್ದಾರೆ. ಮುಂಬೈ ಇಂಡಿಯನ್ಸ್ ಹೊರತುಪಡಿಸಿ ಉಳಿದ ಎಲ್ಲ ತಂಡಗಳಲ್ಲೂ ಇಲ್ಲಿನ ಸದಸ್ಯರನ್ನು ಕಾಣಬಹುದು. ಮುಂಬೈ ತಂಡದ ಕ್ರಿಸ್ ಲಿನ್ ಮತ್ತು ನಥನ್ ಕೋಲ್ಟರ್ ನೈಲ್ ಇಂಗ್ಲೆಂಡ್ ಪ್ರವಾಸಕ್ಕಾಗಿ ಆಸ್ಟ್ರೇಲಿಯ ತಂಡಕ್ಕೆ ಆಯ್ಕೆಯಾಗಿಲ್ಲ.
ಇವುಗಳಲ್ಲಿ ಭಾರೀ ಹೊಡೆತ ತಿನ್ನುವ ತಂಡವೆಂದರೆ ರಾಜಸ್ಥಾನ್ ರಾಯಲ್ಸ್. ಬಟ್ಲರ್, ಸ್ಮಿತ್, ಆರ್ಚರ್ ಮೊದಲಾದ ಸ್ಟಾರ್ ಆಟಗಾರರ ಗೈರು ಈ ತಂಡಕ್ಕೆ ಬಾಧಿಸಲಿದೆ. ಸನ್‌ರೈಸರ್ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ಸೇವೆಯನ್ನು ಕಳೆದುಕೊಳ್ಳಲಿದೆ. ಆಗ ಕೇನ್ ವಿಲಿಯಮ್ಸನ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
FIP Padel: ಭಾರತದ ಮೊದಲ ಎಫ್‌ಐಪಿ ಪ್ಯಾಡಲ್ ಟೂರ್ನಮೆಂಟ್ ಆರಂಭ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.