ಯುವ ಸಮುದಾಯ ಮತ್ತು ಭಾರತ
Team Udayavani, Aug 16, 2020, 7:40 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತವು ಸಂಸ್ಕೃತಿ, ಕಲೆ, ಸಾಹಿತ್ಯ ಆಧ್ಯಾತ್ಮಿಕ, ಪುರಾತನ ಇತಿಹಾಸಕ್ಕೆ ಹೆಸರುವಾಸಿಯಾಗಿದೆ.
ಅಲ್ಲದೆ ಜಗತ್ತಿನಲ್ಲಿಯೇ ಅತಿ ಹೆಚ್ಚು (ಶೇ. 65) ಯುವಕರನ್ನು ಹೊಂದಿದ ದೇಶವಾಗಿದೆ.
ದೇಶದಲ್ಲಿ ಮಾನವ ಸಂಪನ್ಮೂಲ ಹೆಚ್ಚಾಗಿದ್ದು, ಯುವಕರೇ ಭಾರತದ ಭದ್ರ ಬುನಾದಿಯಾಗಿದ್ದಾರೆ.
ಯಾವುದೇ ಸಮಸ್ಯೆ ಅಥವಾ ಸಮಾಜದಲ್ಲಿರುವ ತೊಡಕುಗಳನ್ನು ತಿದ್ದುವ ಶಕ್ತಿ ಯುವ ಸಮುದಾಯಕ್ಕಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಕಲೆ ಇಂತಹ ಹಲವಾರು ಕ್ಷೇತ್ರಗಳಲ್ಲಿ ಭಾರತ ಉನ್ನತ ಮಟ್ಟಕ್ಕೇರಿದೆ.
ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿದೆ.
ಈ ಮಾಧ್ಯಮದಲ್ಲಿಯೂ ಸಮುದಾಯ ಬಹಳಷ್ಟು ಸಕ್ರಿಯವಾಗಿದೆ. ಎಂತಹ ಕೆಟ್ಟ ಸಂಗತಿಗಳು ಘಟಿಸಿದರೂ ಶೀಘ್ರ ಬಯಲಿಗೆಳೆದು ತಪ್ಪಿತಸ್ಥರನ್ನು ಜಗತ್ತಿನ ಮುಂದೆ ಇಡಲು ಈ ಮಾಧ್ಯಮ ನೆರವಾಗುತ್ತಿದೆ. ಯುವಕರು ಕೆಟ್ಟ ಚಟಗಳಿಗೆ ಒಳಗಾಗದಿರಲಿ ಎಂದು ಅನೇಕ ಸಂಸ್ಥೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಪ್ರೋತ್ಸಾಹಿಸುತ್ತಿವೆ. ಪ್ರವಾಹ ಬರಗಾಲದಂತಹ ಸಂದರ್ಭ ಯುವಕರು ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸಿ ಸಹಾಯ ಒದಗಿಸಿದ್ದಾರೆ. ಶಿಕ್ಷಣ ಅನ್ನುವುದು ಕೇವಲ ಹೆಸರಿಗೆ ಮಾತ್ರ ಸೀಮಿತವಾಗದೆ, ವಿದ್ಯಾವಂತರು ಮಾನವೀಯತೆಯನ್ನೂ ಹೊಂದಿರಬೇಕು.
ಯುವಕರಿಗೆ ಮಾರ್ಗರ್ದಶನ ನೀಡಲು ಯಾವಾಗಲೂ ಹಿರಿಯರು ಸಿದ್ಧರಾಗಿರಬೇಕು. ಭಾರತ ಇಂದು ಮುಂದುವರಿಯುತ್ತಿರುವ ರಾಷ್ಟ್ರವಾಗಿದೆ. ಆದರೆ ಹಿರಿಯರ ಮಾರ್ಗದರ್ಶನ ಮತ್ತು ಯುವಕರ ಅಪರಿಮಿತ ಪ್ರಯತ್ನದಿಂದ ಭಾರತ ಬಲಶಾಲಿ ರಾಷ್ಟ್ರವಾಗಬಹುದು. ಯುವಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಬೇಕು ಮತ್ತು ಜಗತ್ತಿಗೆ ಭಾರತದ ಶಕ್ತಿ, ಸಾಮರ್ಥ್ಯವನ್ನು ತೋರಿಸಬೇಕು. ಇದರ ಜತೆಗೆ ಈಗಾಗಲೇ ಎದುರಿಸುತ್ತಿರುವ ನಿರುದ್ಯೋಗ, ಬಡತನ, ನೈಸರ್ಗಿಕ ವಿಕೋಪಗಳಂತಹ ಅನೇಕ ತೊಂದರೆಗಳಿಗೆ ಪರಿಹಾರ ಹುಡುಕುವುದು ಯುವಕರ ಕರ್ತವ್ಯವಾಗಿದೆ.
ಭಾರತದಲ್ಲಿಯೇ ವಸ್ತುಗಳನ್ನು ತಯಾರಿಸುವ ಕಂಪೆನಿಗಳು ಪ್ರಾರಂಭವಾದರೆ ಯುವಕರಿಗೆ ಉದ್ಯೋಗವೂ ದೊರೆಯಲಿದೆ, ಬಡತನದಂತಹ ಸಮಸ್ಯೆಗಳಿಗೆ ಪರಿಹಾರವೂ ಸಿಗಬಹುದು. ಯುವಕರು ಸ್ಟಾರ್ಟ್ ಅಪ್ ಕಂಪೆನಿಗಳನ್ನು ಪ್ರಾರಂಭಿಸಲು ಸರಕಾರ ಅನೇಕ ರೀತಿಗಳಲ್ಲಿ ಪ್ರೋತ್ಸಾಹ ನೀಡುತ್ತಿದೆ. ಯುವಕರು ಇಂತಹ ಸೌಲಭ್ಯ ಮತ್ತು ಅವಕಾಶಗಳನ್ನು ಬಳಸಿಕೊಂಡು ದೇಶದ ಉನ್ನತಿಗಾಗಿ ಪ್ರಯತ್ನಿಸಬೇಕು. ದೇಶ ಪ್ರಗತಿಯ ದಾರಿಯಲ್ಲಿ ಸಾಗಲು ನಾವು ಆರಿಸಿರುವ ಜನನಾಯಕರು ಸ್ಪಂದಿಸಲು ತಿಳಿ ಹೇಳಬೇಕು. ಅನಗತ್ಯ ಪ್ರತಿಭಟನೆ ಮಾಡುವ ಬದಲು ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕು. ಯುವಕರ ಪ್ರತಿಭೆ ಅರಳಬೇಕು. ಇನ್ನೊಬ್ಬರಿಂದ ಪ್ರೇರಣೆಗೊಂಡ ನಾವು ಮತ್ತಷ್ಟು ಜನರನ್ನು ಪ್ರೇರೇಪಿಸಬೇಕು.
ಭಾರತದ ಪ್ರಗತಿಗಾಗಿ ನಾವು ಶ್ರಮಿಸಿ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಕಲ್ಪಿಸಿ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವು ಮಾಡುವ ಕೆಲಸಗಳು ನಾಳಿನ ಪ್ರಜೆಗಳಿಗೆ ಉತ್ತಮ ಉದಾಹರಣೆಯಾಗಬೇಕೆಂಬುದು ನನ್ನು ಕನಸು ಮತ್ತು ಆಶಯವಾಗಿದೆ.
ಶ್ರೀ ಅವಧಾನಿ, ಧಾರವಾಡ ವಿಶ್ವವಿದ್ಯಾನಿಲಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.