ಟೀಂ ಇಂಡಿಯಾದ ಈ ಧಿಗ್ಗಜರಿಗೆ Farewell Match ಆಡುವ ಸೌಭಾಗ್ಯವೇ ಸಿಗಲಿಲ್ಲ!

Team Udayavani, Aug 17, 2020, 12:11 AM IST

ಟೀಂ ಇಂಡಿಯಾದ ಈ ಧಿಗ್ಗಜರಿಗೆ Farewell Match ಆಡುವ ಸೌಭಾಗ್ಯವೇ ಸಿಗಲಿಲ್ಲ!

ಮಣಿಪಾಲ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕ್ಯಾಪ್ಟನ್‌ ಕೂಲ್‌ ಎಂದೇ ಭಾರತೀಯರ ಮನದಲ್ಲಿ ವಿರಾಜಮಾನರಾಗಿದ್ದ ಮಹೇಂದ್ರ ಸಿಂಗ್‌ ಧೋನಿ ಅವರು ಆಗಸ್ಟ್‌ 15ರಂದು ದಿಢೀರನೇ ತಮ್ಮ ಕ್ರಿಕೆಟ್‌ ಜೀವನಕ್ಕೆ ನಿವೃತ್ತಿ ಘೋಷಿಸಿ ನಿರಾಸೆ ಮೂಡಿಸಿದರು. ಧೋನಿ ನಿವೃತ್ತಿ ಘೋಷಿಸಿದ ಬೆನ್ನೆಲ್ಲೆ ಇನ್ನೋರ್ವ ಸ್ಪುರದ್ರೂಪಿ ಆಟಗಾರ ಸುರೇಶ್‌ ರೈನಾ ಕೂಡ ತಮ್ಮ ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ.

ಇದು ಭಾರತೀಯ ಕ್ರಿಕೆಟ್‌ ಮನಸ್ಸುಗಳಿಗೆ ಸರಣಿ ಅಘಾತವಾಗಿ ಪರಿಣಮಿಸಿದೆ. ಇನ್ನು ಒಂದು ನೋವಿನ ಸಂಗತಿ ಎಂದರೆ ಧೋನಿ ಮತ್ತು ಸುರೇಶ್‌ ರೈನಾ ಅವರು ತಮ್ಮ ಕ್ರಿಕಟ್‌ ವೃತ್ತಿ ಜೀವನದ ಕೊನೆಯ ಪಂದ್ಯ ಆಡದೇ ವಿದಾಯ ಹೇಳಿದ್ದು.

ಇದಿಂದಾಗಿ ಅವರ ಕೊನೆಯ ಆಟವನ್ನು ಕಣ್ತುಂಬಿಕೊಳ್ಳಬೇಕು ಎಂದು ಆಸೆ ಹೊಂದಿದ್ದ ಅವರ ಆಪಾರ ಅಭಿಮಾನಿಗಳಿಗೆ ಈ ನಡೆಯಿಂದ ನಿರಾಸೆಯ ಜತೆಗೆ ಕಣ್ಣಲ್ಲಿ ನೀರು ತರುವಂತೆ ಮಾಡಿದೆ.

ಭಾರತ ಕ್ರಿಕೆಟ್‌ ತಂಡದ ಆಟಗಾರರ ಪೈಕಿ ತಮ್ಮ ಕೊನೆಯ ಪಂದ್ಯವನ್ನು ಆಡದೇ ವಿದಾಯ ಹೇಳಿರುವುದು ಧೋನಿ, ಸುರೇಶ್‌ ರೈನಾ ಅವರೇ ಮೊದಲಲ್ಲ. ಈ ಮುಂಚೆ ಹಲವು ಕ್ರಿಕೆಟಿಗರು ತಮ್ಮ ಕೊನೆಯ ಪಂದ್ಯವನ್ನಾವಾಡದೆ ವಿದಾಯ ಘೋಷಿಸಿದ್ದಾರೆ.

ಹಾಗಾದರೆ ತಮ್ಮ ಕೊನೆಯ ಪಂದ್ಯವನ್ನು ಆಡದೇ ವಿದಾಯ ಘೋಷಿಸಿದವರು ಯಾರು ಯಾರು ಎಂಬುದನ್ನು ತಿಳಿಯೋಣ ಬನ್ನಿ…

ರಾಹುಲ್‌ ದ್ರಾವಿಡ್‌

ಭಾರತ ಕ್ರಿಕಟ್‌ ತಂಡದ ಗೋಡೆ ಎಂದೇ ಪ್ರಸಿದ್ಧಗೊಂಡಿದ್ದ ರಾಹುಲ್‌ ದ್ರಾವಿಡ್‌ ಅವರು ತಮ್ಮ ಕ್ರಿಕೆಟ್‌ ಜೀವನದ ಕೊನೆಯ ಪಂದ್ಯವನ್ನು ಆಡದೇ ನಿವೃತ್ತಿ ಘೋಷಿಸಿದ್ದರು. ಅವರು 2012ರ ಜನವರಿ ತಿಂಗಳ ಅಡಿಲೇಡ್‌ನ‌ಲ್ಲಿ ಆಸ್ಟ್ರೇಲಿಯಾದ ವಿರುದ್ಧ ಆಡಿದ್ದ ಟೆಸ್ಟ್‌ ಪಂದ್ಯವೇ ಅವರಿಗೆ ಅದು ಕೊನೆಯ ಪಂದ್ಯವಾಗಿತ್ತು. ಅದೇ ವರ್ಷದ ಮಾರ್ಚ್‌ನಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಜ್ಯಾಮಿ ತಮ್ಮ ನಿವೃತ್ತಿ ಪಂದ್ಯವನ್ನು ಆಡುವ ಸೌಭಾಗ್ಯದಿಂದ ವಂಚಿತರಾಗಿದ್ದರು.

ವಿವಿಎಸ್‌ ಲಕ್ಷ್ಮಣ್‌

ಭಾರತ ತಂಡದ ಉತ್ತಮ ಬ್ಯಾಟ್ಸ್‌ಮನ್‌ ವಿವಿಎಸ್‌ ಲಕ್ಷ್ಮಣ್‌ ಅವರು ತಮ್ಮ ಕ್ರಿಕಟ್‌ ಜೀವನದ ಕೊನೆಯ ಪಂದ್ಯವನ್ನು ಆಡದೇ ನಿವೃತ್ತಿ ಘೋಷಿಸಿದ್ದರು. ಇವರಿಗೆ ಕೂಡ ಅಡಿಲೇಡ್‌ನ‌ಲ್ಲಿ ಆಸ್ಟ್ರೇಲಿಯದ ವಿರುದ್ಧ ಆಡಿದ ಪಂದ್ಯವೇ ಕೊನೆಯ ಪಂದ್ಯವಾಗಿತ್ತು. 134 ಪಂದ್ಯಗಳಿಂದ ಸುಮಾರು 8,781 ರನ್‌ ಗಳಿಸಿದ್ದ ಇವರು 17 ಶತಕ, 56 ಅರ್ಧ ಶತಕ ಬಾರಿಸಿದ್ದರು.

ವೀರೇಂದ್ರ ಸೆಹವಾಗ್‌

ಭಾರತ ಕ್ರಿಕಟ್‌ ತಂಡದ ಸ್ಫೋಟಕ ದಾಂಡಿಗ, ತ್ರಿಶತಕ ವೀರ ವೀರೇಂದ್ರ ಸೆಹವಾಗ್‌ ಅವರು ಕ್ರೀಸ್‌ಗೆ ಬಂದರೆ ಬೌಲರ್‌ಗೆ ಬೆವರಿಳಿಸದೇ ಇವರು ಪೆವಿಲಿಯನ್‌ಗೆ ತೆರಳುತ್ತಿರಲಿಲ್ಲ. ಆದರೆ ದುರ್ದೈವ ಎಂದರೆ ಇಂತಹ ಸ್ಫೋಟಕ ಬ್ಯಾಟ್ಸ್‌ಮನ್‌ ಅವರು ಕೊನೆಯ ಪಂದ್ಯದಲ್ಲಿ ಬೌಲರ್‌ಗಳಿಗೆ ಬೆವರಳಿಸದೇ ವೃತ್ತಿ ಜೀವನಕ್ಕೆ ಗುಡ್‌ ಬೈ ಹೇಳಿ, ಇಡೀ ಕ್ರಿಕಟ್‌ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದು ವಿಪರ್ಯಾಸವೇ ಸರಿ. ಇವರು ಮಾರ್ಚ್‌ 2013ರಲ್ಲಿ ಹೈದ್ರಬಾದ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಆಡಿದ ಪಂದ್ಯವೇ ಇವರಿಗೆ ಕೊನೆಯ ಪಂದ್ಯವಾಗಿತ್ತು. ಇವರು 2015ರಂದು ತಮ್ಮ ಹುಟ್ಟು ಹಬ್ಬದ ದಿನವೇ ನಿವೃತ್ತಿ ಘೋಷಿಸಿದ್ದರು.

ಯುವರಾಜ್‌ ಸಿಂಗ್‌

ಸಿಕ್ಸರ್‌ ವೀರ, ಕ್ಯಾನ್ಸರ್‌ ನೋವಿನಲ್ಲೂ ದೇಶಕ್ಕೆ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ಯುವರಾಜ್‌ ಸಿಂಗ್‌ ಅವರು ತಮ್ಮ ಕೊನೆಯ ಪಂದ್ಯದಲ್ಲಿ ಸಿಕ್ಸರ್‌ ಬಾರಿಸುವುದನ್ನು ಅವರು ಅಭಿಮಾನಿಗಳು ಕಣ್ತುಂಬಿಕೊಳ್ಳಲು ಆಗಲಿಲ್ಲ. ಯಾಕೆಂದರೆ ಅವರು ಕೊನೆಯ ಪಂದ್ಯ ಆಡದೇ ನಿವೃತ್ತಿ ಘೋಷಿಸಿದ್ದರು. 2017ರಲ್ಲಿ ವೆಸ್ಟ್‌ ವಿಂಡೀಸ್‌ ಸರಣಿಯೇ ಅವರ ಆಡಿದ್ದ ಕೊನೆಯ ಸರಣಿ ಪಂದ್ಯವಾಗಿತ್ತು. ಕೆಲ ದಿನಗಳ ಬಳಿಕ ಅವರು ನಿವೃತ್ತಿ ಘೋಷಿಸಿ ಅವರ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

ಇವರಷ್ಟೇ ಅಲ್ಲದೇ, ಎಡಗೈ ವೇಗಿ ಜಹೀರ್‌ ಖಾನ್‌, ಇರ್ಫಾನ್‌ ಪಠಾಣ್‌, ವೇಗದ ಬೌಲರ್‌ ಅಜಿತ್‌ ಅಗರ್ಕರ್‌, ಹರಭಜನ್‌ ಸಿಂಗ್‌ ಅವರು ಕೂಡ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯವನ್ನು ಆಡಿರಲಿಲ್ಲ. ಈ ಸಾಲಿಗೆ ಸೇರ್ಪಡೆಯಾಗಿ ಕೂಲ್‌ ಕ್ಯಾಪ್ಟನ್ ಮಹೇಂದ್ರ ಸಿಂಗ್‌ ಧೋನಿ ಮತ್ತು ಸುರೇಶ್‌ ರೈನಾ ಅವರು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಆದರೆ ಈಗ ಸಾಮಾಜಿಕ ಜಾಲತಾಣದಲ್ಲಿ ಧೋನಿ ಮತ್ತು ಸುರೇಶ್‌ ರೈನಾ ಅವರಿಗೆ ತಮ್ಮ ವೃತ್ತಿ ಜೀವನದ ಕೊನೆಯ ಪಂದ್ಯ ಆಡಲು ಬಿಸಿಸಿಐ ಅವಕಾಶ ಮಾಡಿಕೊಡಬೇಕು ಎಂಬ ಕೂಗೊಂದು ಪ್ರಬಲವಾಗಿ ಕೇಳಿಬರುತ್ತಿದೆ.

– ಶಿವ ಸ್ಥಾವರಮಠ

ಟಾಪ್ ನ್ಯೂಸ್

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

75

IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

BGT 2024: team India won the test in Perth

BGT 2024: ಪರ್ತ್‌ ನಲ್ಲಿ ಪಲ್ಟಿ ಹೊಡೆದ ಆಸೀಸ್:‌ ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ

IPL Mega Auction: Here’s what all 10 teams look like after the first day of the auction

IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

2

Puttur: ಚೆನ್ನಾಗಿ ಮಳೆ ಬಂದರೂ ಕುಸಿದ ಅಂತರ್ಜಲ ಮಟ್ಟ

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

1

Belthangady: ಕಡೆಗೂ ಬಂತು ಇಂದಿರಾ ಕ್ಯಾಂಟೀನ್‌

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.