ಕಾಂಗ್ರೆಸ್ ಆಡಳಿತದ ಪಾಪದ ಫಲದಿಂದ ಪುಂಡರು ಮೆರೆಯುತ್ತಿದ್ದಾರೆ : ಡಿಸಿಎಂ ಕಾರಜೋಳ
Team Udayavani, Aug 17, 2020, 1:15 PM IST
ಕೊಪ್ಪಳ: ಕಾಂಗ್ರೆಸ್ ಆಡಳಿತದ ಪಾಪದ ಫಲದಿಂದ ಇಂದು ಪುಂಡ ಪೋಕರಿಗಳು ಮೆರೆಯುತ್ತಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತ ಟೀಕಿಸಿದರು.
ಕುಷ್ಟಗಿ ತಾಲೂಕಿನ ಹನುಮಸಾಗರದ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಇಂದು ಶಾಸಕರನ್ನೂ ಬಿಡದಂತೆ ಪುಂಡ ಪೋಕರಿಗಳನ್ನು ಕಾಂಗ್ರೆಸ್ ಬೆಳಸಿದೆ ಎಂದರು. ಶಾಸಕ ಅಖಂಡ ಶ್ರೀನಿವಾಸ್ ದಲಿತ ಅಥವಾ ಹಿಂದೂ ವಾಖ್ಯಾನದ ಕುರಿತು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಹಿರಿಯ ರಾಜಕಾರಣಿಯಾಗಿ ಈ ರೀತಿ ಮಾತನಾಡೋದು ಸರಿ ಅಲ್ಲ. ಬಸವಣ್ಣ ನಮಗೆ ಹೇಳಿದ್ದು ಒಂದೇ ಕುಲ, ಗಂಡು, ಹೆಣ್ಣು ಎರಡೇ ಜಾತಿ ಎಂದರು.
ಕೆ.ಜಿ.ಹಳ್ಳಿ , ಡಿ.ಜೆ ಹಳ್ಳಿ ಗಲಾಟೆ ಕೇಸ್ ನಲ್ಲಿ ಕಾಂಗ್ರೆಸ್ ನವರಿಗೆ ಮತ ಬ್ಯಾಂಕ್ ಮುಖ್ಯ. ಕಾಂಗ್ರೆಸ್ ನವರಿಗೆ ದಲಿತ ಶಾಸಕನ ರಕ್ಷಣೆ ಮುಖ್ಯ ಅಲ್ಲ. 70 ವರ್ಷದಲ್ಲಿ 56 ವರ್ಷ ಕಾಂಗ್ರೆಸ್ ಆಡಳಿತ ಮಾಡಿದರೂ ಯಾರ ರಕ್ಷಣೆ ಮಾಡಿಲ್ಲ. ಯಾರನ್ನೂ ಕಾಂಗ್ರೆಸ್ ಉದ್ದಾರ ಮಾಡಿಲ್ಲ. ಸಂವಿಧಾನದ ಆಶಯದ ಪ್ರಕಾರದ ದೀನ ದಲಿತರ ಉದ್ದಾರ ಆಗಿಲ್ಲ ಎಂದರು.
ಇದನ್ನೂ ಓದಿ: ವಾಟ್ಸಾಪ್ ಮೂಲಕ ಗಲಭೆಗೆ ಜನ ಸೇರಿಸಿದ್ದ ಟಿಪ್ಪು ಟೈಗರ್ ಅಲ್ಫತ್ ಟ್ರಸ್ಟ್ ಅಧ್ಯಕ್ಷನ ಬಂಧನ
ಇನ್ನೂ ಬೆಂಗಳೂರು ಗಲಭೆ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣದಲ್ಲಿ ಮ್ಯಾಜೆಸ್ಟ್ರೀಟ್ ತನಿಖೆ ಆರಂಭವಾಗಿದೆ. ವರದಿ ಬಂದ ನಂತರ ಅದು ಯಾರಿಗಾದರೂ ಅಪೂರ್ಣ ಎನಿಸಿದರೆ, ತನಿಖೆಗೆ ಒತ್ತಾಯ ಮಾಡಲಿ ಎಂದರು.
ಇನ್ನೂ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಕೆಲವು ತಾಲೂಕಗಳಲ್ಲಿ ಪ್ರವಾಹ ಬಂದಿದೆ. ಆಲಮಟ್ಟಿ ಡ್ಯಾಂ ನಿಂದ 2 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದೆ. ಹಿಡಕಲ್ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಹೀಗಾಗಿ ಜಲಾಶಯದ ಅಕ್ಕ ಪಕ್ಕದ ಜಮೀನಿಗೆ ನೀರು ನುಗ್ಗಿದೆ. ಯಾವುದೇ ಗ್ರಾಮಗಳಿಗೆ ನೀರು ನುಗ್ಗಿಲ್ಲ. ಜನ ಸುರಕ್ಷತವಾಗಿದ್ದಾರೆ. ನದಿ ದಂಡೆಯಲ್ಲಿ ಅಲ್ಪ ಪ್ರಮಾಣದ ಬೆಳೆ ಹಾನಿಯಾಗಬಹುದು.
ನೀರು ಹೆಚ್ಚಾದರೆ ಜನರ ಸ್ಥಳಾಂತರ ಮಾಡಲು ವ್ಯವಸ್ಥೆ ಮಾಡಲಾಗಿದೆ. ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತೇವೆ. ಜನ ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯ ಇಲ್ಲ. ನಾಲ್ಕೈದು ದಿನ ಮಳೆ ಹೆಚ್ಚಾಗುವ ಸಂಭವ ಇದೆ ಎಂದರು.
ಇನ್ನು ಕಳೆದ ಬಾರಿ ಪರಿಹಾರದ ವಿಚಾರದಲ್ಲಿ ಕೆಲವರು ರಾಜಕಾರಣ ಮಾಡುತ್ತಿದ್ದಾರೆ. ಕಳೆದ ವರ್ಷದ ಪರಿಹಾರ ಎಲ್ಲರಿಗೂ ನೀಡಲಾಗಿದೆ. ಈ ಬಾರಿ ಹಾನಿ ಕುರಿತು ಸಮಿಕ್ಷೆ ನಡೆಸಲಾಗುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
ಕೊಪ್ಪಳ: ಫ್ಲೈಟ್ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.