ಟಾಪ್ ಸೀಡ್ ಓಪನ್ ಟೆನಿಸ್; ಜೆನ್ನಿಫರ್ ಬ್ರಾಡಿಗೆ ಮೊದಲ ಪ್ರಶಸ್ತಿ
Team Udayavani, Aug 17, 2020, 7:52 PM IST
ಲೆಕ್ಸಿಂಗ್ಟನ್ (ಕೆಂಟುಕಿ): ಅಮೆರಿಕದ ಜೆನ್ನಿಫರ್ ಬ್ರಾಡಿ ಮೊದಲ ಬಾರಿಗೆ ಡಬ್ಲ್ಯುಟಿಎ ಪ್ರಶಸ್ತಿಯೊಂದನ್ನೆತ್ತಿ ಸಂಭ್ರಮಿಸಿದ್ದಾರೆ. ಕಳೆದ ರಾತ್ರಿ ನಡೆದ “ಟಾಪ್ ಸೀಡ್ ಓಪನ್’ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ಅವರು ಸ್ವಿಜರ್‌ಲ್ಯಾಂಡಿನ ಜಿಲ್ ಟೀಶ್ಮನ್ ವಿರುದ್ಧ 6-3, 6-4 ನೇರ ಸೆಟ್‌ಗಳ ಜಯ ಸಾಧಿಸಿದರು.
ಇದು ಕೋವಿಡ್ ಕಾಲದಲ್ಲಿ ನಡೆದ ಮೊದಲ ಡಬ್ಲ್ಯುಟಿಎ ಟೆನಿಸ್ ಪಂದ್ಯಾವಳಿಯಾಗಿದೆ. ಇದು ಯಶಸ್ವಿಯಾಗಿ ನಡೆದದ್ದು ಮುಂಬರುವ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಗೊಂದು ಸ್ಫೂರ್ತಿಯಾಗಲಿದೆ ಎಂದು ಸಂಘಟಕರು ಅಭಿಪ್ರಾಯಪಟ್ಟಿದ್ದಾರೆ.
ಈ ಕೂಟದಲ್ಲಿ ಒಂದೇ ಒಂದು ಸೆಟ್ ಕಳೆದುಕೊಳ್ಳದಿದ್ದುದು ಜೆನ್ನಿಫರ್ ಬ್ರಾಡಿ ಪಾಲಿನ ಹೆಗ್ಗಳಿಕೆ. ಸೆಮಿಫೈನಲ್‌ನಲ್ಲಿ ನೆಚ್ಚಿನ ಆಟಗಾರ್ತಿ ಕೊಕೊ ಗಾಫ್ ಅವರನ್ನೂ ಬ್ರಾಡಿ ನೇರ ಸೆಟ್‌ಗಳಲ್ಲಿ ಕೆಡವಿದ್ದರು.
ಗೆಲುವಿನ ನಂಬಿಕೆ ಇತ್ತು
“ಅಂಕಣಕ್ಕೆ ಇಳಿಯುವ ಮೊದಲು ನಾನು ಸ್ವಯಂ ನಂಬಿಕೆ ಹೊಂದಿದ್ದೆ. ಈ ಪಂದ್ಯವನ್ನು ನಾನು ಗೆಲ್ಲಬಲ್ಲೆ ಎಂಬುದೊಂದೇ ನನ್ನ ತಲೆಯಲ್ಲಿತ್ತು. ನಾನು ಎಣಿಸಿದ್ದೆಲ್ಲವೂ ಇಲ್ಲಿ ಸಾಕಾರಗೊಂಡಿದೆ’ ಎಂದು ಗೆಲುವಿನ ಬಳಿಕ ಬ್ರಾಡಿ ಹೇಳಿದರು. ಆದರೆ ಕೋವಿಡ್-19 ನಿಯಮಾವಳಿಯಿಂದಾಗಿ ಅವರ ಸಂಭ್ರಮಕ್ಕೆ ಯಾವುದೇ ಅವಕಾಶವಿರಲಿಲ್ಲ. ನೆಚ್ಚಿನ ತಿಂಡಿಯನ್ನು ತರಿಸಿಕೊಂಡು ಸಂಭ್ರಮಿಸುತ್ತೇನೆ ಎಂಬುದಾಗಿ ಬ್ರಾಡಿ ಹೇಳಿದರು.
ಸಿನ್ಸಿನಾಟಿ ಮಾಸ್ಟರ್
ವರ್ಷದ 4ನೇ ಹಾಗೂ ಅಂತಿಮ ಗ್ರ್ಯಾನ್‌ಸ್ಲಾಮ್ ಕೂಟವಾಗಬೇಕಿದ್ದ ಯುಎಸ್ ಓಪನ್ ಪಂದ್ಯಾವಳಿ ಈ ಬಾರಿ ವರ್ಷದ ಎರಡನೇ ಟೂರ್ನಿಯಾಗಿ ಆಯೋಜನೆಗೊಳ್ಳಲಿದ್ದು, ಆ. 31ರಿಂದ ಸೆ. 13ರ ತನಕ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಸಿನ್ಸಿನಾಟಿ ಮಾಸ್ಟರ್ ಪಂದ್ಯಾವಳಿ ಇಲ್ಲಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.