ಡಿಮ್ಯಾಟ್ ಫಿಕ್ಸಿಂಗ್
Team Udayavani, Aug 17, 2020, 8:26 PM IST
ಷೇರು ಮಾರುಕಟ್ಟೆಯಲ್ಲಿ ಯಾವುದೇ ಕಂಪನಿಯ ಷೇರುಗಳ ಕೊಡು- ಕೊಳ್ಳುವಿಕೆ ಪ್ರಕ್ರಿಯೆ ಸುಸೂತ್ರವಾಗಿ ಸಾಗಲು, ಡಿಮ್ಯಾಟ್ ಖಾತೆಗೆ ಸೇವಿಂಗ್ ಅಕೌಂಟ್ ಲಿಂಕ್ ಕೊಡಬೇಕು. ಡಿಮ್ಯಾಟ್ ಅಕೌಂಟ್ ಎಂದರೆ, ಡಿ ಮಟೀರಿಯಲೈಕ್ ಅಕೌಂಟ್ ಎಂದರ್ಥ. ಆರ್ಥಿಕ ಭದ್ರತೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಿಡುವ ಖಾತೆಯೇ
ಡಿಮ್ಯಾಟ್ ಖಾತೆ. ಷೇರು ವ್ಯವಹಾರಕ್ಕೆ, ಡಿಮ್ಯಾಟ್ ಖಾತೆ ಕಡ್ಡಾಯವಾಗಿ ಇರಬೇಕಾಗುತ್ತದೆ. ಷೇರು ಸರ್ಟಿ ಫಿಕೇಟುಗಳನ್ನು, ಕಾಗದ ಪತ್ರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವುದಕ್ಕೆ ಬದಲಾಗಿ, ಅವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಬದಲಾಯಿಸಲು ಡಿಮ್ಯಾಟ್ ಖಾತೆಯ ಮೂಲಕ ಮಾತ್ರ ಸಾಧ್ಯ. ಡಿಮ್ಯಾಟ್ ಖಾತೆಯನ್ನು ಡಿ.ಪಿ (ಡೆಪಾಸಿಟರಿ ಪಾರ್ಟಿಸಿಪೆಂಟ್) ಸಹಯೋಗದಲ್ಲಿ ತೆರೆಯಬಹುದು. ಡಿ.ಪಿ. ಬ್ಯಾಂಕ್ ಆಗಿರಬಹುದು, ಇಲ್ಲವೇ ಸೆಕ್ಯುರಿಟಿ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಇಂದ ಮಾನ್ಯತೆ ಪಡೆದ ಹಣಕಾಸು ಸಂಸ್ಥೆಯೂ ಆಗಿರಬಹುದು. ಡೆಪಾಸಿಟರಿ ಪಾರ್ಟಿಸಿಪೆಂಟ್, ಹೂಡಿಕೆದಾರ ಮತ್ತು ಠೇವಣಿಯ ನಡುವೆ ಸೇತುವೆಯಂತೆ ಕಾರ್ಯನಿರ್ವಹಿ ಸುತ್ತದೆ. ಭಾರತದಲ್ಲಿ ಎರಡು ಡೆಪಾಸಿಟರಿ ಪಾರ್ಟಿಸಿಪೆಂಟ್‌ಗಳಿವೆ ಎನ್.ಎಸ್.ಡಿ.ಎಲ್ ಮತ್ತು ಸಿ.ಎಸ್. ಡಿ.ಎಲ್. ಡಿಮ್ಯಾಟ್ ಖಾತೆಯ ಜೊತೆ ಸೇವಿಂಗ್ಸ್ ಖಾತೆಯನ್ನು ಲಿಂಕ್ ಮಾಡುವುದರಿಂದ, ಷೇರು ವ್ಯವಹಾರ ಸುಲಲಿತವಾಗಿ ಸಾಗುತ್ತದೆ. ಸೇವಿಂಗ್ಸ್ ಖಾತೆಯಲ್ಲಿನ ಹಣ ಆಟೊಮ್ಯಾಟಿಕ್ ಆಗಿ ಕಟ್ ಆಗಿ ಡಿಮ್ಯಾಟ್ ಖಾತೆಗೆ ವರ್ಗಾಯಿಸಲ್ಪಡುತ್ತದೆ. ಇದನ್ನು ಹೊರತುಪಡಿಸಿ ಸೇವಿಂಗ್ಸ್ ಖಾತೆಯನ್ನು ಡಿಮ್ಯಾಟ್ ಖಾತೆಗೆ ಲಿಂಕ್ ಮಾಡುವುದರಿಂದ, ಹಲವು ಉಪಯೋಗಗಳಿವೆ.
- ಷೇರು ಖರೀದಿ ಮತ್ತು ಮಾರಾಟ ಪ್ರಕ್ರಿಯೆ ಸುಲಭವಾಗುವುದಷ್ಟೇ ಅಲ್ಲ, ಮ್ಯೂಚುವಲ್ ಫಂಡ್, ಬಾಂಡ್ ಗಳು, ಗೋಲ್ಡ್ ಬಾಂಡ್‌ಗಳು, ಕಾರ್ಪೊರೆಟ್ ಫಿಕ್ಸೆಡ್ ಡೆಪಾಸಿಟ್ ಇತ್ಯಾದಿಗಳನ್ನೂ ಖರೀದಿಸಬಹುದಾಗಿದೆ.
- ಷೇರು ಮಾರುಕಟ್ಟೆಯಲ್ಲಿ ಯಾವ ಕ್ಷಣದಲ್ಲಿ, ಯಾವ ಹೊತ್ತಿನಲ್ಲಿ ಅವಕಾಶ ಒದಗಿಬರುವುದೆಂದು ಹೇಳಲು ಆಗುವುದಿಲ್ಲ. ಸೇವಿಂಗ್ಸ್ ಖಾತೆ ಲಿಂಕ್ ಮಾಡಿದ್ದರೆ ಅವಕಾಶ ವಂಚಿತರಾಗುವ ಸಾಧ್ಯತೆ ತುಂಬಾ ಕಡಿಮೆ.
- ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್ ಬಳಸಿ ಟ್ರಾನ್ಸಾಕ್ಷನ್ ನಡೆಸಬಹುದಾಗಿದೆ. ಷೇರು ಮಾರುಕಟ್ಟೆಯಲ್ಲಿ ನಡೆಸಿದ ಹಣದ ವಹಿವಾಟುಗಳನ್ನು ಟ್ರಾಫಿಕ್ ಮಾಡಲು ಸಾಧ್ಯವಾಗುತ್ತದೆ.
- ಯಾವ ಷೇರು ಎಷ್ಟು ಬೆಲೆಗೆ ಖರೀದಿಸಲ್ಪಟ್ಟಿದೆ? ಅದು ತಂದುಕೊಟ್ಟ ಲಾಭ ಅಥವಾ ನಷ್ಟವೆಷ್ಟು? ಮುಂತಾದ ವಿಚಾರಗಳನ್ನು ತಿಳಿಯಬಹುದು
- ಡಿಮ್ಯಾಟ್, ಟ್ರೇಡಿಂಗ್ ಮತ್ತು ಸೇವಿಂಗ್ಸ್ ಮೂರೂ ಖಾತೆಗಳನ್ನು ಹೊಂದಿದ್ದರೆ, ಇವು ಮೂರಕ್ಕೆ ಲಾಗಿನ್ ಆಗಲು ಪ್ರತ್ಯೇಕ ಆ್ಯಪ್‌ನ ಅವಶ್ಯಕತೆಯಿಲ್ಲ. ಒಂದೇ ಅಷಿಶೀಯಲ್ ಆ್ಯಪ್ ಸಾಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.