ಇಡ್ಯಾ ಜವನೆರ್ ತಂಡದಿಂದ ಬೀಚ್‌ಗೆ ಹೊಸ ರೂಪ; ಮಾದರಿ ಬೀಚ್ ಆಗಿ ಪರಿವರ್ತನೆ
Team Udayavani, Aug 18, 2020, 4:54 AM IST
ಪಿಎಸ್ ಎಲ್‌ವಿ ರಾಕೆಟ್ ಮಾದರಿ
ಸುರತ್ಕಲ್: ಒಂದು ಕಾಲಕ್ಕೆ ಕಸಕಡ್ಡಿ ಹಾಕುವ ಜಾಗದಂತಿದ್ದ ಈ ಬೀಚ್ ಪ್ರದೇಶ ಕಳೆದ ಮಾರ್ಚ್ ನಿಂದ ಜುಲೈ ವರೆಗಿನ ಲಾಕ್‌ಡೌನ್ ಸಮಯದಲ್ಲಿ ನಳನಳಿ ಸುವಂತೆ ಮಾಡಿದ್ದು, ಇಡ್ಯಾ ಜವನೆರ್ ತಂಡದ ಪರಿಶ್ರಮ. ಬೀಚ್ ಪ್ರದೇಶವನ್ನು ಸ್ವತ್ಛಗೊಳಿಸಿ, ದಾನಿಗಳಿಂದ ಇಲ್ಲಿಗೆ ಬೇಕಾದ ಒಂದಿಷ್ಟು ವಸ್ತುಗಳನ್ನು ಸಂಗ್ರಹಿಸಿ ಮಾದರಿ ಬೀಚ್ ಆಗಿ ಪರಿವರ್ತಿಸುವ ಕೆಲಸ ಮಾಡಿದ್ದಾರೆ.
ಏನೆಲ್ಲ ಇದೆ?
ಮಕ್ಕಳಿಗೆ ಆಡಲು ಜಾರು ಬಂಡಿ, ಕುಳಿತುಕೊಳ್ಳಲು ಉಯ್ನಾಲೆ, ಕಲ್ಲಿನ ಆಸನ, ತಗಡು ಶೀಟಿನ ಮೇಲ್ಛಾವಣಿ, ಸುತ್ತ ಹಸುರು ಕಂಗೊಳಿಸುವ ಸಲುವಾಗಿ ಸಸಿ ಪೋಷಣೆಗೆ ವ್ಯವಸ್ಥೆ ಮಾಡಿದ್ದಾರೆ. ಬೀಚ್‌ಗೆ ಒಳ ಬರುವ ಪ್ರದೇಶದಲ್ಲಿ ಗೋಪುರ ವ್ಯವಸ್ಥೆ, ಸ್ಥಳೀಯರು ಇಲ್ಲಿ ಹುಟ್ಟುಹಬ್ಬ ಆಚರಿಸಲು ನಿರ್ಧರಿಸಿದರೆ ಅದಕ್ಕಾಗಿ ಒಂದು ಕಲ್ಲು ಬೆಂಚು, ಪಾರ್ಟಿ ಮಾಡಲು ಸ್ಥಳ ಮೀಸಲು ಇಡಲಾಗಿದೆ. ಇನ್ನೊಂದು ವಿಶೇಷ ಎಂದರೆ ಇಲ್ಲಿ ನಿರ್ಮಿಸಲಾದ ಉಡಾವಣೆಗೆ ಸಿದ್ಧಗೊಂಡಿರುವ ಪಿಎಸ್ ಎಲ್‌ವಿ ರಾಕೆಟ್ ಮಾದರಿ ಗಮನ ಸೆಳೆಯುತ್ತಿದೆ. ಅಲ್ಲದೆ ಉಚಿತ ಪ್ರವೇಶಾವಕಾಶ ಕಲ್ಪಿಸಲಾಗಿದೆ.
ಶಾಸಕರಿಂದ ಲೋಕಾರ್ಪಣೆ
ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಶನಿ ವಾರ ಹೊಸ ರೂಪ ಪಡೆದ ಬೀಚ್‌ನಲ್ಲಿರುವ ಸೌಲಭ್ಯಗಳನ್ನು ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಇಡ್ಯಾ ಬೀಚ್ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಜತೆ ಚರ್ಚಿಸಿ ಅನುದಾನ ತರಲು ಯೋಜನೆ ರೂಪಿಸಲಾಗುವುದು. ಬೀಚ್‌ಗೆ ಕುಟುಂಬ ಸಮೇತ ಆಗಮಿಸಿ ಒಂದಿಷ್ಟು ಕಾಲ ಕಳೆದು ಸಂತಸದಿಂದ ತೆರಳುತ್ತಾರೆ. ಇಲ್ಲಿಯ ಸ್ಥಳೀಯ ಯುವಕರು ಕೊರೊನಾ ಸಂದರ್ಭ ಲಾಕ್‌ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ಇತರರಿಗೂ ಸಂತಸವಾಗುವಂತಹ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಮೇಯರ್ ದಿವಾಕರ್, ಉಪಮೇಯರ್ ವೇದಾವತಿ, ಸ್ಥಳೀಯ ಕಾರ್ಪೊರೇಟರ್ ನಯನಾ ಆರ್. ಕೋಟ್ಯಾನ್, ಬಿಜೆಪಿ ಕಾರ್ಪೊರೇಟರ್‌ಗಳು, ಸ್ಥಳೀಯ ಮುಖಂಡರು, ಬಿಜೆಪಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.