ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕೂಗು?
100ಕ್ಕೂ ಹೆಚ್ಚು ಸದಸ್ಯರಿಂದ ಪತ್ರ: ಉಚ್ಚಾಟಿತ ಸಂಜಯ್ ಝಾ ಟ್ವೀಟ್
Team Udayavani, Aug 18, 2020, 6:10 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕೂಗು ಮತ್ತೆ ಎದ್ದಿದೆ. ಸುಮಾರು ನೂರಕ್ಕೂ ಹೆಚ್ಚು ಕಾಂಗ್ರೆಸಿಗರು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪತ್ರ ಬರೆದು ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ ಎಂದು ಕಾಂಗ್ರೆಸ್‌ನ ಉಚ್ಚಾಟಿತ ನಾಯಕ ಸಂಜಯ್ ಝಾ ಸೋಮವಾರ ಬಾಂಬ್ ಸಿಡಿಸಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಕಾಂಗ್ರೆಸ್, ಇದು ಬಿಜೆಪಿ ಪ್ರೇರಿತ ವದಂತಿ ಎಂದಿದೆ.
ಸಂಜಯ ಉವಾಚ!
ಸಂಜಯ್ ಝಾ ಇತ್ತೀಚೆಗೆ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು. ಕಾಂಗ್ರೆಸ್‌ನ ಕೆಲವು ಹಾಲಿ ಸಂಸದರ ಸಹಿತ ಸುಮಾರು 100ಕ್ಕೂ ಹೆಚ್ಚು ಸದಸ್ಯರು ಸೋನಿಯಾ ಗಾಂಧಿಗೆ ಪತ್ರ ಬರೆದು ಪಕ್ಷದ ರಾಜಕೀಯ ನಾಯಕತ್ವ ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ ಎಂದು ಸೋಮವಾರ ಝಾ ಟ್ವೀಟ್ ಮಾಡಿದ್ದಾರೆ.
ಪತ್ರವೇ ಬಂದಿಲ್ಲ: ಕಾಂಗ್ರೆಸ್
ಈ ಹೇಳಿಕೆಯನ್ನು ಕಾಂಗ್ರೆಸ್ ಅಲ್ಲಗಳೆದಿದೆ. ಟ್ವೀಟ್‌ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುಜೇವಾಲ, ನಾಯಕತ್ವ ಬದಲಾವಣೆಗೆ ಆಗ್ರಹ ಬಂದಿಲ್ಲ. ಇದು ಬಿಜೆಪಿಯ ಆಣತಿಯ ಮೇರೆಗೆ ನಡೆದಿರುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ ಎಂದಿದ್ದಾರೆ.
“ಆ ಗುಂಪು’ ಹೇಳಿದ್ದೇ ಬೇರೆ!
ಈ ನಡುವೆ ಕಾಂಗ್ರೆಸ್‌ನ ಮಾಜಿ ಸಚಿವರು, ಸಂಸದರ ಗುಂಪೊಂದು ಬೇರೊಂದು ರೀತಿ ಸ್ಪಷ್ಟನೆ ನೀಡಿದ್ದು, ಪಕ್ಷದ ಆಂತರಿಕ ವಿಚಾರವೊಂದನ್ನು ನಾವು ಸೋನಿಯಾಜೀ ಅವರಲ್ಲಿ ಚರ್ಚಿಸಲು ಮುಂದಾಗಿದ್ದೆವು. ಹಾಗಾಗಿ ಅವರ ಭೇಟಿಗೆ ಅನುಮತಿ ಕೋರಿ ಪತ್ರ ಸಲ್ಲಿಸಿದ್ದೆವು. ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದೆ. ಅಲ್ಲದೆ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಪಕ್ಷದ ನಾಯಕತ್ವದ ಬಗ್ಗೆ ಸ್ಪಷ್ಟ ನಿಲುವನ್ನು ತಳೆಯಬೇಕಾಗಿದೆ. ಇತ್ತೀಚೆಗೆ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರೊಂದಿಗೆ ರಾಹುಲ್ ಗಾಂಧಿ ಮತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸಂಧಾನ ಸಭೆ ನಡೆಸಿದ್ದರು. ಇದು ಪಕ್ಷದ ನಾಯಕತ್ವದ ಬಗ್ಗೆ ಮತ್ತೆ ದ್ವಂದ್ವ ಹುಟ್ಟುಹಾಕಿದೆ ಎಂದು ಆ ಗುಂಪು ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.