ಸ್ಟಾರ್ ನಟ ಪ್ರಭಾಸ್ ಮುಂದಿನ ಸಿನಿಮಾ “ಆದಿಪುರುಷ್”, ಕನ್ನಡದಲ್ಲಿಯೂ ತೆರೆ ಕಾಣಲಿದೆ
ಓಂ ರಾವತ್ ಈಗಾಗಲೇ ಹಿಂದಿಯಲ್ಲಿ ತಾನಾಜಿ ಎಂಬ ಐತಿಹಾಸಿಕ ಹಿಟ್ ಸಿನಿಮಾ ನಿರ್ದೇಶಿಸಿದ್ದರು.
Team Udayavani, Aug 18, 2020, 11:12 AM IST
ನವದೆಹಲಿ:ಭಾರತದ ಬಹುಬೇಡಿಕೆಯ ನಟ ಪ್ರಭಾಸ್ ಬಾಹುಬಲಿ ನಂತರ ಇದೀಗ ಬಿಗ್ ಬಜೆಟ್ ನ ಪೌರಾಣಿಕ ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಹೇಳುವ ಮೂಲಕ ಅಭಿಮಾನಿಗಳಿಗೆ ತಮ್ಮ 22ನೇ ಸಿನಿಮಾದ ಹೆಸರನ್ನು ಬಹಿರಂಗಪಡಿಸಿದ್ದಾರೆ.
ರಾಧೆ ಶ್ಯಾಮ್ ಸಿನಿಮಾದ ಬಳಿಕ ನಿರ್ದೇಶಕ ಓಂ ರಾವತ್ ನಿರ್ದೇಶನದ “ಆದಿಪುರುಷ್” ಸಿನಿಮಾದಲ್ಲಿ ನಟಿಸುತ್ತಿರುವುದಾಗಿ ಮಂಗಳವಾರ ಬೆಳಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ.
ಆದಿಪುರುಷ್ ಪ್ರಭಾಸ್ ಅವರ 22ನೇ ಸಿನಿಮಾವಾಗಿದೆ. ಇದೊಂದು ಸಾಹಸಮಯ ಚಿತ್ರವಾಗಿದ್ದು, “ಇದು ಅಧರ್ಮದ ವಿರುದ್ಧ ಗೆಲುವು ಸಾಧಿಸಿದ್ದರ ಸಂಭ್ರಮ” ಎಂಬ ಟ್ಯಾಗ್ ಲೈನ್ ಕೂಡಾ ನೀಡಲಾಗಿದೆ. ಆದಿಪುರುಷ್ ಸಿನಿಮಾದ ಫಸ್ಟ್ ಲುಕ್ ಅನ್ನು ಪ್ರಭಾಸ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಓಂ ರಾವತ್ ಈಗಾಗಲೇ ಹಿಂದಿಯಲ್ಲಿ ತಾನಾಜಿ ಎಂಬ ಐತಿಹಾಸಿಕ ಹಿಟ್ ಸಿನಿಮಾ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಅಜಯ್ ದೇವಗನ್ ನಟಿಸಿದ್ದರು. ಇದೀಗ ಪ್ರಭಾಸ್ ಓಂ ರಾವತ್ ಜತೆಗಿನ ಮೊದಲ ಸಿನಿಮಾವಾಗಿದೆ. ಆದಿಪುರುಷ್ 3ಡಿ ಸಿನಿಮಾವಾಗಿದೆ. ಇದು ಹಿಂದಿ ಮತ್ತು ತೆಲುಗಿನಲ್ಲಿ ಚಿತ್ರೀಕರಣಗೊಳ್ಳಲಿದ್ದು, ನಂತರ ತಮಿಳು, ಕನ್ನಡ, ಮಲಯಾಳಂ ಹಾಗೂ ಇತರ ಅಂತರಾಷ್ಟ್ರೀಯ ಭಾಷೆಗೆ ಡಬ್ ಆಗಲಿದೆ ಎಂದು ತಿಳಿಸಿದ್ದಾರೆ.
2021ಕ್ಕೆ ಆದಿಪುರುಷ್ ಸಿನಿಮಾ ಸೆಟ್ಟೇರಲಿದ್ದು, ನಿಗದಿಯಂತೆ 2022ಕ್ಕೆ ಸಿನಿಮಾ ದೇಶ, ವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಮಾತನಾಡಿದ್ದು, ಆದಿಪುರುಷ್ ಬಿಗ್ ಸ್ಕ್ರೀನ್ ಸಿನಿಮಾವಾಗಲಿದ್ದು, ಭಾರತೀಯ ಪೌರಾಣಿಕ ಕಥಾ ಹಂದರವನ್ನು ಹೊಂದಿದೆ. ಈ ಸಿನಿಮಾದಲ್ಲಿ ಹೆಸರಾಂತ ನಟರು ಅಭಿನಯಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಟಿ ಸೀರೀಸ್ ನ ಭೂಷಣ್ ಕುಮಾರ್ ಆದಿಪುರುಷ್ ಸಿನಿಮಾದ ಸಹ ನಿರ್ಮಾಪಕರಾಗಿದ್ದು, ಪ್ರಭಾಸ್ ಜತೆಗಿನ ಮೂರನೇ ಸಿನಿಮಾ ಇದಾಗಿದೆ. ಭೂಷಣ್ ಕುಮಾರ್ ಈಗಾಗಲೇ ಪ್ರಭಾಸ್ ಅವರ ಸಾಹೋ ಹಾಗೂ ರಾಧೆ ಶ್ಯಾಮ್ ಸಿನಿಮಾದಲ್ಲಿ ಜತೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.