ದಾವಣಗೆರೆ: 322 ಹೊಸ ಸೋಂಕು ಪ್ರಕರಣ ದಾಖಲು
Team Udayavani, Aug 18, 2020, 11:49 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಸೋಮವಾರ 322 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಹರಿಹರದ 54 ವರ್ಷದ ವ್ಯಕ್ತಿಗೆ (ರೋಗಿ ನಂಬರ್ 240448) ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ಕಾಣಿಸಿಕೊಂಡಿದೆ.
ರೋಗಿ ನಂಬರ್ 151566 ಸಂಪರ್ಕದಿಂದ ಹೊನ್ನಾಳಿ ತಾಲೂಕಿನ ಹನುಮಸಾಗರದ 18 ವರ್ಷದ ಯುವಕನಲ್ಲಿ (ರೋಗಿ ನಂಬರ್ 241846) ಸೋಂಕು ಹರಡಿದೆ.
ದಾವಣಗೆರೆಯ 60 ವರ್ಷದ ವೃದ್ಧೆಯಲ್ಲಿ (ರೋಗಿ ನಂಬರ್ 241487) ಕಾಣಿಸಿಕೊಂಡಿರುವ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ರೋಗಿ ನಂಬರ್ 239932 ಸಂಪರ್ಕದಿಂದ ದಾವಣಗೆರೆ ವಿನೋಬ ನಗರದ ಮೂರನೇ ಮುಖ್ಯ ರಸ್ತೆ ಎಂಟನೇ ಕ್ರಾಸ್ ನಿವಾಸಿ 58 ವರ್ಷದ ವೃದ್ಧೆ (ರೋಗಿ ನಂಬರ್ 241848), 46 ವರ್ಷದ ವ್ಯಕ್ತಿ (ರೋಗಿ ನಂಬರ್ 241849), ರೋಗಿ ನಂಬರ್ 210971 ಸಂಪರ್ಕದಿಂದ ವಿನೋಬ ನಗರದ 39 ವರ್ಷದ ಮಹಿಳೆ (ರೋಗಿ ನಂಬರ್ 241850), 45 ವರ್ಷದ ವ್ಯಕ್ತಿ (ರೋಗಿ ನಂಬರ್ 241851) ಯಲ್ಲಿ ಸೋಂಕು ಹರಡಿದೆ. ರೋಗಿ ನಂಬರ್ 209485 ಸಂಪರ್ಕದಿಂದ ಹೊನ್ನಾಳಿಯ 26 ವರ್ಷದ ವ್ಯಕ್ತಿ (ರೋಗಿ ನಂಬರ್ 241485), 14 ವರ್ಷದ ಬಾಲಕಿ (ರೋಗಿ ನಂಬರ್ 241856), 1 ವರ್ಷದ ಬಾಲಕಿ (ರೋಗಿ ನಂಬರ್ 241858), 2 ವರ್ಷದ ಬಾಲಕ (ರೋಗಿ ನಂಬರ್ 241859) ಸೋಂಕು ಹರಡಿದೆ.
ರೋಗಿ ನಂಬರ್ 205244 ಸಂಪರ್ಕದಿಂದ ದಾವಣಗೆರೆಯ ಎಂಸಿಸಿ ಬ್ಲಾಕ್ ನಿವಾಸಿ 68 ವರ್ಷದ ವ್ಯಕ್ತಿಯಲ್ಲಿ (ರೋಗಿ ನಂಬರ್ 242863) ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆಯ ಭಗತ್ ಸಿಂಗ್ ನಗರದ ಎಂಟನೇ ಕ್ರಾಸ್ ನಿವಾಸಿ 15 ವರ್ಷದ ಬಾಲಕಿ (ರೋಗಿ ನಂಬರ್ 242496), ಜಯನಗರದ 38 ವರ್ಷದ ವ್ಯಕ್ತಿ (ರೋಗಿ ನಂಬರ್ 242497), ಹೊನ್ನಾಳಿಯ 16 ವರ್ಷದ ಬಾಲಕಿಗೆ (ರೋಗಿ ನಂಬರ್ 242498) ತೀವ್ರ ಶೀತ, ಜ್ವರದಿಂದ ಸೋಂಕು ಕಾಣಿಸಿಕೊಂಡಿದೆ.
ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದ ಒಂಬತ್ತು ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸೋಂಕಿನ ಮೂಲವೇ ಪತ್ತೆಯಾಗಿಲ್ಲ. ಇನ್ ಫ್ಲ್ಯುಯೆಂಝಾ ತರಹದ ಅಸೌಖ್ಯದ (ILI) ಸಮಸ್ಯೆಯಿಂದ ಬಹಳ ಜನರು ಸೋಂಕಿಗೆ ಒಳಗಾಗಿದ್ದಾರೆ.
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 206, ಹರಿಹರದ 42, ಜಗಳೂರಿನ 25, ಚನ್ನಗಿರಿಯ 19, ಹೊನ್ನಾಳಿಯ 29 ಹಾಗೂ ಹೊರ ಜಿಲ್ಲೆಯ 11 ಜನರು ಸೇರಿದಂತೆ 332 ಜನರು ಸೋಂಕಿಗೆ ಒಳಗಾಗಿದ್ದಾರೆ.
ಕೋವಿಡ್ 19 ಸೋಂಕಿನಿಂದ ಗುಣಮುಖರಾದ ದಾವಣಗೆರೆಯ ನಿಟುವಳ್ಳಿಯ 58 ವರ್ಷದ ವೃದ್ಧೆ (ರೋಗಿ ನಂಬರ್ 185385), ದಾವಣಗೆರೆಯ ಪಿ.ಜೆ. ಬಡಾವಣೆಯ 78 ವರ್ಷದ ವೃದ್ಧ (ರೋಗಿ ನಂಬರ್ 186002), ಆವರಗೆರೆಯ 3 ವರ್ಷದ ಬಾಲಕ (ರೋಗಿ ನಂಬರ್ 207693) ಒಳಗೊಂಡಂತೆ 45 ಜನ ಸೋಂಕಿತರು ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ದಾವಣಗೆರೆಯ ಪಿ.ಜೆ. ಬಡಾವಣೆಯ 65 ವರ್ಷದ ವೃದ್ಧ (ರೋಗಿ ನಂಬರ್ 238098) ಮೃತಪಟ್ಟವರು. ಜಿಲ್ಲೆಯಲ್ಲಿ 5785 ಪ್ರಕರಣಗಳಲ್ಲಿ ಈವರೆಗೆ 3787 ಸೋಂಕಿತರು ಬಿಡುಗಡೆಯಾಗಿದ್ದಾರೆ. 130 ಜನರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ 1868 ಸಕ್ರಿಯ ಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Davanagere: ಶಾಸಕರ ಖರೀದಿ ಆರೋಪ; ತನಿಖೆಗೆ ಎಸ್‌ಐಟಿ ರಚಿಸಿ: ಎಂ.ಪಿ.ರೇಣುಕಾಚಾರ್ಯ
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.