ಶಾಪಿಂಗ್ ಮಾಡಿ ಸೋಂಕು ದೃಢವಾದರೆ 50 ಸಾವಿರ; ವಿವಾದ ತಂದ ಜಾಹೀರಾತು
Team Udayavani, Aug 19, 2020, 1:29 AM IST
ಸಾಂದರ್ಭಿಕ ಚಿತ್ರ
ಕೊಟ್ಟಾಯಂ: ಸಾಮಾಜಿಕ ಜವಾಬ್ದಾರಿ ಮರೆತು ಕೋವಿಡ್ ಸಂದಿಗ್ಧತೆಯನ್ನು ಹಗುರವಾಗಿ ಚಿತ್ರಿಸಿದ ಕೇರಳದ ಎಲೆಕ್ಟ್ರಾನಿಕ್ಸ್ ಶಾಪ್ನ ಜಾಹೀರಾತು ಈಗ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ.
“ನಮ್ಮಲ್ಲಿ ಶಾಪಿಂಗ್ ನಡೆಸಿದ 24 ಗಂಟೆಯೊಳಗೆ ಕೋವಿಡ್ ಪರೀಕ್ಷೆ ನಡೆಸಿ, ಪಾಸಿಟಿವ್ ದೃಢವಾದ ವಿಚಾರ ತಿಳಿಸಿದರೆ ಜಿಎಸ್ಟಿರಹಿತ 50 ಸಾವಿರ ರೂ. ಕ್ಯಾಶ್ಬ್ಯಾಕ್ ನೀಡುತ್ತೇವೆ’ ಎಂಬ ಶಾಪಿಂಗ್ ಮಾಲ್ನ ವಿಲಕ್ಷಣ ಜಾಹೀರಾತು ಜನಾಕ್ರೋಶಕ್ಕೆ ಕಾರಣವಾಗಿದೆ.
“ಈ ಆಫರ್ ಆಗಸ್ಟ್ 15- 30ರವರೆಗೆ ಮಾತ್ರ’ ಎಂಬ ಷರತ್ತಿನ ಜಾಹೀರಾತು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರಗೊಂಡಿತ್ತು. ಹಣ ಸಂಪಾದನೆಯ ಆಸೆಗಾಗಿ ಸಂಸ್ಥೆ ಮಾಲೀಕರು ಸೋಂಕನ್ನು ಉದ್ದೇಶಪೂರ್ವ ಕವಾಗಿ ಹಬ್ಬಿಸಲು ಯತ್ನಿಸಿದ್ದಾರೆ. ಸಾಮಾಜಿಕ ಹೊಣೆ ಮರೆತು ಬೇಜ ವಾಬ್ದಾರಿತನ ಪ್ರದರ್ಶಿಸಿ ದ್ದಾರೆ ಎಂದು ಆರೋಪಿಸಿ ಕೊಟ್ಟಾಯಂನ ಪಾಲಾ ಮುನ್ಸಿಪಾಲಿಟಿಯ ಕೌನ್ಸಿಲರ್ ಪ್ರಕರಣವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗಮನಕ್ಕೆ ತಂದಿದ್ದರು. ಸಿಎಂ ಕೂಡಲೇ ಶಾಪಿಂಗ್ ಮಾಲ್ ಅನ್ನು ಬಂದ್ ಮಾಡಲು ಆದೇಶಿಸಿದ್ದು, ಹೆಚ್ಚುವರಿ ತನಿಖೆಗೆ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.