ಕಮ್ಯೂನಿಷ್ಟ್ ಪಕ್ಷದ ರಹಸ್ಯ ಅಜೆಂಡಾ? ನೇಪಾಳದ ಹಲವು ಜಿಲ್ಲೆಗಳ ಭೂಭಾಗ ಚೀನಾ ವಶಕ್ಕೆ
ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ಮೌನಕ್ಕೆ ಶರಣಾಗಿದೆ
Team Udayavani, Aug 19, 2020, 1:21 PM IST
ಕಾಠ್ಮಂಡು/ಬೀಜಿಂಗ್: ಚೀನಾದ ವಸಾಹತುಶಾಹಿ ಬಲೆಗೆ ನೇಪಾಳ ಬಹುಬೇಗನೆ ಬಲಿಪಶುವಾಗುತ್ತಿರುವ ದೇಶವಾಗಿದೆ. ಚೀನಾ ನಿಧಾನವಾಗಿ ಹಾಗೂ ಹಂತ, ಹಂತವಾಗಿ ನೇಪಾಳದ ಹಲವಾರು ಸ್ಥಳಗಳನ್ನು ಅತಿಕ್ರಮಿಸಿದೆ ಎಂದು ವರದಿ ತಿಳಿಸಿದೆ.
ನೇಪಾಳ ಸರ್ಕಾರಿ ಸಂಸ್ಥೆಯ ಅಂಕಿಅಂಶದ ಪ್ರಕಾರ, ಚೀನಾ ಅಕ್ರಮವಾಗಿ ನೇಪಾಳದ ಭೂಮಿಯನ್ನು ಆಕ್ರಮಿಸಿಕೊಳ್ಳುತ್ತಿದೆ. ಈಗಾಗಲೇ ಏಳು ಜಿಲ್ಲೆಗಳ ಗಡಿಯನ್ನು ಆಕ್ರಮಿಸಿಕೊಂಡಿದೆ. ಅಲ್ಲದೇ ನಿಧಾನಕ್ಕೆ ಅತಿಕ್ರಮಣ ಮುಂದುವರಿಸಿದೆ ಎಂದು ತಿಳಿಸಿದೆ.
ನಿಜಕ್ಕೂ ಕಮ್ಯೂನಿಷ್ಟ್ ಆಡಳಿತದ ಚೀನಾದ ಭೂ ಅತಿಕ್ರಮಣದ ನಿಜವಾದ ಅಂಕಿಅಂಶವನ್ನು ನೇಪಾಳದ ಕಮ್ಯೂನಿಷ್ಟ್ ಪಕ್ಷ ಮುಚ್ಚಿಡಲು ಪ್ರಯತ್ನಿಸುತ್ತಿದೆ. ಚೀನಾ ನಿಜವಾಗಿ ಆಕ್ರಮಿಸಿಕೊಂಡ ಭೂಮಿ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೇಪಾಳ ಸರ್ಕಾರ ಬಹಿರಂಗಪಡಿಸುತ್ತಿಲ್ಲ. ಚೀನಾ ನೇಪಾಳದ ಹಲವು ಭೂಭಾಗವನ್ನು ಅತಿಕ್ರಮಿಸಿರುವುದಾಗಿ ಶಂಕಿಸಿರುವುದಾಗಿ ವರದಿ ವಿವರಿಸಿದೆ.
ಚೀನಾದ ಕಮ್ಯೂನಿಷ್ಟ್ ಪಕ್ಷದ ಭಯದಿಂದ ಚೀನಾ ಕಾನೂನುಬಾಹಿರವಾಗಿ ಭೂ ಭಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದರೂ ಕೂಡಾ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ನೇತೃತ್ವದ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ರಾಯಭಾರಿ ತಜ್ಞರು ವಿಶ್ಲೇಷಿಸಿದ್ದಾರೆ.
ಇದನ್ನು ಓದಿ: ನೇಪಾಲದ ಮೃದು ಮಾತು; ಬಿಕ್ಕಟ್ಟು ಶಮನವಾಗಲಿ
ನೇಪಾಳದ ಡೋಲಾಖ್, ಗೋರಖ್, ದಾರ್ಚೂಲಾ, ಹುಮ್ಲಾ, ಸಿಂಧುಪಾಲ್ ಚೌಕ್, ಸಂಖುವಾಸಭಾ ಮತ್ತು ರಾಸುವಾ ಜಿಲ್ಲೆಗಳು ಚೀನಾದ ಭೂ ಅತಿಕ್ರಮಣದ ಸಂಚಿಗೆ ಬಲಿಯಾಗಿರುವುದಾಗಿ ವರದಿ ಆರೋಪಿಸಿದೆ.
ಚೀನಾ ನೇಪಾಳದ ಡೋಲಾಖ್ ಪ್ರದೇಶದಲ್ಲಿ ಸುಮಾರು 1,500 ಮೀಟರ್ ನಷ್ಟು ದೂರ ಅಂತರಾಷ್ಟ್ರೀಯ ಗಡಿಯನ್ನು ವಿಸ್ತರಿಸಿದೆ. ಅದೇ ರೀತಿ ಡೋಲಾಖ್ ನ ಕೋರ್ಲಾಂಗ್ ಪ್ರದೇಶದಲ್ಲಿನ 57 ನಂಬರಿನ ಗಡಿ ಕಂಬವನ್ನು ಮುಂದಿಕ್ಕೆ ಹಾಕಿ ತನ್ನ ಜಾಗವನ್ನು ವಿಸ್ತರಿಸಿಕೊಂಡಿದೆ. ಅಲ್ಲದೇ ಮಾನವಹಕ್ಕು ಆಯೋಗ ವರದಿಯಂತೆ, ದಾರ್ಚುಲಾದ ಜಿಯೂಜಿಯು ಗ್ರಾಮವನ್ನು ಚೀನಾ ಅತಿಕ್ರಮಿಸಿದೆ. ನೇಪಾಳದ ಪ್ರದೇದಲ್ಲಿದ್ದ ಹಲವಾರು ಮನೆಗಳು ಇದೀಗ ಚೀನಾ ಸುಪರ್ದಿಗೆ ಸೇರಿದೆ ಎಂದು ಹೇಳಿದೆ.
ಕಳೆದ ಕೆಲವು ವರ್ಷಗಳಿಂದ ನೇಪಾಳದ ಕಮ್ಯೂನಿಷ್ಟ್ ಪಕ್ಷ ಚೀನಾ ಕಮ್ಯೂನಿಷ್ಟ್ ಪಕ್ಷ(ಸಿಸಿಪಿ)ದ ಕೈಗೊಂಬೆಯಂತೆ ಕುಣಿಯುತ್ತಿದೆ. ಇದರಿಂದಾಗಿ ನೇಪಾಳದ ಬಹುತೇಕ ನಿರ್ಧಾರಗಳಲ್ಲಿ ಚೀನಾ ಹಸ್ತಕ್ಷೇಪ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.
ಕೆಲವು ವಿಶ್ಲೇಷಕರ ಪ್ರಕಾರ, ನೇಪಾಳ ಪ್ರಧಾನಿ ಕೆಪಿ ಒಲಿ ಹಾಗೂ ಎನ್ ಸಿಪಿಯ ಪ್ರಚಂಡ ನಡುವಿನ ವೈಷಮ್ಯವನ್ನು ಬಗೆಹರಿಸುವ ಮಧ್ಯವರ್ತಿಯಂತೆ ನೇಪಾಳದಲ್ಲಿರು ಚೀನಾ ರಾಯಭಾರಿ ಕಾರ್ಯನಿರ್ವಹಿಸುತ್ತಿರುವ ಬೆಳವಣಿಗೆಯನ್ನು ಇಡೀ ಜಗತ್ತು ಗಮನಿಸುತ್ತಿದೆ. ಚೀನಾ-ನೇಪಾಳದ ಈ ಗೆಳೆತನ ಮತ್ತು ನೆರವು ನೀಡುತ್ತಿರುವ ಹಿಂದಿನ ಉದ್ದೇಶ ಚೀನಾದ ಭೂ ವಿಸ್ತರಣಾ ದಾಹದ ವಸಾಹತುಶಾಹಿಯ ಒಂದು ಭಾಗದ ಮುಂದುರಿಕೆಯಾಗಿದೆ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Pakistan: ಇಮ್ರಾನ್ ಬಿಡುಗಡೆಗೆ ಬೆಂಬಲಿಗರ ಪ್ರತಿಭಟನೆ: ಹಿಂಸಾಚಾರ, ಸಾವಿರಾರು ಜನರ ಬಂಧನ
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Cricket; ವೇಗಿ ಸಿದ್ದಾರ್ಥ್ ಕೌಲ್ ನಿವೃತ್ತಿ
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.