ಭಾರತದ ಮೊದಲ ಮಹಿಳಾ ಛಾಯಾಚಿತ್ರಗಾರ್ತಿ ಹೋಮೈ ವ್ಯರವಾಲ್ಲಾ

Team Udayavani, Aug 19, 2020, 7:50 PM IST

12

ಜಗತ್ತು ಎಷ್ಟು ಸುಂದರ. ಬೆಟ್ಟ, ಗುಡ್ಡ, ಹರಿವ ತೊರೆಗಳು, ಕಂಗೊಳಿಸುವ ಪರ್ವತ ಸಾಲು, ಅಸಂಖ್ಯಾತ ಜೀವ ಸಂಕುಲ, ಪ್ರಕೃತಿ ವಿಸ್ಮಯಗಳನ್ನು ನಮ್ಮ ಸ್ಮತಿ ಪಟಲದಲ್ಲಿ ಉಳಿಯುವಂತೆ ಮಾಡುವ ಛಾಯಾಚಿತ್ರ ಮಾನವ ಸಂಶೋಧನೆಯಲ್ಲಿ ಅತ್ಯಂತ ಮಹತ್ವ ಸ್ಥಾನವನ್ನು ಪಡೆದಿದೆ.

ತೆಗೆಯುವ ಫೋಟೋ ಹಿಂದೆ ಅದೆಷ್ಟೋ ಪರಿಶ್ರಮ ಅಡಕವಾಗಿರುತ್ತದೆ.

ಹೋಮೈ ವ್ಯರವಾಲ್ಲಾ ಈ ಹೆಸರನ್ನು ನೀವು ಕೇಳಿರಬಹುದು. ಈಕೆ ಇನ್ಯಾರು ಅಲ್ಲ ಭಾರತದ ಮೊದಲ ಮಹಿಳಾ ಫೋಟೋ ಜರ್ನಲಿಸ್ಟ್‌ .

1913ರ ಡಿಸೆಂಬರ್‌ 9ರಂದು ಗುಜರಾತ್‌ನ ಪಾರ್ಸಿ ಕುಟುಂಬದಲ್ಲಿ ಜನಿಸಿದ ಇವರು ಹೆಚ್ಚಿನ ಶಿಕ್ಷಣವನ್ನು ಮುಂಬಯಿನಲ್ಲಿ ಪೂರೈಸಿದರು.

ಸವಾಲಿನೊಂದಿಗಿನ ಸೆಣೆಸಾಟ
ಲಿಂಗ ತಾರತಮ್ಯ, ಸಂಪ್ರದಾಯಿಕ ಕಟ್ಟುಪಾಡುಗಳೊಂದಿಗೆ ವಿಶ್ವವನ್ನೇ ನಿಬ್ಬೆರಗಾಗಿಸುವ ಜಾಗತಿಕ ಯುದ್ಧ, ಸ್ವಾತಂತ್ರ್ಯ ಸಂಗ್ರಾಮ ಈಕೆ ಛಯಾಗ್ರಾಹಕಿಯಾಗಲು ಒಂದು ಸವಾಲೇ ಆಗಿತ್ತು. 1930ರಲ್ಲಿ ತಮ್ಮ ಛಾಯಾಗ್ರಹಣ ವೃತ್ತಿ ಆರಂಭಿಸಿದ ಇವರು ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಛಾಯಚಿತ್ರ ಸಂಗ್ರಹಿಸಿದ್ದು ಇಂದಿಗೂ ಅವು ಚಳುವಳಿಯ ಸಾಕ್ಷ್ಯರೂಪಕಗಳಾಗಿವೆ.

ಬರೀ ಹೋರಾಟ ಮಾತ್ರವಲ್ಲದೆ ಕಣಿವೆ, ಪರಿಸರ ಛಾಯಚಿತ್ರಗಳನ್ನೂ ಇವರು ಹೆಚ್ಚಾಗಿ ಇಷ್ಟಪಡುತ್ತಿದ್ದರಂತೆ. ಕೆಮರಾ ತಲೆಬುಡ ಗೊತ್ತಿಲ್ಲದಿದ್ದ ಅಂದಿನ ಜನಸಾಮಾನ್ಯರ ನಡುವೆ 2ನೇ ಜಾಗತಿಕ ಯುದ್ಧದ ಕಾಲದಲ್ಲಿ ವಾರಪತ್ರಿಕೆ ಎನಿಸಿದ “ದಿ ಲಸ್ಟರೆಟೆಡ್‌ ವಿಕ್ಲಿ ಆಫ್ ಇಂಡಿಯಾ’ ದಲ್ಲಿ ಅಧಿಕೃತವಾಗಿ ಕೆಲಸ ಆರಂಭಿಸಿದರು.

ಸ್ವಾತಂತ್ರ್ಯ ಸಂಗ್ರಾಮದ ಕಾಲಾವಧಿಯಲ್ಲಿ ಮಹಾತ್ಮ ಗಾಂಧೀಜಿ, ನೆಹರೂ ಮುಂತಾದ ರಾಷ್ಟ್ರ ನಾಯಕರೊಂದಿಗೆ ಒಡನಾಟಹೊಂದಿದ್ದು ಆ ಕಾಲಾವಧಿಯ ಚಿತ್ರ ಸಂಗ್ರಹದಲ್ಲಿ ಪ್ರಮುಖ ಸ್ಥಾನ ಹೊಂದಿದ್ದಾರೆ. ಬಳಿಕ “ಲೈಫ್’ ಎಂಬ ನಿಯತಕಾಲಿಕೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದು ಬ್ರಿಟೀಷ್‌ ಮಾಹಿತಿ ಕಾರ್ಯಾಗಾರದಲ್ಲೂ (ಇ‌ನ್ಫಾರ್ಮೇಷನ್‌ ಸರ್ವಿಸಸ್‌) ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಇವರ ಸೇವೆಗೆ 2010ರಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ “ಜೀವಮಾನ ಸಾಧನೆ ಪ್ರಶಸ್ತಿ’ ಲಭಿಸಿದೆ.

ಇವರ ಜನ್ಮದಿನದ 104ರ ಸಂಭ್ರಮಕ್ಕೆ ಗೂಗಲ್‌ ಡೂಡಲ್‌ನಲ್ಲಿ ಫ‌ಸ್ಟ್‌ ಲೇಡಿ ಆಫ್ ಲೆನ್ಸ್‌ ಎಂಬ ಹೆಗ್ಗಳಿಕೆಯನ್ನು ಸಹ ನೀಡಿದೆ. ಅತ್ಯತ್ತಮ ಮಹಿಳಾ ಮಾಧ್ಯಮ ಸಾಧಕಿ ಎನಿಸಿರುವ ಇವರಿಗೆ ಚಮಲ್‌ ದೇವಿ ಜೈನ್‌ ಪ್ರಶಸ್ತಿ, 2011ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯೂ ಸಂದಿದೆ.

13ರ ನೆನಪು
ಇವರ ಛಾಯಾಗ್ರಹಣದ ಮತ್ತೂಂದು ವಿಶೇಷತೆಯೆಂದರೆ ಸಂಗ್ರಹಿಸಿದ ಛಾಯಾಚಿತ್ರವೆಲ್ಲವೂ “ದಲದ್‌13′ ಎಂಬ ನಾಮಾಂಕಿತದಲ್ಲಿ ಪ್ರಕಟಿಸಲಾಗುತ್ತಿತ್ತು. ಆಕೆ ಜನಿಸಿದ್ದು, ಪತಿಯನ್ನು ಭೇಟಿ ಮಾಡಿದ್ದು, ಕಾರಿನ ಸಂಖ್ಯೆ ಎಲ್ಲವೂ 13 ಆಗಿದ್ದು ಇದನ್ನೇ ಅದೃಷ್ಟ ಸಂಖೆಯಾಗಿ ಆಯ್ಕೆ ಮಾಡಿರುವುದನ್ನು ಕಾಣಬಹುದು.

ಹಿಂದಿನ ಕಾಲದಲ್ಲಿ ಫೋಟೋ ಜರ್ನಲಿಸ್ಟ್‌ಗೂ ಸಹ ಡ್ರೆಸ್‌ಕೊಡ್‌, ಕೆಲವು ಶಿಸ್ತುಬದ್ಧ ನಿಯಮಗಳಿದ್ದವಂತೆ. ಬದಲಾದ ಕಾಲಘಟ್ಟಕ್ಕೆ ಫೋಟೋಗ್ರಫಿಯ ಒಂದು ಲಾಭದಾಯಕ ಹುದ್ದೆಯಾಗಿ ಪರಿವರ್ತಿಸುವ ವರ್ಗವನ್ನು ಕಂಡು ಬೆಸತ್ತು ಮತ್ತು ಪತಿ ಮನೇಕ್‌ಶಾ ಜಮ್‌ಸೇಟ್‌ಜಿ ಅವರು 1969ರಲ್ಲಿ ನಿಧನ ಹೊಂದಿದರು. ಪತಿ ಅಗಲಿಕೆಯ ನೋವು ಅವರನ್ನು ವೃತ್ತಿಜೀವನಕ್ಕೆ (1973) ವಿದಾಯ ಹೇಳುವಂತೆ ಮಾಡಿತು.

ರವಿ ಕಾಣದ್ದನ್ನು ಕವಿ ಕಂಡಂತೆ ನಮ್ಮಲ್ಲಿರುವ ಅದೆಷ್ಟೊ ನೆನಪುಗಳನ್ನು ಮೆಲುಕಿಸುವ ಫೋಟೋ ಎಂದೆದಿಗೂ ಜೀವಂತವೆನ್ನಬಹುದು. 2013ರಲ್ಲಿ ಇವರು ಮರಣಹೊಂದಿದರೂ ಇವರ ಚಿತ್ರಸಂಗ್ರಹಗಳು ಮುಂಬಯಿಯ ನ್ಯಾಷನಲ್‌ ಗ್ಯಾಲರಿಯಲ್ಲಿ ಇಂದಿಗೂ ಅವರ ಜೀವಂತಿಕೆಯನ್ನು ಪ್ರಸ್ತುತ ಪಡಿಸುತ್ತಲೇ ಇವೆ.

 ರಾಧಿಕಾ, ಕುಂದಾಪುರ 

ಟಾಪ್ ನ್ಯೂಸ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ

4

BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Government School: ಅಳಿವಿನಂಚಿನಲ್ಲಿ ನನ್ನೂರ ಸರಕಾರಿ ಶಾಲೆ

12-uv-fusion

UV Fusion: ಹಬ್ಬ ಹರಿದಿನಗಳಲ್ಲಿ ಯುವಜನರ ಪಾತ್ರ

11-uv-fusion

UV Fusion: ಹುಲಿ ವೇಷವೆಂಬ ವಿಸ್ಮಯ

9-uv-fusion

Family: ನಾವು ನಮ್ಮವರೊಂದಿಗೆ ಕಳೆಯುವ ಸಮಯ ಅಮೂಲ್ಯ

8-uv-fusion

Ratan Tata: ಉದ್ಯಮ ಕ್ಷೇತ್ರದ ಅಜಾತಶತ್ರು ರತನ್‌ ಟಾಟಾ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Baaghi 4: ಟೈಗರ್‌ ಶ್ರಾಫ್‌ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್‌ ಔಟ್

Youth assaulted near Belagavi airport compound

Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.