ಸೌದಿ: ಪಾಕ್‌ಗೆ ಮುಖಭಂಗ: ಸೇನಾ ಮುಖ್ಯಸ್ಥನ ಭೇಟಿಗೆ ರಾಜಕುಮಾರ ನಿರಾಕರಣೆ
Team Udayavani, Aug 20, 2020, 6:47 AM IST
ರಿಯಾದ್: ಮುನಿಸಿಕೊಂಡಿರುವ ಸೌದಿ ಅರೇಬಿಯಾವನ್ನು ಸಂತೈಸಲು ಹೋಗಿದ್ದ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗವಾಗಿದೆ.
ಪಾಕ್ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬಜ್ವಾ ರಿಯಾದ್‌ಗೆ ಧಾವಿಸಿ ಬಂದಿದ್ದರೂ ಸೌದಿಯ ರಾಜಕುಮಾರ ಮೊಹ್ಮದ್ ಬಿನ್ ಸಲ್ಮಾನ್ ಭೇಟಿಗೆ ನಿರಾಕರಿಸಿದ್ದಾರೆ.
ಕೊನೆಗೆ ದಾರಿಯಿಲ್ಲದೆ ರಾಜಕುಮಾರನ ಕಿರಿಯ ಸಹೋದರನೂ ಆಗಿರುವ ಉಪರಕ್ಷಣ ಸಚಿವ ಶೇಖ್ ಖಲೀದ್ ಬಿನ್ ಸಲ್ಮಾನ್ ಮತ್ತು ಸೌದಿ ಸೇನೆಯ ಮೇಜರ್ ಜನರಲ್ ಫಾಯದ್ ಅಲ್ ರುವಾಯಿಲಿ ಜತೆಗೆ ನೆಪ ಮಾತ್ರಕ್ಕೆ ನಿಮಿಷಗಳ ಕಾಲ ಮಾತುಕತೆ ನಡೆಸಿ ಪಾಕ್ ಪರವಾಗಿ ಕ್ಷಮೆ ಕೋರಿದ್ದಾರೆ.
ಈ ವೇಳೆ ಬಜ್ವಾಗೆ ಐಎಸ್‌ಐ ಮುಖ್ಯಸ್ಥ ಜನರಲ್ ಫೈಜ್ ಹಮೀದ್ ಸಾಥ್ ನೀಡಿದ್ದರು ಎಂದು ತಿಳಿದು ಬಂದಿದೆ. ನಿಷ್ಫಲ ಭೇಟಿಯ ಅನಂತರ ಇಬ್ಬರೂ ಜೆಡ್ಡಾದಿಂದ ಮೆಕ್ಕಾಕ್ಕೆ ಉಮ್ರಾ ಯಾತ್ರೆ ಕೈಗೊಂಡಿದ್ದಾರೆ.
ಕ್ಷಮೆ ಕೇಳಿದರೆ ಸಾಕಾ?
ಬಜ್ವಾ ಕ್ಷಮೆ ಯಾಚನೆಯಿಂದ ಸೌದಿ ತಣ್ಣಗಾಗಿಲ್ಲ. ಕೇವಲ ಕ್ಷಮೆ ಕೋರಿದರೆ ಎಲ್ಲ ಸರಿಹೋಗುತ್ತದೆಯೇ? ಎಂದು ಸೌದಿ ಖಡಕ್ಕಾಗಿ ಪ್ರಶ್ನಿಸಿದೆ. ವೈಮನಸ್ಸು ತಣಿಸಲು ಸ್ವತಃ ಸಲ್ಮಾನ್ ಆಡಳಿತಕ್ಕೆ ಇಷ್ಟವಿಲ್ಲ ಎಂದು ತಿಳಿದುಬಂದಿದೆ.
ಇಸ್ಲಾಮಿಕ್ ಸಹಕಾರ ಸಂಘಟನೆ (ಐಒಸಿ) ನಾಯಕತ್ವ ವಹಿಸಿರುವ ಸೌದಿ, ಕಾಶ್ಮೀರ ವಿಚಾರದಲ್ಲಿ ಮೌನವಾಗಿದೆ ಎಂದು ಪಾಕ್, ಇಸ್ಲಾಂ ರಾಷ್ಟ್ರಗಳ ಮುಂದೆ ಬಹಿರಂಗವಾಗಿ ಆರೋಪಿಸಿತ್ತು. ಇದನ್ನು ಕೇಳಿ ಸಿಡಿದಿರುವ ಸೌದಿ, ‘ನಿಮಗೆ ಸಾಲವೂ ಇಲ್ಲ, ತೈಲವೂ ಇಲ್ಲ’ ಎಂದು ಗರಂ ಆಗಿ ಹೇಳಿತ್ತು. ಸಾಲ ಮತ್ತು ರಫ್ತು ಒಪ್ಪಂದವನ್ನೇ ರದ್ದುಗೊಳಿಸಿತ್ತು. ಸೌದಿಯ ಈ ನಿಲುವು ಪಾಕ್‌ಗೆ ನುಂಗಲಾರದ ತುತ್ತಾಗಿದೆ.
ಚೀನದ ಕಾಲು ಹಿಡಿಯುವುದೇ ಪಾಕ್?
ಈಗಾಗಲೇ ಸೌದಿ ಜತೆಗೆ 2018ರ 6.2 ಬಿಲಿಯನ್ ಡಾಲರ್ ಪ್ಯಾಕೇಜ್ ಸೇರಿದಂತೆ ಸಾಕಷ್ಟು ಸಾಲಗಳನ್ನು ಪಾಕ್ ಬಾಕಿ ಉಳಿಸಿಕೊಂಡಿದೆ. ಅವುಗಳನ್ನು ಹಂತಹಂತವಾಗಿ ಮರಳಿಸಬೇಕೆನ್ನುವ ಒತ್ತಡವೂ ಈಗ ಇಮ್ರಾನ್ ಸರಕಾರದ ಮೇಲಿದೆ. ಮತ್ತೆ ಚೀನದ ಕಾಲು ಹಿಡಿದು, ಪಾಕ್ ಆ ಹಣವನ್ನು ಸೌದಿಗೆ ಮರಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮೋದಿ ಬಾಂಧವ್ಯಕ್ಕೆ ಸಂದ ಜಯ
ಕಳೆದ 6 ವರ್ಷಗಳಲ್ಲಿ ಅರಬ್ ರಾಷ್ಟ್ರ ಗಳೊಂದಿಗೆ ನರೇಂದ್ರ ಮೋದಿ ನಾಯಕತ್ವದ ಭಾರತ ಉತ್ತಮ ಸಂಬಂಧ ಕಾಯ್ದುಕೊಂಡಿದೆ. ಈ ಅವಧಿಯಲ್ಲಿ ಪಾಕ್, ಟರ್ಕಿಯೊಂದಿಗೆ ಸಖ್ಯ ಸಾಧಿಸುತ್ತಾ ಮೈಮರೆತಿತ್ತು. ಟರ್ಕಿ ಅಧ್ಯಕ್ಷ ಎರ್ಡೋಗನ್ ತಾಳಕ್ಕೆ ತಕ್ಕಂತೆ ಪಾಕ್ ಕುಣಿದಿತ್ತು. ಪಾಕನ್ನು ಸೌದಿ ದೂರ ತಳ್ಳಲು ಇದೂ ಒಂದು ಪ್ರಮುಖ ಕಾರಣ ಎಂದು ರಾಜತಾಂತ್ರಿಕರು ವಿಶ್ಲೇಷಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.