ಸೂರ್ಯಕಾಂತ್ ಪಂಡಾ ; ದಿನಸಿ ಅಂಗಡಿಯಿಂದ ಐಪಿಎಲ್‌ನತ್ತ…
Team Udayavani, Aug 20, 2020, 6:30 AM IST
ಕೋಲ್ಕತಾ: ಅದೆಷ್ಟೋ ಮಂದಿ ಅನಾಮಧೇಯರ ಪಾಲಿಗೆ ಭರವಸೆಯ ಬೆಳಕು ಮೂಡಿಸಿದ ಕೂಟವೆಂದರೆ ಐಪಿಎಲ್.
ಇದೀಗ ಪಶ್ಚಿಮ ಬಂಗಾಲದ ಹೂಗ್ಲಿ ಜಿಲ್ಲೆಯ ಚಿನ್ಸುರಾಹ್‌ನ ದಿನಸಿ ಅಂಗಡಿಯಲ್ಲಿ ದಿನಗೂಲಿ ನೌಕರನಾಗಿ ದುಡಿಯುತ್ತಿದ್ದ ಸೂರ್ಯಕಾಂತ್ ಪಂಡಾ ಪಾಲಿಗೆ ಐಪಿಎಲ್ ಅದೃಷ್ಟದ ಬಾಗಿಲು ತೆರೆದಿದೆ.
ಪಂಡಾ ಈ ಬಾರಿಯ ಲೀಗ್‌ನಲ್ಲಿ ಎಲೆಕ್ಟ್ರಾನಿಕ್ ಸ್ಕೋರರ್ ಆಗಿ ಕರ್ತವ್ಯ ನಿಭಾಯಿಸಲು ಆಹ್ವಾನ ಪಡೆದಿದ್ದಾರೆ.
ಮೂಲತಃ ಒಡಿಶಾದವರಾದ ಪಾಂಡಾಗೆ 32 ವರ್ಷ. ಓದಿದ್ದು 10ನೇ ತರಗತಿ ಮಾತ್ರ. ಕ್ರಿಕೆಟಿಗನಾಗಬೇಕೆಂಬುದು ಆಸೆಯಾಗಿತ್ತು. ಕನಸು ಕಟ್ಟಿಕೊಂಡು ಕೋಲ್ಕತಾಕ್ಕೆ ಹೋದವನಿಗೆ ಕ್ರಿಕೆಟಿಗನಾಗುವುದು ಅಷ್ಟು ಸುಲಭವಲ್ಲ ಎಂಬುದು ಮನವರಿಕೆಯಾಯಿತು. ಜತೆಗೆ ಎಳೆವೆ ಯಲ್ಲೇ ಹೆತ್ತವರನ್ನು ಕಳೆದುಕೊಳ್ಳಬೇಕಾಯಿತು.
ಹೊಟ್ಟೆಪಾಡಿಗಾಗಿ ದಿನಸಿ ಅಂಗಡಿಯೊಂದರಲ್ಲಿ ದುಡಿಯತೊಡಗಿದರು. ಆದರೆ ಹೂಗ್ಲಿ ಜಿಲ್ಲಾ ನ್ಪೋರ್ಟ್ಸ್ ಅಸೋಸಿಯೇಶನ್ (ಎಚ್‌ಡಿಎಸ್‌ಎ) ನಂಟು ಬಿಡಲಿಲ್ಲ.
ಕ್ಯಾಬ್ ಪರೀಕ್ಷೆಯಲ್ಲಿ ತೇರ್ಗಡೆ
ಕೊನೆಗೆ ಸ್ಕೋರರ್ ಆಗಲು ನಿರ್ಧರಿಸಿದರು. 2015ರಲ್ಲಿ ‘ಕ್ಯಾಬ್’ ಪರೀಕ್ಷೆ ಕಟ್ಟಿ ತೇರ್ಗಡೆಯಾದರು. 2018ರಲ್ಲಿ ‘ಬೆಸ್ಟ್ ಸ್ಕೋರರ್’ ಪ್ರಶಸ್ತಿ ಕೂಡ ಒಲಿದು ಬಂತು. ಕ್ಯಾಬ್ ಕಾರ್ಯದರ್ಶಿ ಅವಿಷೇಕ್ ದಾಲ್ಮಿಯಾ ಅವರಿಂದ ಇದನ್ನು ಸ್ವೀಕರಿಸಿದ್ದು ಪಂಡಾ ಬದುಕಿನ ಸ್ಮರಣೀಯ ಕ್ಷಣವಾಗಿದೆ. ಕೌಶಿಕ್ ಸಾಹಾ, ರಕ್ತಿಮ್ ಸಾಧು ಅವರು ಪಂಡಾಗೆ ಮೆಂಟರ್ ಆಗಿದ್ದರು.
ದಿನಸಿ ಅಂಗಡಿ ಮಾಲಕ ಬಿಸ್ವನಾಥ್ ಸಂಪೂರ್ಣ ಬೆಂಬಲ ನೀಡಿದರು. ಫುಟ್‌ಬಾಲ್ ಆಗಬೇಕೆಂದು ಬಯಸಿದ್ದ ಬಿಸ್ವನಾಥ್ ಅನಿವಾರ್ಯವಾಗಿ ತಂದೆಯ ಅಂಗಡಿ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗಿದ್ದರು. ಪಂಡಾ ಬದುಕಿಗೆ ಕ್ರೀಡೆ ಅದೆಷ್ಟು ಮಹತ್ವದ್ದಾಗಿದೆ ಎಂಬುದನ್ನು ಅರಿತ ಬಿಸ್ವನಾಥ್, ತಮ್ಮ ಕುಟುಂಬದ ಸದಸ್ಯನಂತಿರುವ ‘ಸ್ಕೋರರ್’ಗೆ ಶುಭ ಹಾರೈಸಿದ್ದಾರೆ. ಎಚ್‌ಡಿಎಸ್‌ಎ ಕೂಡ ಬೆಸ್ಟ್ ಆಫ್ ಲಕ್ ಹೇಳಿದೆ.
ದುಬಾೖಗೆ ಹೋಗಿ ಆಟಗಾರರ ಆಟೊಗ್ರಾಫ್ ಪಡೆಯುವುದು ನನ್ನ ಕೆಲಸವಲ್ಲ. ಸ್ಕೋರಿಂಗ್ ವಿಧಾನವನ್ನು ಕೂಲಂಕಷವಾಗಿ ಗಮನಿಸಿ ಕರ್ತವ್ಯಕ್ಕೆ ನ್ಯಾಯ ಒದಗಿಸಬೇಕಿದೆ.
– ಸೂರ್ಯಕಾಂತ್ ಪಂಡಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.