ಉತ್ತರ ಕೊರಿಯಾದಲ್ಲಿ ಈಗ ಸಾಕುನಾಯಿಗಳೇ ಮಾಂಸಾಹಾರ!
Team Udayavani, Aug 20, 2020, 11:03 AM IST
ಸಿಯೋಲ್: ಮಾಂಸಾಹಾರ ಪೂರೈಕೆಯ ತೀವ್ರ ಬಿಕ್ಕಟ್ಟು ತಲೆದೋರಿರುವ ಉತ್ತರ ಕೊರಿಯಾದಲ್ಲಿ ಈಗ ಸಾಕುನಾಯಿಗಳನ್ನು ಮಾಂಸಕ್ಕೆ ಬಳಸಿಕೊಳ್ಳಲು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತ ಕಟ್ಟಾಜ್ಞೆ ಹೊರಡಿಸಿದೆ.
ಬಡವರು ಜಾನುವಾರುಗಳನ್ನು ಸಾಕಿ ದರೆ, ಶ್ರೀಮಂತರು ಸಾಕುನಾಯಿಗಳನ್ನು ಹೊಂದಿರುತ್ತಾರೆ. ಸಾಕು ನಾಯಿಗಳು ಪಾಶ್ಚಾತ್ಯ ಬೂಜ್ವಾ ಸಿದ್ಧಾಂತದ ಐಷಾರಾ ಮಿಯ ಸಂಕೇತ. ಈ ಕಾರಣದಿಂದಾಗಿ ಸಾಕು ನಾಯಿಗಳನ್ನು ಮಾಂಸಾಹಾರಕ್ಕೆ ಬಳಸಿ ಕೊಳ್ಳಲು ಕಿಮ್ ಜಾಂಗ್ ಉನ್ ನಿರ್ಧ ರಿಸಿದ್ದಾರೆ ಎಂದು ಉತ್ತರ ಕೊರಿ ಯಾದ ಪತ್ರಿಕೆಗಳು ವರದಿಮಾಡಿವೆ.
ಉತ್ತರ ಕೊರಿಯಾ ತನ್ನ ಬಹುಪಾಲು ಮಾಂಸಾಹಾರವನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು. ಕೊರೊನಾ ಹಿನ್ನೆಲೆ ಯಲ್ಲಿ ಶೇ.90ರಷ್ಟು ಆಹಾರ ಪೂರೈಕೆ ನಿಂತು ಹೋಗಿದ್ದು, ಶೇ.60ರಷ್ಟು ಜನರ ಆಹಾರಕ್ಕೆ ತೀವ್ರ ಕೊರತೆ ಎದು ರಾಗಿದೆ. ಈ ಕಾರಣದಿಂದಾಗಿ ಶ್ರೀಮಂತರು ಹೊಂದಿರುವ ಸಾಕು ನಾಯಿಗಳನ್ನು ರೆಸ್ಟೋರೆಂಟ್ಗಳಿಗೆ ಬಿಟ್ಟು ಕೊಡಬೇಕು ಎಂದು ಆದೇಶಿಸಲಾಗಿದೆ.
ರಹಸ್ಯ ಸಭೆ
ಕಿಮ್ ಜಾಂಗ್ ಉನ್ ಎಂಟು ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಬುಧವಾರ ಆಡಳಿತ ಪಕ್ಷದ ರಹಸ್ಯ ಸಭೆ ನಡೆಸಿದ್ದಾರೆ. ಕೊರಿಯನ್ ಕ್ರಾಂತಿಯ ಆಶಯದಂತೆ ಪಕ್ಷ ಬಲ ವರ್ಧನೆ, ಕೊರೊನಾದಿಂದ ಹದ ಗೆಟ್ಟಿರುವ ಆರ್ಥಿಕ ಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಚರ್ಚೆಗಳು ನಡೆದಿವೆ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia 200 ಕ್ಷಿಪಣಿ, ಡ್ರೋನ್ಗಳಿಂದ ದಾಳಿ: ಕತ್ತಲೆಯಲ್ಲಿ ಉಕ್ರೇನ್ನ 10 ಲಕ್ಷ ಮನೆ!
America:ಭಾರತೀಯ ಮೂಲದ ವೈದ್ಯರಿಗೆ 17 ಕೋಟಿ ರೂ. ದಂಡ
Bangladesh; ಚಿನ್ಮಯಿ ಕೃಷ್ಣದಾಸ್ಗೂ ನಮಗೂ ಸಂಬಂಧವಿಲ್ಲ: ಇಸ್ಕಾನ್ ಸ್ಪಷ್ಟನೆ
Bangladesh:ಇಸ್ಕಾನ್ ನಿಷೇಧಿಸಲು ನಿರಾಕರಿಸಿದ ಬಾಂಗ್ಲಾದೇಶ ಹೈಕೋರ್ಟ್,ಸರ್ಕಾರಕ್ಕೆ ಮುಖಭಂಗ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.