ದಾಂಡೇಲಿ: ಕ್ಲಿನಿಕಿಗೆ ಬಂದು ಚಿಕಿತ್ಸೆ ಪಡೆದ ಗಾಯಗೊಂಡ ಕೋತಿ
Team Udayavani, Aug 20, 2020, 2:54 PM IST
ದಾಂಡೇಲಿ: ತನ್ನ ಬಳಗದಿಂದ ಬೇರ್ಪಟ್ಟು ಸಮಾಜದ ಜನತೆಯ ಜತೆ ಅಂಜಿಕೆ, ಅಳುಕಿಲ್ಲದೇ ಒಡನಾಟ ಬೆಳೆಸಿಕೊಂಡ ಕೋತಿಯೊಂದು ಕ್ಲಿನಿಕ್‌ಗೆ ಬಂದು ಚಿಕಿತ್ಸೆ ಪಡೆದ ವಿಡಿಯೋವೊಂದು ವೈರಲ್ ಆಗಿದೆ. ತನ್ನ ಕಾಲಿಗೆ ಗಾಯ ಮಾಡಿಕೊಂಡಿದ್ದ ಈ ಕೋತಿ ಚಿಕಿತ್ಸೆಗಾಗಿ ನಗರದ ಕಲಾಪ್ರಸಾದ ಮೆಡಿಕಲ್ ಬಳಿಯಿರುವ ಡಾ| ರಶ್ಮಿ ಕಂಬದಕೋಣೆಯವರ ಕ್ಲಿನಿಕ್ ಬಳಿ
ಬಂದು ಅಂಗಲಾಚುತ್ತಿತ್ತು. ಇದನ್ನು ಗಮನಿಸಿದ ಡಾ| ರಶ್ಮಿಯವರು ತಕ್ಷಣವೇ ಪಕ್ಕದ ಮೆಡಿಕಲ್ ಮಾಲಕ ಉಮೇಶ ಸಪ್ರಯವರನ್ನು ಕರೆಯಿಸಿ, ಅವರ ಸಹಾಯ ಪಡೆದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆಯ ವಿಡಿಯೋವೊಂದು ಬುಧವಾರ ನಗರದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ. ಕಳೆದ ಎರಡು ಮೂರು ತಿಂಗಳುಗಳಿಂದ ನಗರದಲ್ಲಿ ಸುದ್ದಿಯಲ್ಲಿರುವ ಈ ಹನುಮ ತನಗೆ ಗಾಯವಾಯಿತೆಂದರೆ ತಕ್ಷಣವೇ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳ ಬಾಗಿಲ ಮುಂದೆ ಕುಳಿತುಕೊಂಡು ತನ್ನದೇ ಆದ ಹಾವಭಾವದಲ್ಲಿ ಚಿಕಿತ್ಸೆ ಕೇಳುತ್ತದೆ. ಚಿಕಿತ್ಸೆ ಪಡೆದ ಬಳಿಕವಷ್ಟೆ ಅಲ್ಲಿಂದ ತನ್ನ ಪಾಡಿಗೆ ತಾನು
ಹೊರಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.