ಗಣೇಶನ ಆರಾಧನೆಗೆ ಯಾವುದೇ ಕಾಲಮಿತಿಯಿಲ್ಲ: ಶಂಕರ ಭಟ್
Team Udayavani, Aug 20, 2020, 3:00 PM IST
ಹೊನ್ನಾವರ: ಎಲ್ಲ ಶುಭ ಕಾರ್ಯಕ್ರಮದಲ್ಲೂ ಪ್ರಥಮ ವಂದಿತ ಗಣಪತಿ ಆರಾಧನೆ ನಡೆಸಲಾಗುತ್ತದೆ. ವಿಶೇಷವಾಗಿ ಗಣೇಶ ಚತುರ್ಥಿ ಆಚರಿಸುತ್ತ ಬಂದಿರುವುದು ನಮ್ಮ ಧಾರ್ಮಿಕ ಪರಂಪರೆ. ಆ ಪುಣ್ಯದಿನದಂದು ಗಣೇಶಮೂರ್ತಿಯನ್ನು ತಂದು
ಪ್ರತಿಷ್ಠಾಪಿಸಿ, ಆರಾಧಿಸುವುದು ಸಾಧ್ಯವಿಲ್ಲವಾದಾಗ ನವರಾತ್ರಿ ಅಥವಾ ಮಾಘ ಚೌತಿಯಲ್ಲಿ ಗಣಪತಿಯ ವಿಶೇಷ ಉತ್ಸವ ಮಾಡುತ್ತ ಬರಲಾಗಿದೆ. ಇಲ್ಲಿ ಗಣೇಶನ ಪೂಜೆ, ಆರಾಧನೆ ಮುಖ್ಯವೇ ವಿನಃ ದಿನ ಮುಖ್ಯಲ್ಲ. ಸರ್ಕಾರಿ ಆದೇಶದಂತೆ ಈ ಬಾರಿ
ಗಣೇಶೋತ್ಸವ ಆಚರಿಸುವುದು ಎಲ್ಲರ ದೃಷ್ಠಿಯಿಂದಲೂ ಅನಿವಾರ್ಯವಾಗಿದೆ. ಈ ನಿಯಮಾವಳಿ ಕಟ್ಟುಪಾಡುಗಳು
ಬೇಡ ಎಂದಿದ್ದವರು ಮಾಘದಲ್ಲಿ ಗಣೇಶ ಚೌತಿ ಆಚರಿಸಬಹುದು. ಅಂದು ಧುಂಡಿರಾಜವೃತ ಅಂದರೆ ಗಣೇಶನ ಆರಾಧನೆ ಮಾಡುವುದು ಸಂಪ್ರದಾಯವಾಗಿ ಬೆಳೆದು ಬಂದಿದೆ.
ಸಹಜ ದಿನಗಳಲ್ಲೂ ಸೂತಕ, ಇತ್ಯಾದಿ ಬಂದಾಗ ಚೌತಿ ತಪ್ಪಿದರೆ ನವರಾತ್ರಿ ಚೌತಿ ಅಥವಾ ಮಾಘಶುದ್ಧ ಚೌತಿಯಂದು
ಗಣಪತಿ ತಂದು ಕೂರಿಸಿ ಪೂಜೆ ಮಾಡುತ್ತಾರೆ. ಈ ಎಲ್ಲ ದಿನಗಳು, ಎಲ್ಲ ಶುಭ ಸಂಕಲ್ಪಗಳು ಗಣೇಶನ ಆರಾಧನೆಗೆ ಯೋಗ್ಯವೇ ಆಗಿದೆ. ಅನಿವಾರ್ಯ ಕಾರಣದಿಂದ ಗಣೇಶ ಚೌತಿ ತಪ್ಪಿದರೆ ಯಾವ ದೋಷವೂ ಇಲ್ಲ ಎಂದು ಹೆಸರಾಂತ ತಂತ್ರಾಗಮ ಪಂಡಿತ ಶಂಕರ ಭಟ್ ಕಟ್ಟೆ ಹೇಳಿದ್ದಾರೆ. ಯಾವತ್ತೂ ಹೋಮ, ಹವನ, ದೇವತಾರಾಧನೆಗಳಲ್ಲಿ ಸತ್‌ಸಂಕಲ್ಪ, ಸದುದ್ದೇಶ, ಶ್ರದ್ಧಾಭಕ್ತಿ ಮುಖ್ಯವೇ ವಿನಃ ಇತರ ಸಂಗತಿಗಳಲ್ಲ. ಶಾಸ್ತ್ರದಲ್ಲಿ ಈ ವಿಷಯಗಳಿಗೆ ಹೆಚ್ಚು ಮಹತ್ವ ಕೊಡಲಾಗಿದೆ ಎಂದು ಅವರು ಹೇಳಿದ್ದಾರೆ.
ತಂತ್ರಾಗಮ ಪಾಂಡಿತ್ಯ ಪ್ರಸಿದ್ಧವಾದ ಕಟ್ಟೆ ಕುಟುಂಬದಲ್ಲಿ ಜನಿಸಿದ ಶಂಕರ ಪರಮೇಶ್ವರ ಭಟ್ಟ ಕಟ್ಟೆ ಇವರು ದೇವಾಲಯ
ಸ್ಥಾಪನೆ, ಪುನಃಪ್ರತಿಷ್ಠೆ, ವರ್ಧಂತಿ, ಜಾತ್ರಾ ಮಹೋತ್ಸವ ಮೊದಲಾದ ಆಗಮಶಾಸ್ತ್ರದ ಧಾರ್ಮಿಕ ಕಾರ್ಯಕ್ರಮ ನಡೆಸುವಲ್ಲಿ ಸಿದ್ಧಹಸ್ತರು. ಇವರಿಂದ ಹಾಗೂ ಇವರ ತಂದೆಯವರಿಂದ ಸಾವಿರಾರು ದೇವಾಲಯಗಳು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ
ಪ್ರತಿಷ್ಠಾಪಿಸಲ್ಪಟ್ಟಿದೆ. ಗಣೇಶ ಚತುರ್ಥಿಯನ್ನು ಭಾದ್ರಪದ ಮಾಸದಲ್ಲಿ ಆಚರಿಸಬೇಕು ಅಥವಾ ಅನಿವಾರ್ಯ ಸಂದರ್ಭದಲ್ಲಿ ನವರಾತ್ರಿ ಮತ್ತು ಮಾಘಮಾಸದಲ್ಲಿ ಚೌತಿ ಆಚರಿಸುವ ಪರಂಪರೆ ಇರುವುದರಿಂದ ಈಗ ಸರ್ಕಾರದ ಪರವಾನಗಿ
ದೊರೆಯದಿದ್ದರೆ ನಂತರ ಆಚರಿಸುವುದರ ಲಾಭ ಹಾನಿಗಳೇನು ಎಂಬ ಕುರಿತು ಸಾರ್ವಜನಿಕರಲ್ಲಿ ತೀವ್ರ ಕುತೂಹಲವಿದೆ.
ಇದಕ್ಕೆ ಕಟ್ಟೆ ಶಂಕರ ಭಟ್ ಅವರು ಮೇಲಿನಂತೆ ವಿವರಣೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.