ಕೇರಳ ರಸ್ತೆ ಬಂದ್: ಅತಂತ್ರರಾದ ಗ್ರಾಮಸ್ಥರು,ಬಂದ್ ತೆರವಿಗೆ ಜಿಲ್ಲಾಧಿಕಾರಿಗಳಿಗೆ ಮನವಿ
Team Udayavani, Aug 20, 2020, 4:43 PM IST
ಈಶ್ವರಮಂಗಲ: ಕರ್ನಾಟಕದ ಪ್ರದೇಶದಲ್ಲಿ ಹಾದು ಹೋಗುತ್ತಿರುವ ಕೇರಳ ಲೋಕೋಪಯೋಗಿ ರಸ್ತೆಯನ್ನು ಕೇರಳ ಸರಕಾರ ಬಂದ್ ಮಾಡಿರುವುದರಿಂದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ಪ್ರದೇಶದ ಜನರು ಅತಂತ್ರರಾಗಿದ್ದು ಈ ವಿಷಯ ಮನಗಂಡು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ರಸ್ತೆ ತೆರವು ಮಾಡುವಂತೆ ಮನವಿ ಮಾಡಿದ್ದಾರೆ.
ಕೇರಳ ಕರ್ನಾಟಕ ಗಡಿಭಾಗದಲ್ಲಿ ಕೊಟ್ಯಾಡಿ ಪ್ರದೇಶವು ಕರ್ನಾಟಕ ಪ್ರದೇಶಕ್ಕೆ ಸೇರಿದಾಗಿದೆ. ಈ ಪ್ರದೇಶದಲ್ಲಿ ಕೇರಳ ಲೋಕೋಪಯೋಗಿ ರಸ್ತೆ ಹಾದು ಹೋಗುತ್ತಿದೆ. ಪಳ್ಳತ್ತೂರು ಮತ್ತು ಕೊಟ್ಯಾಡಿ ಎಂಬಲ್ಲಿ ರಸ್ತೆಗಳನ್ನು ಬಂದ್ ಮಾಡಿರುವುದರಿಂದ ಇಲ್ಲಿನ ನೆಟ್ಟಣಿಗೆ ಮುಟ್ನೂರು ಗ್ರಾಮದವರು ರಾಜ್ಯದ ಸಂಪರ್ಕವನ್ನು ಕಳೆದುಕೊಂಡಿದ್ದಾರೆ. ರಿಯಾಯಿತಿ ನೀಡುತ್ತಿರುವ ಪೊಲೀಸರ ಕಟ್ಟುನಿಟ್ಟು ಕ್ರಮ ಗ್ರಾಮಸ್ಥರನ್ನು ತೊಂದರೆಗೆ ಸಿಲುಕಿಸಿದೆ, ನೆಟ್ಟಣಿಗೆ ಮುಟ್ನೂರು ಗ್ರಾಮಕ್ಕೆ ಸಂಬಂಧಿಸಿದ ಪ್ರದೇಶಗಳಾದ ಕೊಟ್ಯಾಡಿ, ಗಾಳಿಮುಖ, ಕಟ್ಟಪುಣಿ, ಗೋಳಿತ್ತಡಿ, ಸರೋಳಿ, ಪುದಿಯವಪ್ಪು ಇತ್ಯಾದಿ ಭಾಗಗಳಿಗೆ ಪಳ್ಳತ್ತೂರು ಮುಖಾಂತರ ಕೇರಳ ಲೋಕೋಪಯೋಗಿ ರಸ್ತೆಯಲ್ಲಿ ಸಂಚರಿಸಬೇಕು. ಜನರಿಗೆ ಪಂಚಾಯತ್ ಕಛೇರಿ, ಸರಕಾರಿ ಆಸ್ಪತ್ರೆ, ಪಶು ಆಸ್ಪತ್ರೆ, ಅಂಚೆ ಕಛೇರಿ, ಮೆಸ್ಕಾಂ ಕಚೇರಿಗೆ ಈಶ್ವರಮಂಗಲವನ್ನೇ ಅವಲಂಬಿಸಿದ್ದಾರೆ. ಆದರೆ ಕೇರಳ ರಾಜ್ಯದ ಪೊಲೀಸ್ ಇಲಾಖೆಯಿಂದ ಗಾಳಿಮುಖ, ಕೊಟ್ಯಾಡಿ ಎಂಬಲ್ಲಿ ಗ್ರಾಮಸ್ಥರನ್ನು ತಡೆ ಹಿಡಿಯಲಾಗಿದೆ. ಆದರೆ ಕೇರಳ ರಾಜ್ಯ ದೇಲಂಪಾಡಿ ಗ್ರಾಮದವರು ನಮ್ಮ ರಾಜ್ಯದ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ. ಅದರಿಂದ ಗ್ರಾಮದ ಜನರಿಗೆ ಕೊಟ್ಯಾಡಿಯಿಂದ ಲೋಕೋಪಯೋಗಿ ರಸ್ತೆಯಲ್ಲಿ ಸಂಚರಿಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಡಳಿತ ಅಧಿಕಾರಿಗಳಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ.ಒಂದುವೇಳೆ ಕ್ರಮಕೈಗೊಳ್ಳದಿದ್ದರೆ ಗಡಿಭಾಗವನ್ನು ಬಂದ್ ಮಾಡುವಂತೆ ಗ್ರಾಮಸ್ಥರು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.