ಅಮೆಜಾನ್‌ನಲ್ಲಿ ಸುಂದರ್ ಬನ್ ಜೇನುತುಪ್ಪ ಲಭ್ಯ
ಪ್ರತಿ ಬಾಟಲಿಗೆ 600 ರೂ. ದರ; 37 ಟನ್ ಉತ್ಪಾದನೆ
Team Udayavani, Aug 21, 2020, 6:02 AM IST
ಸಾಂದರ್ಭಿಕ ಚಿತ್ರ
ಕೋಲ್ಕತ್ತಾ: ಭಾರತದ ಅತಿದೊಡ್ಡ ಹುಲಿ ಸಂರಕ್ಷಿತ ವನ್ಯಧಾಮ, ಪ. ಬಂಗಾಲದ “ಸುಂದರ್‌ಬನ್’ ಅರಣ್ಯಗಳ ತಾಜಾ ಜೇನು ತುಪ್ಪ ಇದೀಗ ಅಮೆಜಾನ್ ಇ- ಕಾಮರ್ಸ್ ಜಾಲದಲ್ಲಿ ಮಾರಾಟಕ್ಕೆ ಲಭ್ಯವಿದೆ. ಪ್ರತಿ ಬಾಟಲಿ ಜೇನುತುಪ್ಪಕ್ಕೆ 600 ರೂ. ನಿಗದಿಪಡಿಸಲಾಗಿದೆ. ಜೇನುತುಪ್ಪ ಮಾರಾಟ ದಿಂದ ಬಂದ ಹಣದಿಂದ ಹುಲಿಗಳ ಸಂರಕ್ಷಣೆ, ಸುಂದರ್‌ಬನ್ ಕಾಡಂಚಿನ ಜೇನು ಸಂರಕ್ಷಣಾ ಕಾರರ ಜೀವನ ನಿರ್ವಹಣೆ ಸಾಧ್ಯವಾಗಲಿದೆ.
37 ಟನ್ ಜೇನು!: ರಾಯಲ್ ಬಂಗಾಲ ಹುಲಿ ಆವಾಸಸ್ಥಾನ, ಮ್ಯಾಂಗ್ರೋವ್ ಕಾಡುಗಳಿಂದ ಆವೃತವಾದ ಸುಂದರ್‌ಬನ್‌ನಲ್ಲಿ ಕಾಡಂಚಿನ ಜನರು ಜೇನು ಕೀಳಲು ಧಾವಿಸುತ್ತಿದ್ದರು. ಈ ವೇಳೆ ಹುಲಿಗಳ ದಾಳಿಯಿಂದಾಗಿ ಸಾವು- ನೋವುಗಳು ವರದಿಯಾಗಿದ್ದವು. ಮಾನವ- ಪ್ರಾಣಿ ಸಂಘರ್ಷ ತಪ್ಪಿಸಲೆಂದೇ, ಕಾಡಂಚಿನ 72 ಜನರಿಗೆ ಜೇನುಪೆಟ್ಟಿಗೆ ಖರೀದಿಸಲು ಪಶ್ಚಿಮ ಬಂಗಾಲ ಸಹಕಾರಿ ಬ್ಯಾಂಕ್‌ಗಳಿಂದ ಸಾಲ ನೀಡಲಾಗಿತ್ತು. ಈ ಲಾಕ್‌ಡೌನ್ ಅವಧಿಯಲ್ಲಿ ಒಟ್ಟು 37 ಟನ್ ಜೇನುತುಪ್ಪವನ್ನು ಉತ್ಪಾದಿ ಸಲಾಗಿದೆ. ಅರಣ್ಯ ಇಲಾಖೆ ಸಹಕಾರದಿಂದ ಈಗ ಅಲ್ಲಿನ ಉತ್ಪನ್ನಗಳು ಜಾಗತಿಕವಾಗಿ ಮಾರು ಕಟ್ಟೆ ಪಡೆಯಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Adani ಬಂಧಿಸಿ, ಸೆಬಿ ಮುಖ್ಯಸ್ಥೆ ವಜಾ ಮಾಡಿ: ರಾಹುಲ್ ಪಟ್ಟು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.