ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸೋಂಕಿಗೆ ಐವರು ಬಲಿ
Team Udayavani, Aug 21, 2020, 12:44 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರದಂದು ಕೋವಿಡ್ 19 ಸೋಂಕಿಗೆ ಐವರು ಬಲಿಯಾಗಿದ್ದಾರೆ.
ಕೋವಿಡ್ 19 ಸೋಂಕಿನ ಜೊತೆಯಲ್ಲಿ ಕ್ಷಯದಿಂದ ಬಳಲುತ್ತಿದ್ದ ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ 51 ವರ್ಷದ ವೃದ್ಧೆ (ರೋಗಿ ನಂಬರ್ 250030), ದಾವಣಗೆರೆಯ ವಿನೋಬ ನಗರದ 63 ವರ್ಷದ ವೃದ್ಧ (ರೋಗಿ ನಂಬರ್ 256636), ಎಂಸಿಸಿ ಎ ಬ್ಲಾಕ್ ನಿವಾಸಿ 68 ವರ್ಷದ ವೃದ್ಧ (ರೋಗಿ ನಂಬರ್ 216481), ಲೇಬರ್ ಕಾಲೋನಿಯ 60 ವರ್ಷದ ವೃದ್ಧ (ರೋಗಿ ನಂಬರ್ 263539), ದಾವಣಗೆರೆ ತಾಲೂಕಿನ ಹೊಸ ಬೆಳವನೂರು ಗ್ರಾಮದ 75 ವರ್ಷದ ವೃದ್ಧೆ (ರೋಗಿ ನಂಬರ್ 243869) ಮೃತಪಟ್ಟವರು.
ಐವರ ನಿಧನದಿಂದ ಜಿಲ್ಲೆಯಲ್ಲಿ ಇದುವರೆಗೆ ಈ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಒಟ್ಟು 244 ಜನರಲ್ಲಿ ಹೊಸದಾಗಿಸೋಂಕು ಪತ್ತೆಯಾಗಿದೆ. ದಾವಣಗೆರೆ ತಾಲೂಕಿನ ದೊಡ್ಡಬಾತಿ ಗ್ರಾಮದ 67 ವರ್ಷದ ವೃದ್ಧೆ (ರೋಗಿ ನಂಬರ್ 255446) ಯಲ್ಲಿ ತೀವ್ರ ಉಸಿರಾಟದ ಸಮಸ್ಯೆಯಿಂದ ಸೋಂಕು ಕಾಣಿಸಿಕೊಂಡಿದೆ. ರೋಗಿ ನಂಬರ್ 235762 ಸಂಪರ್ಕದಿಂದ ದೊಡ್ಡಬಾತಿ ಗ್ರಾಮದ 43 ವರ್ಷದ ವ್ಯಕ್ತಿ (ರೋಗಿ ನಂಬರ್ 255447) ಗೆ ಸೋಂಕು ಹರಡಿದೆ.
ನ್ಯಾಮತಿ ಪಟ್ಟಣದ 4 ವರ್ಷದ ಬಾಲಕಿ(ರೋಗಿ ನಂಬರ್ 256119), 18 ವರ್ಷದ ಯುವಕ (ರೋಗಿ ನಂಬರ್ 256120) ಕಾಣಿಸಿಕೊಂಡಿರುವ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ರೋಗಿ ನಂಬರ್ 256128 ಸಂಪರ್ಕದಿಂದ ಶಾಮನೂರು ಗ್ರಾಮದ 32 ವರ್ಷದ ಮಹಿಳೆ (ರೋಗಿ ನಂಬರ್ 256129), 5 ವರ್ಷದ ಬಾಲಕಿ (ರೋಗಿ ನಂಬರ್ 25130), 9 ವರ್ಷದ ಬಾಲಕಿ (ರೋಗಿ ನಂಬರ್ 25131), 6 ವರ್ಷದ ಬಾಲಕಿ (ರೋಗಿ ನಂಬರ್ 256132), 1 ವರ್ಷದ ಬಾಲಕ (ರೋಗಿ ನಂಬರ್ 256133) ಸೋಂಕು ಹರಡಿದೆ.
ದಾವಣಗೆರೆ ನಗರ ಮತ್ತು ತಾಲೂಕಿನ ವಿವಿಧ ಭಾಗದ 133, ಹರಿಹರದ 28, ಜಗಳೂರಿನ 8, ಚನ್ನಗಿರಿಯ 39, ಹೊನ್ನಾಳಿಯ 32 ಹಾಗೂ ಹೊರ ಜಿಲ್ಲೆಯ ನಾಲ್ವರು ಒಳಗೊಂಡಂತೆ 244 ಜನರು ಸೋಂಕಿಗೆ ಒಳಗಾಗಿದ್ದಾರೆ. ಕೋವಿಡ್ ಸೋಂಕಿನಿಂದ ಗುಣಮುಖರಾದ ಹರಿಹರದ 68 ವರ್ಷದ ವೃದ್ಧ (ರೋಗಿ ನಂಬರ್ 137255), ಕಾಳಿದಾಸ ನಗರದ 31 ವರ್ಷದ ಮಹಿಳೆ (ರೋಗಿ ನಂಬರ್ 147498), ದಾವಣಗೆರೆ ಪೊಲೀಸ್ ವಸತಿ ಸಮುಚ್ಚಯದ 41 ವರ್ಷದ ವ್ಯಕ್ತಿ (ರೋಗಿ ನಂಬರ್ 148069) ಒಳಗೊಂಡಂತೆ 381 ಜನರು ಆಸ್ಪತ್ರೆಯಿಂದ ಬಿಡುಗಡೆಯಾದವರು. ಸೋಂಕಿತರಗಿಂತಲೂ ಬಿಡುಗಡೆಯಾದವರೇ ಹೆಚ್ಚು. ಜಿಲ್ಲೆಯಲ್ಲಿ 6270 ಪ್ರಕರಣಗಳಲ್ಲಿ ಈವರೆಗೆ 4230 ಜನರು ಡಿಸ್ಚಾರ್ಜ್ ಆಗಿದ್ದಾರೆ. 141 ಜನರು ಮೃತಪಟ್ಟವರು. 1899 ಸಕ್ರಿಯ ಪ್ರಕರಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Davangere: 2021ರಲ್ಲಿ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದವನಿಗೆ ಶಿಕ್ಷೆ ಪ್ರಕಟ
Davanagere: ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ; ಶಿಕ್ಷಕ ಸಾವು
ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Onion Price; ಈರುಳ್ಳಿ ಬೆಲೆ ಇಳಿಕೆ: ಹರಾಜು ನಿಲ್ಲಿಸಿ ರೈತರ ಪ್ರತಿಭಟನೆ
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
Electricity theft: ಎಸ್ಪಿ, ಸಂಸದನ ವಿರುದ್ಧ ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.