ಗೂಗಲ್ ಬೆನ್ನಲ್ಲೇ ವಾಟ್ಸಾಪ್ ಸರ್ವರ್ ಡೌನ್: ಬಳಕೆದಾರರಿಂದ ದೂರು ಸಲ್ಲಿಕೆ !
Team Udayavani, Aug 21, 2020, 1:23 PM IST
ನವದೆಹಲಿ: ಜಿಮೇಲ್, ಡಾಕ್ಸ್, ಡ್ರೈವ್ ಸೇರಿದಂತೆ ಗೂಗಲ್ ನ ಹಲವು ಸೇವೆಯಲ್ಲಿ ಗುರುವಾರ (20-8-2020) ಸಮಸ್ಯೆ ಕಂಡುಬಂದಿತ್ತು. ಏತನ್ಮಧ್ಯೆ ಫೇಸ್ ಬುಕ್ ಒಡೆತನದ ವಾಟ್ಸಾಪ್ ನಲ್ಲೂ ವ್ಯತ್ಯಯ ಕಂಡುಬಂದಿದೆ ಎಂದು ವರದಿಯಾಗಿದೆ.
ಜಗತ್ತಿನ ಹಲವೆಡೆ ಗುರುವಾರ ಸಂಜೆಯ ವೇಳೆ ವಾಟ್ಸಾಪ್ ನಲ್ಲಿ ಕನೆಕ್ಷನ್ ಸಮಸ್ಯೆ ಕಂಡುಬಂದಿದ್ದು, ಬಳಕೆದಾರರು ಯಾವುದೇ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ ಎನ್ನಲಾಗಿದೆ.ಈ ಕಾರಣದಿಂದ ಸಹಲವು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ದೂರು ಸಲ್ಲಿಸಿದ್ದಾರೆ.
WABetainfo ವರದಿಯ ಪ್ರಕಾರ, ವಾಟ್ಸಾಪ್ ಸರ್ವರ್ ನಲ್ಲಿ ಸಮಸ್ಯೆ ಕಂಡುಬಂದಿದ್ದರಿಂದ ಏಕಾಏಕಿ ಸೇವೆಗಳು ಸ್ಥಗಿತಗೊಂಡಿದೆ. ಇದರಿಂದ ಹಲವು ಬಳಕೆದಾರರು ಸಮಸ್ಯೆ ಎದುರಿಸಿದ್ದರು. ಆದರೇ ಕೆಲವೆಡೆ ಯಾವುದೇ ವ್ಯತ್ಯಯಗಳು ಕಂಡುಬರಲಿಲ್ಲ ಎಂದು ತಿಳಿಸಿದೆ.
ಸರ್ವರ್ ಡೌನ್ ಸಂದರ್ಭದಲ್ಲಿ ಯಾವುದೇ ಹೊಸ ವಾಟ್ಸಾಪ್ ಖಾತೆ ತೆರೆಯಲು ಅಸಾಧ್ಯವಾಗಿತ್ತು. ಈ ಸಮಸ್ಯೆ ಶುಕ್ರವಾರ ಬೆಳಗ್ಗೆಯವರೆಗೂ ಮುಂದುವರೆದಿತ್ತು ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದೆ.
ಡೌನ್ ಡಿಟೇಕ್ಟರ್ ವರದಿ ಪ್ರಕಾರ, ಸುಮಾರು 66% ವಾಟ್ಸಾಪ್ ಬಳಕೆದಾರರು ಕನೆಕ್ಷನ್ ಸಮಸ್ಯೆ ಎದುರಿಸಿದ್ದಾರೆ. 30% ಜನರಿಗೆ ಸಂದೇಶ ಕಳುಹಿಸುವಲ್ಲಿ ಮತ್ತು ಸ್ವೀಕರಿಸುವಲ್ಲಿ ವ್ಯತ್ಯಯ ಕಂಡು ಬಂದಿದೆ.
ಇದನ್ನೂ ಓದಿ: ಜಿಮೇಲ್ ಸೇವೆಯಲ್ಲಿ ವ್ಯತ್ಯಯ,ಪೇಚಿಗೆ ಸಿಲುಕಿದ ಬಳಕೆದಾರರು: ಗೂಗಲ್ ಸ್ಪಷ್ಟನೆಯೇನು ಗೊತ್ತಾ ?
ಗುರುವಾರ ಬೆಳಗ್ಗೆ ಜಿಮೇಲ್, ಗೂಗಲ್ ಡ್ರೈವ್, ಗೂಗಲ್ ಡಾಕ್ಸ್, ಗೂಗಲ್ ಮೀಟ್ ಸೇರಿದಂತೆ ಹಲವು ಗೂಗಲ್ ಸೇವೆಯಲ್ಲಿ ವ್ಯತ್ಯಯ ಕಂಡುಬಂದಿತ್ತು. ಭಾರತ ಸೇರಿದಂತೆ ಜಗತ್ತಿನ ಹಲವಾರು ದೇಶಗಳ ಜನರು ಇದರಿಂದ ಸಮಸ್ಯೆ ಎದುರಿಸಿದ್ದರು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ದೂರು ಸಲ್ಲಿಸಿದ್ದರು. ಸಂಜೆ ವೇಳೆಗೆ ಗೂಗಲ್ ಸೇವೆಗಳು ಯಥಾಸ್ಥಿತಿಗೆ ಬಂದಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.