ತರಂಗಾಂತರಂಗ: ರುದ್ರಾಕ್ಷಿ ಧಾರಣೆಯ ವೈಜ್ಞಾನಿಕ ಉಪಯೋಗಗಳು ನಿಮಗೆ ಗೊತ್ತೇ?


Team Udayavani, Aug 21, 2020, 4:16 PM IST

ರುದ್ರಾಕ್ಷಿ ಧಾರಣೆಯ ವೈಜ್ಞಾನಿಕ ಉಪಯೋಗಗಳು ನಿಮಗೆ ಗೊತ್ತೇ?

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ನಮ್ಮ ಶಾರೀರಿಕ ಆರೋಗ್ಯ, ಮಾನಸಿಕ ಮತ್ತು ಆಧ್ಯಾತ್ಮಿಕ ಪ್ರವೃತ್ತಿಗಳ ಸ್ಥಿತಿ – ಗತಿಗಳ ಮೇಲೆ ವಿದ್ಯುತ್‌ – ಅಯಸ್ಕಾಂತೀಯ ಶಕ್ತಿಗಳ  ಪ್ರಭಾವವಿದೆ ಎಂದು ವೈಜ್ಞಾನಿಕ ಸಂಶೋಧನೆಗಳು ತೋರಿಸಿವೆ.

ಇವಕ್ಕೆ ಮುಖ್ಯ ಕಾರಣಗಳೆಂದರೆ ಅತಿ ಸೂಕ್ಷ್ಮ ವಿದ್ಯುತ್‌ ಕಣಗಳು (ಅಯಾನ್ಸ್) ನಮ್ಮ ಶರೀರದಲ್ಲಿ ಪ್ರವಹಿಸುವ ರಕ್ತವೇ ಮುಂತಾದ ದ್ರವಗಳೊಂದಿಗೆ ಚಲಿಸುವಾಗ ಉಂಟಾಗುವ ಸೂಕ್ಷ್ಮ ಜೈವಿಕ ವಿದ್ಯುತವಾಹಗಳೊಂದಿಗೆ (ಬಯೋ-ಎಲೆಕ್‌ ಕರೆಂಟ್‌) ಆಗುವ ಕೂಡುವಿಕೆ (ಇಂಟರಾಕ್ಷನ್‌).

ಇದು ವಿವಿಧ ಪ್ರಮಾಣಗಳಲ್ಲಿ ಶರೀರದ ವಿವಿಧೆಡೆ ಬೇರೆ ಬೇರೆ ದಿಕ್ಕಿನಲ್ಲಿ ಪ್ರವಹಿಸುತ್ತದೆ. ಜೈವಿಕ ವಿದ್ಯುತ್ಪ್ರವಾಹಗಳು, ಶರೀರದ ಅನಾರೋಗ್ಯ, ಮಾನಸಿಕ ಅಸ್ವಸ್ಥತೆ, ಅಶಾಂತಿಗಳ ಸಂದರ್ಭಗಳಲ್ಲಿ ಏರುಪೇರಾಗುವುದು ಸಾಮಾನ್ಯ.

ಕೇಂದ್ರ ನರಮಂಡಲಗಳ (ಸೆಂಟ್ರಲ್‌ ನರ್ವ್‌ ಸಿಸ್ಟಮ್) ಮೂಲಕ ಈ ಜೈವಿಕ ವಿದ್ಯುತ್‌ ಪ್ರವಾಹವನ್ನು ಹತೋಟಿಯಲ್ಲಿಟ್ಟರೆ, ಮನಃ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬಹುದು. ಆಯುರ್ವೇದ, ಯೋಗಾಭ್ಯಾಸ, ಪ್ರಾಣಾಯಾಮ, ರೇಖೀ ಇತ್ಯಾದಿ ಚಿಕಿತ್ಸೆಗಳಿಗೆ ಇದೇ ಮೂಲತತ್ವ.

ರುದ್ರಾಕ್ಷಿಯಲ್ಲಿ ನೀರಿನಂಶ ಕಡಿಮೆಯಾದಂತೆ ಅದರ ಸಾಪೇಕ್ಷ ಸಾಂದ್ರತೆ 1.05ರಿಂದ 1.7ರವರೆಗೆ ಹೆಚ್ಚಾಗಿದೆ. ಅದರ ಅವಿದ್ಯುದ್ವಾಹಕತೆ (ಡೈಎಲೆಕ್ಷಿಕ್‌) ವಿದ್ಯುದಯ ಕಾಂತೀಯ ಪರಿಣಾಮಗಳು, ರುದ್ರಾಕ್ಷಿ ತೈಲದಲ್ಲಿ ಅಪರೂಪವಾದ ಆಲ್ಕಲೋಯಿಡ್‌ಗಳು, ಜೀವರಕ್ಷಕ ಸತ್ಯಗಳು (ವಿಟಮಿನ್‌ ಸಿ) ಸಿಟ್ರಿಕ್‌ ಆಮ್ಲ ಇತ್ಯಾದಿಗಳಿವೆ. ಆಧುನಿಕ ರಾಸಾಯನಿಕ ವಿಶ್ಲೇಷಣೆ ಪ್ರಕಾರ (C,H,N,& Analyzer, gas chromatography) ಮೂಲಧಾತುಗಳಾದ ಅಂಗಾರ = ಶೇ. 50.03, ಆಮ್ಲಜನಕ = ಶೇ. 30.5, ಜಲಜನಕ – ಶೇ.17.9, ಸಾರಜನಕ -ಶೇ. 0.95ಗಳಿವೆ.

ಇದನ್ನೂ ಓದಿ:  ರುದ್ರಾಕ್ಷಿ ಶಾರೀರಿಕ, ಮಾನಸಿಕ ಆರೋಗ್ಯದ ಗವಾಕ್ಷಿ- ಇಲ್ಲಿದೆ ವಿಶೇಷತೆಗಳು


ಇವುಗಳಿಂದಾಗಿ ರುದ್ರಾಕ್ಷಿ ಭಸ್ಮ ಸೇವನೆ, ತೈಲ ಉಪಯೋಗ, ಧಾರಣೆ, ಇತ್ಯಾದಿಗಳಿಂದ ಶರೀರದಲ್ಲಿ ರೋಗ ನಿರೋಧಕತೆಗಳು (ಆ್ಯಂಟಿ ವೈರಲ್, ಆ್ಯಂಟಿ ಬ್ಯಾಕ್ಟೀರಿಯಾ, ಆ್ಯಂಟಿ ಪ್ರೊಟೋಜೋನ್‌, ಆಂಟಿಫ‌ಂಗಲ್, ಆ್ಯಂಟಿ ಹೆಲ್ಮಿನಿಟಿಕ್) ಉಂಟಾಗುತ್ತದೆ.

ಆದರೆ ಬರೇ ಈ ಆಧುನಿಕ ವೈಜ್ಞಾನಿಕ ವಿಶ್ಲೇಷಣೆ ಮತ್ತು ಸಂಶೋಧನೆಗಳಿಂದ ಮನುಷ್ಯನ ಶಾರೀರಿಕ, ಮಾನಸಿಕ ಆರೋಗ್ಯಗಳು ಮತ್ತು ಆಧ್ಯಾತ್ಮಿಕ ಚೈತನ್ಯಗಳು ವೃದ್ಧಿಯಾಗುವುದು, ಹಲವಾರು ಕಠಿಣ ಮತ್ತು ದೀರ್ಘ‌ಕಾಲದ ಕಾಯಿಲೆಗಳನ್ನು ನಿವಾರಿಸಬಹುದು ಎಂಬುದನ್ನು ಸಾಧಿಸುವುದು ಅಸಾಧ್ಯ. ಸಾವಿರಾರು ವರ್ಷಗಳಿಂದ ಲಕ್ಷಾಂತರ ಜನರು, ಆಧ್ಯಾತ್ಮಿಕ ಸಾಧನೆಗಳನ್ನು ಮಾಡಿದ ಋಷಿ ಮುನಿಗಳು, ಬಹುಮುಖಗಳ ರುದ್ರಾಕ್ಷಿ ಧಾರಣೆ ಮಾಡಿ ಅನುಭವಿಸಿದ್ದನ್ನು ಹಲವಾರು ಪುರಾಣ, ವೇದ ಶಾಸ್ತ್ರಗಳಲ್ಲಿ ಉಲ್ಲೇಖಿಸಿದುದನ್ನು ತಿರಸ್ಕರಿಸದೆ ನಂಬಬೇಕಾಗಿದೆ.

ಇತ್ತೀಚೆಗಿನ ಜೀವನ ಶೈಲಿಯು ಪ್ರತಿ ನಿಮಿಷದಲ್ಲಿಯೂ ನಿಮ್ಮ ಮೇಲೆ ಮಾನಸಿಕ ಒತ್ತಡ ಬೀರಿ, ಶಾರೀರಿಕ ಅನಾರೋಗ್ಯ, ನಿದ್ರಾಹೀನತೆ, ಖನ್ನತೆ, ಹೃದಯ ದೌರ್ಬಲ್ಯ, ಚರ್ಮ ವ್ಯಾಧಿ ಗಳು, ಅರ್ಬುದ (ಕ್ಯಾನ್ಸರ್), ಸಕ್ಕರೆ ಕಾಯಿಲೆ, ಮಾದಕ ದ್ರವ್ಯ ವ್ಯಸನ ಇತ್ಯಾದಿಗಳು ಉಂಟಾಗಿ, ಮೂತ್ರಪಿಂಡ, ಶ್ವಾಸಕೋಶ, ಪಿತ್ತಕೋಶ ಮತ್ತು ಹಲವಾರು ಗ್ರಂಥಿಗಳ ಅಸಮತೋಲನ ಉಂಟಾಗುತ್ತದೆ. ಇದರಿಂದಾಗಿ ಹೆಚ್ಚು ಹೆಚ್ಚು ಪಾಶ್ಚಾತ್ಯ, ಪುರಸ್ತರು, ಜಗತ್ತಿನ ಆಧ್ಯಾತ್ಮಿಕ ಕೇಂದ್ರವಾದ ಭಾರತಕ್ಕೆ ಬಂದು ಇಲ್ಲಿನ ಪದ್ಧತಿಗಳಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.

ಇದನ್ನೂ ಓದಿ: ಔಷಧೀಯ ಗುಣಗಳ ರುದ್ರಾಕ್ಷಿ; ಇದರಲ್ಲಿರುವ ವಿಟಮಿನ್ ಗುಣದ ಸಂಪೂರ್ಣ ಮಾಹಿತಿ

ಧಾರಣೆಯ ಪರಿಣಾಮಗಳು
ರುದ್ರಾಕ್ಷಿಯನ್ನು ಧಾರಣೆ ಮಾಡಲು ಹಲವಾರು ಕ್ರಮಗಳಿಗೆ. ಇದನ್ನು ಧರಿಸುವವರ ಜನ್ಮ ನಕ್ಷತ್ರ, ರಾಶಿ, ಅಭಿರುಚಿ, ಧಾರಣೆ ಉದ್ದೇಶಗಳಿಗನುಗುಣವಾಗಿ ನಿಶ್ಚಿತ ಸಂಖ್ಯೆಯ ಮುಖಗಳಿರುವ ರುದ್ರಾಕ್ಷಿ ಅಥವಾ ಹಾರವನ್ನು ಧರಿಸಿದರೆ ಹೆಚ್ಚು ಉತ್ತಮ ಪರಿಣಾಮಗಳು ಸಿಗುತ್ತವೆ. ಸಾಮಾನ್ಯವಾಗಿ ಶಿವ ಅಥವಾ ಮೃತ್ಯುಂಜಯ ಮಂತ್ರಗಳು ಸಹಿತವಾಗಿ ಧರಿಸಿದರೆ ಒಳ್ಳೆಯದು. ಶಿವ ಮಹಾಪುರಾಣಗಳು, ಮಂತ್ರಮಹಾರ್ಣವ, ಪದ್ಮ ಪುರಾಣ, ಸ್ಕಂದ ಪುರಾಣ ಇತ್ಯಾದಿಗಳಲ್ಲಿ ಹಲವಾರು ಇತರ ಮಂತ್ರಗಳೂ ಸೂಚಿಸಲ್ಪಟ್ಟಿದೆ.

ಇದನ್ನೂ ಓದಿ: ಹೇಗಿರುತ್ತದೆ ರುದ್ರಾಕ್ಷಿ ಮರ? ಏಕಮುಖಿ ರುದ್ರಾಕ್ಷಿ ಶ್ರೇಷ್ಠವೇ? : ಇಲ್ಲಿದೆ ಫುಲ್ ಡಿಟೇಲ್ಸ್

ಇದನ್ನೂ ಓದಿ: ರುದ್ರಾಕ್ಷಿಗಳಲ್ಲಿರುವ ಪ್ರಬೇಧಗಳು ಮತ್ತು ಇವುಗಳ ಧಾರಣೆಯಿಂದ ಆಗುವ ಪ್ರಯೋಜನಗಳ Full Details

ಮುಂದುವರಿಯುವುದು…

(ಮುಂದಿನ ಭಾಗದಲ್ಲಿ: ರುದ್ರಾಕ್ಷಿ ಮರ ಮತ್ತು ಅದರ ಬೆಳವಣಿಗೆಗೆ ಸಂಬಂಧಿತ ಮಾಹಿತಿ)

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food-Punjab

ಪಂಜಾಬ್ ಫುಡ್ ಸ್ಪೆಷಲ್ : ಸಾಹಸವಂತರ ನಾಡಿನ ಆಹಾರ ಪದ್ಧತಿಯೂ ಹೃದಯಂಗಮ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಹಿಮದ ನಾಡಿನ ಸ್ವಾಧಿಷ್ಟ ರೆಸಿಪಿಗಳು – ಮಾಡಿ ಸವಿಯೋಣ ಬನ್ನಿ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಜಮ್ಮು ಮತ್ತು ಕಾಶ್ಮೀರದ ಸಿಹಿ, ಖಾರ, ವೆಜ್-ನಾನ್ ವೆಜ್ ಖಾದ್ಯ ವೈಭವ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ಭಾರತೀಯ ಆಹಾರ ಪದ್ಧತಿ: ವೈವಿಧ್ಯ, ವೈಶಿಷ್ಟ್ಯಗಳ ಹಿನ್ನಲೆ ಮೇಲೊಂದು ಕ್ಷ-ಕಿರಣ

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

ರುದ್ರಾಕ್ಷಿಯನ್ನು ಬೇಕಾಬಿಟ್ಟಿ ಧರಿಸಿಕೊಳ್ಳುವಂತಿಲ್ಲ! ; ಅದಕ್ಕೆಂದೇ ಇಲ್ಲಿವೆ ಕೆಲ ನಿಯಮಗಳು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.