ಜೀವ ಚೈತನ್ಯಕ್ಕೆ ಗಣಪತಿಯೇ ಆಧಾರ


Team Udayavani, Aug 21, 2020, 9:27 PM IST

PTI17-08-2020_000088A

ಒಮ್ಮೆ ಚತುರ್ಮುಖ ಬ್ರಹ್ಮದೇವರ ಸನ್ನಿಧಿಯಲ್ಲಿ ಯಾರಿಗೆ ಅಗ್ರ ಪೂಜೆ ಸಲ್ಲಬೇಕು ಎಂಬ ಚರ್ಚೆ ಆಯಿತು. ಆಗ ಬ್ರಹ್ಮದೇವರು ಯಾರು ಪ್ರಪಂಚ ಪ್ರದಕ್ಷಿಣೆಯನ್ನು ಮೊದಲು ಪೂರ್ಣಗೊಳಿಸುವರೋ ಅವರಿಗೆ ಅಗ್ರ ಪೂಜೆ ಎಂದರು. ಎಲ್ಲ ದೇವತೆ ಗಳು ತಮ್ಮ ತಮ್ಮ ವಾಹನ ವನ್ನೇರಿ ಪ್ರಯಾಣ ಬೆಳೆಸಿದರು. ಆದರೆ ದೊಡ್ಡ ಹೊಟ್ಟೆಯ

ಗಣಪತಿಯು ಮಾತಾಪಿತೃಗಳಾದ ಉಮಾ- ಮಹೇ ಶ್ವರರಿಗೇ ಪ್ರದಕ್ಷಿಣೆ ಹಾಕಿ ಕುಳಿ ತನು. ಆಶ್ಚರ್ಯಗೊಂಡ ದೇವತೆಗಳು ವಿಚಾರಿಸಿದಾಗ ಚತುರ್ಮುಖ ಬ್ರಹ್ಮದೇವರು, ತಂದೆ ತಾಯಿಗೆ ನಮಿಸಿದವರಿಗೆ ಸಮಸ್ತ ಭೂ ಪ್ರದಕ್ಷಿಣೆಯ ಪುಣ್ಯ ಫಲವಿದೆ. ಆದ್ದರಿಂದ ಗಣಪತಿಗೆ ಅಗ್ರ ಪೂಜೆ ಸಲ್ಲಬೇಕು ಎಂದರು.

ಜೀವನದಲ್ಲಿ ಪೂರ್ಣಪ್ರಯತ್ನ ಮತ್ತು ಬುದ್ಧಿಕೌಶಲದಿಂದ ಸಕಲ ಕ್ರಿಯೆ- ಕಾರ್ಯಗಳಲ್ಲಿ ಅಗ್ರಸ್ಥಾನ ಪಡೆಯುವ ಪ್ರಯತ್ನ ಹಾಗೂ ಹಿರಿಯರ ಆದರ ಮತ್ತು ಸೇವೆ ಈ ಕಥೆಯ ಮೂಲ ಸಂದೇಶ.

ಮಹಾ ಕಾಯವುಳ್ಳ ಗಜ ಮುಖ ಸಣ್ಣ ಇಲಿಯ ಮೇಲೆ ಕುಳಿತಿರುವುದು ಬಹಳ ಆಶ್ಚರ್ಯಕರ. ಆಧ್ಯಾತ್ಮಿಕ ವಾಗಿ ಇಲಿ ನಮ್ಮ ಇಂದ್ರಿಯ ಗಳ ಪ್ರತೀಕ. ಇಲಿಗಳು ಹೇಗೆ ಚಂಚಲವೋ ಹಾಗೆಯೇ ನಮ್ಮ ಇಂದ್ರಿಯಗಳು. ನಾವು ಗಣಪತಿಯ ಹಾಗೆ ನಮ್ಮ ಇಂದ್ರಿಯಗಳ ಮೇಲೆ ಸವಾರಿ ಮಾಡ ಬೇಕೇ ವಿನಾ ಅವು ನಮ್ಮ ಮೇಲಲ್ಲ ಎಂಬುದಿದರ ಸಂದೇಶ. ಗಣಪತಿಯ ಕೈಯಲ್ಲಿರುವ ಅಂಕುಶವು ನಮ್ಮನ್ನು ನಾವೇ ತಿದ್ದಿ ಕೊಳ್ಳಬೇಕು ಎಂಬುದನ್ನು ಸೂಚಿಸುತ್ತದೆ.

ಗಣಪತಿಯು ವಿಘ್ನ ನಿವಾರಕನೂ ಹೌದು, ವಿಘ್ನ ಕಾರಕನೂ ಹೌದು. ಶ್ರೀ ವಾದಿರಾಜ ತೀರ್ಥರೂ ತಮ್ಮ ತೀರ್ಥ ಪ್ರಬಂಧದಲ್ಲಿ, ದುಷ್ಟಾನಾಂ ವಿಘನಕರ್ತಾ ಸುಚರಿತ ಸುಜನ ಸ್ತೋಮ ವಿಘ್ನಾಪಹರ್ತಾ ಎನ್ನುತ್ತಾರೆ. ಅಂದರೆ ದುರ್ಜನರಿಗೆ ಆತ ವಿಘ್ನ ಕರ್ತಾ, ಸಜ್ಜನರಿಗೆ ವಿಘ್ನ ನಿವಾರಕ.

ಗಣಪತಿ ಚೈತನ್ಯಮೂರ್ತಿ, ಜ್ಞಾನರೂಪಿ, ಆಕಾಶಾಭಿಮಾನಿ, ಶಬ್ದಕ್ಕೆ ಒಡೆಯ. ಆದ್ದರಿಂದ ಮಹಾಭಾರತವು ನಿರಂತರ ಪ್ರಸಾರವಾಗ ಲೆಂಬ ಇಚ್ಛೆಯಿಂದ ವ್ಯಾಸರು ಗಣಪತಿಯನ್ನು ಆಶ್ರಯಿಸಿದರು. ಅವನ ತಾಯಿ ಪಾರ್ವತಿಯು ಪರ್ವತ ರಾಜನ ಮಗಳು. ಆಕೆ ತನ್ನ ದೇಹದ ಅಂಗರಾಗದಿಂದ ಬಾಲಕನನ್ನು ತಯಾರಿಸಿ ಜೀವ ಕಳೆಯನ್ನು ನೀಡಿದಳು. ಮುಂದೆ ಶಿವನಿಂದ ಸಂಹರಿಸಲ್ಪಟ್ಟು ಆನೆಯ ಮುಖವನ್ನಿಟ್ಟು ಪ್ರಾಣಪ್ರತಿಷ್ಠೆಯಾಗಿ “ಗಜಾನನ’ ಆದನು. ಪೃಥ್ವಿಯು ಜೀವ ಕಳೆಯ ಸೆಲೆ. ಒಂದು ಮುಷ್ಟಿ ಮಣ್ಣು, ನೀರು -ಗಾಳಿಯ ಸಂಯೋಗದಿಂದ ಬೀಜವನ್ನು ಮೊಳಕೆ ಬರಿಸಿ ಗಿಡವಾಗಿಸುವ ಸಾಮರ್ಥ್ಯ ಪಡೆದಿದೆ. ಆದ್ದರಿಂದ ಮಹಾಗಣಪತಿ ಜೀವ ಚೈತನ್ಯಕ್ಕೆ ಆಧಾರ. ಮಣ್ಣಿನಲ್ಲಿ ವಿಗ್ರಹ ಮಾಡ ಬೇಕಾದರೆ ಮಣ್ಣನ್ನು ಮೆತ್ತಿ ಮೆತ್ತಿ ಆಕಾರ ತರಬೇಕು. ಗಣಪತಿಯು ದುರ್ಗುಣಗಳನ್ನು ಕೆತ್ತಿ ತೆಗೆದು ಸದ್ಗುಣಗಳನ್ನು ಮೆತ್ತಿ ನಮ್ಮ ಜೀವನ ಪಾವನವಾಗಿಸುತ್ತಾನೆ. ಮಳೆಯಿಂದ ಭೂಮಿ ತೋಯ್ದು ಸಸ್ಯ ಶ್ಯಾಮಲೆಯಾದ ಸಮಯದಲ್ಲಿ ಗಣಪತಿಯ ಆರಾಧನೆಯಿಂದ ದವಸ ಧಾನ್ಯಗಳು ಯಥೇಷ್ಟವಾಗುತ್ತವೆ.

 ಶ್ರೀ ಶರವು ರಾಘವೇಂದ್ರ ಶಾಸ್ತ್ರೀ
ಶಿಲೆ ಶಿಲೆ ಆಡಳಿತ ಮೊಕ್ತೇಸರರು ಮತ್ತು ಪ್ರಧಾನ ಅರ್ಚಕರು

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-14

ಹಬ್ಬದ ಮೂಡ್‌ನ‌ಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಕುಷ್ಟಗಿ: ಹಿಂದೂ- ಮುಸ್ಲಿಂ ಗೆಳೆಯರ ಬಳಗದ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಸಂಭ್ರಮ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

ಗ್ರಾಮೀಣ ಭಾಗದಲ್ಲಿ ಅರ್ಥಪೂರ್ಣ ಗಣೇಶ ಚತುರ್ಥಿ ಆಚರಣೆ

tdy-7

ಗಂಗಾವತಿಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ಸಡಗರದ ಗಣೇಶ ಚತುರ್ಥಿ ಆಚರಣೆ

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

ಅಂಜೂರ ಮರದಿಂದ 32 ಅಡಿ ಗಣೇಶನ ಮೂರ್ತಿ ತಯಾರು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.