ಸಂಕಷ್ಟದ ನಡುವೆಯೇ ಹಬ್ಬ; ವಿಘ್ನ ನಿವಾರಿಸಲಿ ಗಣಪ
Team Udayavani, Aug 22, 2020, 6:40 AM IST
ಕೋವಿಡ್ ಸಾಂಕ್ರಾಮಿಕದ ನಡುವೆಯೇ ಗಣೇಶ ಚತುರ್ಥಿ ಎದುರಾಗಿದೆ. ಗಣೇಶೋತ್ಸವ ಆಚರಣೆಯಲ್ಲಿ ಜನರ ಆರೋಗ್ಯದ ಹಿತದೃಷ್ಟಿಯಿಂದಾಗಿ ದೇಶಾದ್ಯಂತ ರಾಜ್ಯ ಸರಕಾರಗಳು ಹಲವು ಎಚ್ಚರಿಕೆ ಕ್ರಮಗಳನ್ನು ಒಳಗೊಂಡ ಮಾರ್ಗಸೂಚಿಯನ್ನು ಹೊರಡಿಸಿವೆ, ಜತೆಗೆ ಮೊದಲು ಹಾಕಲಾಗಿದ್ದ ಕೆಲವು ನಿರ್ಬಂಧಗಳನ್ನೂ ಸಡಿಲಿಸಿವೆ. ಹಬ್ಬಗಳು, ಆಚರಣೆಗಳು ಭಾರತೀಯರ ಜೀವನಾಡಿಯಿದ್ದಂತೆ. ಅದರಲ್ಲೂ ಗಣೇಶ ಚತುರ್ಥಿ ಎನ್ನುವುದು ಭಾರತೀಯರ ಮಾನಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಹಬ್ಬ. ಕುಗ್ರಾಮಗಳಿಂದ ಹಿಡಿದು, ಮಹಾನಗರಗಳವರೆಗೆ ಗಣೇಶನ ಮೂರ್ತಿಯ ಪೆಂಡಾಲುಗಳು,
ಸಂಭ್ರಮದಿಂದ ಮೋದಕಪ್ರಿಯನಿಗೆ ಮಕ್ಕಳು-ವೃದ್ದರಾದಿಯಾಗಿ ಹಾಕುವ ಜೈಕಾರಗಳು, ಬಗೆಬಗೆಯ ಖಾದ್ಯಗಳು, ಮೆರವಣಿಗೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು..ಒಂದೇ ಎರಡೇ.
ದುರದೃಷ್ಟವಶಾತ್ ಈ ಬಾರಿ ಗಣೇಶೋತ್ಸವಗಳಲ್ಲಿ ಇಂಥ ಚಿತ್ರಣ ನೋಡಲು ಸಿಗುವುದಿಲ್ಲ. ಕೊರೊನಾ ಜನ ಸಂಪರ್ಕದಿಂದ ಹರಡುವ ರೋಗವಾದ್ದರಿಂದ, ಗಣೇಶೋತ್ಸವದ ವಿಚಾರದಲ್ಲಿ ಸರಕಾರಗಳು ಹಲವು ನಿರ್ಬಂಧಗಳನ್ನು ವಿಧಿಸಿರುವುದು ಸರಿಯಾಗಿಯೇ ಇದೆ. ಇನ್ನು ಜನರೂ ಸಹ ಸಾಂಕ್ರಾಮಿಕದ ಪ್ರಸರಣದ ಅಪಾಯದ ಬಗ್ಗೆ ಅರಿತಿರುವುದರಿಂದ ಸ್ವಯಂಪ್ರೇರಿತವಾಗಿಯೇ ಸರಳ ಆಚರಣೆಗೆ ಮುಂದಾಗಲಿದ್ದಾರೆ. ಇಂದು ಇಡೀ ಪ್ರಪಂಚವು ಹಿಂದೆಂದೂ ಕಾಣದಂಥ ವಿಘ್ನವನ್ನು ಎದುರಿಸುತ್ತಿದೆ. ಕೋಟ್ಯಂತರ ಜನರು ಸೋಂಕಿತರಾಗಿದ್ದರೆ, ಲಕ್ಷಾಂತರ ಜನರು ಕೋವಿಡ್‌ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ. ವೈಜ್ಞಾನಿಕ ಲೋಕವು ರೋಗಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನದಲ್ಲಿ ಹಗಲುರಾತ್ರಿ ಶ್ರಮಿಸುತ್ತಿದೆ. ಕೊರೊನಾ ವಾರಿಯರ್‌ಗಳು ಜನರ ಸ್ವಾಸ್ಥ್ಯ ರಕ್ಷಣೆಗಾಗಿ ತಮ್ಮ ಆರೋಗ್ಯದ ಪರಿವೆಯಿಲ್ಲದೇ ಹೋರಾಡುತ್ತಿದ್ದಾರೆ. ಒಟ್ಟಿrಲ್ಲಿ ಪ್ರತಿಯೊಬ್ಬರಿಗೂ ಈ ವೈರಾಣು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಒಡ್ಡಿದೆ. ಗಣಪತಿಯು ವಿಘ್ನನಿವಾರಕನಾದ್ದರಿಂದ, ಮಾನವಕುಲಕ್ಕೆ ಎದುರಾಗಿರುವ ಈ ಕಂಟಕವನ್ನು ಬಹುಬೇಗ ನಿವಾರಿಸು ಎಂದು ಎಲ್ಲರೂ ಪ್ರಾರ್ಥಿಸೋಣ.
ಹಬ್ಬಗಳ ವಿಶೇಷತೆಯೆಂದರೆ, ಅವುಗಳ ಆಚರಣೆಯು ಹಲವು ಆಯಾಮಗಳಲ್ಲಿ ನಮ್ಮಲ್ಲಿ ಗುಣಾತ್ಮಕತೆಯನ್ನು ವೃದ್ಧಿಸುತ್ತವೆ. ಅದರಲ್ಲೂ ಗಣೇಶ ಚತುರ್ಥಿಯಂತೂ ಭಾರತೀಯರ ನಡುವಿನ ಭಾವೈಕ್ಯದ ಕೊಂಡಿಯಾಗಿದೆ. ಜಾತಿ-ಮತ-ಪಂಥಗಳ ಭೇದಭಾವವನ್ನೆಲ್ಲ ತೊಡೆದು, ಜನರೆಲ್ಲರೂ ಸರ್ವವಂದ್ಯ ಗಣಪನನ್ನು ಭಕ್ತಿಭಾವದಿಂದ ಭಜಿಸುವ ಗಣೇಶೋತ್ಸವವು ವಿಶಿಷ್ಟವಾದದ್ದು.
ಮೋದಕ ಪ್ರಿಯ ಗಣಪತಿಯನ್ನು ಸ್ಮರಿಸುವ ಮೂಲಕವೇ ಮುನ್ನಡೆ ಇಡುವ ಪರಿಪಾಠ ಜನರಲ್ಲಿ ಇದೆ. ಗಣಪತಿಗೆ ನಮಿಸಿ ಮುನ್ನಡೆದರೆ ಕೈಗೊಂಡ ಕಾರ್ಯಗಳು ಸಫಲವಾಗುತ್ತವೆ, ಸಂಕಷ್ಟಗಳು ದೂರವಾಗುತ್ತವೆ ಎನ್ನುವ ಬಲವಾದ ನಂಬಿಕೆ ನಮಗೆಲ್ಲರಿಗೂ ಇದೆ. ಇದು ಒಂದರ್ಥದಲ್ಲಿ ಇಡೀ ದೇಶಕ್ಕೆ ಬದಲಾವಣೆಯ ಹೊತ್ತು. ಕೋವಿಡ್‌ನ ಈ ಸಮಯದಲ್ಲಿ ಅನೇಕರು ತಮ್ಮ ಜೀವನದಲ್ಲಿ ಬೃಹತ್ ಬದಲಾವಣೆಯನ್ನು ನೋಡುತ್ತಿದ್ದಾರೆ ಅಥವಾ ಹೊಸ ಯೋಜನೆಗಳು, ಸಾಧ್ಯತೆಗಳತ್ತ ಮುಖ ಮಾಡುತ್ತಿದ್ದಾರೆ. ಅವರೆಲ್ಲರ ಪ್ರಯತ್ನಗಳೂ ಯಶಸ್ವಿಯಾಗಲಿ ಎಂದು ಹಾರೈಸೋಣ. ಇನ್ನು ಗಣೇಶೋತ್ಸವಗಳ ಮೂಲ ಉದ್ದೇಶವಾದ ಏಕತೆಯ ಭಾವನೆಯು ನಮ್ಮಲ್ಲಿ ಅಂತರ್ಗತವಾಗುವಂಥ ದಿಕ್ಕಿನಲ್ಲಿ ಚಿಂತಿಸೋಣ. ಮನೆಯಲ್ಲಿದ್ದೇ ಸಂಭ್ರಮದಿಂದ ಎಲ್ಲರೂ ವಿಘ್ನನಿವಾರಕ ಗಣಪತಿಯನ್ನು ಭಜಿಸೋಣ. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಷಯಗಳು. ಸುರಕ್ಷಿತವಾಗಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.