ಮುಂಬಯಿ ಗಣೇಶೋತ್ಸವಕ್ಕೆ ಸುಪ್ರೀಂ ಒಲವಿಲ್ಲ
Team Udayavani, Aug 22, 2020, 1:33 AM IST
ಹೊಸದಿಲ್ಲಿ: ಮುಂಬಯಿ ಗಣೇಶೋತ್ಸವಕ್ಕೆ ಸೇರುವ ಜನರನ್ನು ನಿಯಂತ್ರಿಸುವುದೇ ಕಷ್ಟ. ಗಣೇಶೋತ್ಸವಕ್ಕೆ ಅನುಮತಿ ನೀಡಲು ನಮಗೆ ಒಲವಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಮುಂಬಯಿಯ ಜೈನಮಂದಿರಗಳಲ್ಲಿ ಪರ್ಯುಷಣ ಆಚರಣೆಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕೈಗೆತ್ತಿಕೊಂಡಿತ್ತು. ಈ ವೇಳೆ ಮುಖ್ಯ ನ್ಯಾ| ಎಸ್.ಎ. ಬೋಬ್ದೆ, ಮುಂಬಯಿ ಗಣೇಶೋತ್ಸವ ಬಗ್ಗೆ ನ್ಯಾಯಪೀಠದ ಅಭಿಪ್ರಾಯ ತಿಳಿಸಿದ್ದಾರೆ.
ಮುಂಬಯಿನ ದಾದರ್, ಬೈಕುಲಾ ಮತ್ತು ಚೆಂಬೂರ್‌ನ 3 ಜೈನ ಮಂದಿರಗಳಲ್ಲಿ ಪರ್ಯುಷಣ ಆಚರಿಸಲು ಸುಪ್ರೀಂ ಕೋರ್ಟ್ ಅನುಮತಿ ಕಲ್ಪಿಸಿದೆ. ಆಚರಣೆ ವೇಳೆ ಗರಿಷ್ಠ 5ಕ್ಕಿಂತ ಹೆಚ್ಚಿನ ಜನರು ಮಂದಿರದೊಳಗೆ ಇರಬಾರದು ಎಂದೂ ಷರತ್ತು ವಿಧಿಸಿದೆ.
ಮಹಾರಾಷ್ಟ್ರ ಆಕ್ಷೇಪ: ಒಂದು ಸಮುದಾಯದ ಹಬ್ಬದ ಆಚರಣೆಗೆ ಅನುಮತಿ ನೀಡಿದರೆ, ಬೇರೊಂದು ಸಮುದಾಯದವರೂ ಇದೇ ಬೇಡಿಕೆಯನ್ನೇ ಮುಂದಿಡಬಹುದು. ಆಗ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಗ ಬಹುದು ಎಂದು ಮಹಾರಾಷ್ಟ್ರ ಸರಕಾರ ಪರ ಪಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.