ದೇಶದಲ್ಲಿ ಒಂದೇ ದಿನ 69,878 ಹೊಸ ಕೋವಿಡ್ ಪ್ರಕರಣಗಳು: ಚೇತರಿಕೆ ಪ್ರಮಾಣ 74.69%
Team Udayavani, Aug 22, 2020, 10:52 AM IST
ನವದೆಹಲಿ: ಭಾರತದಲ್ಲಿ ಒಟ್ಟಾರೆಯಾಗಿ ಕೋವಿಡ್ ಸೋಂಕಿತರ ಸಂಖ್ಯೆ 3 ಮಿಲಿಯನ್ ಗಡಿತಲುಪಿದೆ. ಆ ಮೂಲಕ ಜಾಗತಿಕ ವೈರಾಣು ಪೀಡಿತ ದೇಶಗಳ ಪೈಕಿ ಅಮೆರಿಕಾ, ಬ್ರೆಜಿಲ್ ನಂತರದ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 69,878 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಇವರೆಗೆ ದಾಖಲಾದ ಗರಿಷ್ಟ ಪ್ರಮಾಣವಾಗಿದೆ. ಸುಮಾರು 945 ಜನ ಕಳೆದ ಒಂದು ದಿನದಲ್ಲಿ ಮೃತಪಟ್ಟಿದ್ದು, ಇವರೆಗೂ 55,794 ಜನರು ಕೋವಿಡ್ ಗೆ ಬಲಿಯಾದಂತಿದೆ.
ಒಟ್ಟಾರೆಯಾಗಿ ದೇಶದಲ್ಲಿ 29,75,701 ಜನರಿಗೆ ಸೋಂಕು ದೃಢಪಟ್ಟಿದ್ದು, 6,97,330 ಸಕ್ರೀಯ ಪ್ರಕರಣಗಳಿವೆ. ಅದಾಗ್ಯೂ ಭಾರತದಲ್ಲಿ ಸೋಂಕಿನಿಂದ ಗುಣಮುಖರಾಗುವವರ ಪ್ರಮಾಣ 74.69% ಗೆ ಎರಿಕೆಯಾಗಿದ್ದು ಆಶಾದಾಯಕ ಬೆಳವಣಿಗೆಯಾಗಿದೆ.
ಒಂದೆ ದಿನದಲ್ಲಿ 63.631 ಜನರು ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಆ ಮೂಲಕ 22,22,577 ಜನರು ಗುಣಮುಖರಾದಂತಾಗಿದೆ. ಪ್ರತಿನಿತ್ಯ ದೇಶದಲ್ಲಿ 1 ಮಿಲಿಯನ್ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.