![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Aug 23, 2020, 10:47 AM IST
ಬೆಂಗಳೂರಿನಂಥ ಮಹಾನಗರಗಳಲ್ಲಿ ಟ್ಯಾಕ್ಸಿಗಳು ಸಂಚಾರದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇದೇ ಟ್ಯಾಕ್ಸಿಗಳನ್ನು ನಂಬಿಕೊಂಡು ಸಾವಿರಾರು ಯುವಕರು ಉದ್ಯೋಗ ಕಂಡುಕೊಂಡಿರುತ್ತಾರೆ. ಬದುಕು ಕಟ್ಟಿಕೊಂಡಿರುತ್ತಾರೆ. ಈಗ ಇದೇ ಟ್ಯಾಕ್ಸಿ ಮತ್ತದನ್ನು ನಂಬಿಕೊಂಡಿರುವವರ ಬದುಕು ಸಿನಿಮಾ ರೂಪದಲ್ಲಿ ತೆರೆಮೇಲೆ ಬರುತ್ತಿದೆ.
ಅಂದಹಾಗೆ, ಈ ಚಿತ್ರದ ಹೆಸರು “ಎಲ್ಲೋ ಬೋರ್ಡ್’. ಟ್ಯಾಕ್ಸಿಗಳ ನಂಬರ್ ಬೋರ್ಡ್ ಹಳದಿ ಬಣ್ಣದಲ್ಲಿರುವುದರಿಂದ, ಈ ಚಿತ್ರಕ್ಕೂ “ಎಲ್ಲೋ ಬೋರ್ಡ್’ ಎಂದು ಹೆಸರಿಡಲಾಗಿದೆಯಂತೆ. ಬಹುದಿನಗಳ ನಂತರ ನಟ ಪ್ರದೀಪ್ “ಎಲ್ಲೋ ಬೋರ್ಡ್’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, ಕ್ಯಾಬ್ ಡ್ರೈವರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಹಲ್ಯಾ ಸುರೇಶ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸ್ನೇಹ ಖುಷಿ, ಮೋನಿಕಾ, ಸಾಧುಕೋಕಿಲ, ಭವಾನಿ ಪ್ರಕಾಶ್, ಅಮಿತ್, ಶ್ರೀನಿವಾಸ್ ಮತ್ತು ಬಾಂಬೆ, ಚೆನ್ನೈನ ಹಲವು ರಂಗಭೂಮಿ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ರೊಮ್ಯಾಂಟಿಕ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಎಲ್ಲೋ ಬೋರ್ಡ್’ ಚಿತ್ರವನ್ನು ಬೆಂಗಳೂರು, ಮೂಡಿಗೆರೆ, ಗೋಕರ್ಣ ಮೊದಲಾದ ಕಡೆಗಳಲಿ ಚಿತ್ರೀಕರಿಸಲಾಗಿದೆ. ಚಿತ್ರಕ್ಕೆ ತ್ರಿಲೋಕ್ ರೆಡ್ಡಿ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಚಿತ್ರಕ್ಕೆ ಅದ್ವಿಕ್ ಸಂಗೀತ, ಪ್ರವೀಣ್ ಛಾಯಾಗ್ರಹಣ, ಗಿರಿ ಮಹೇಶ್ ಸಂಕಲನವಿದೆ. “ವಿಂಟೇಜ್ ಫಿಲಿಂಸ್’ ಬ್ಯಾನರ್‌ನಲ್ಲಿ ಗೌತಂ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈಗಾಗಲೇ “ಎಲ್ಲೋ ಬೋರ್ಡ್’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇನ್ನೇನು ಕೆಲತಿಂಗಳಲ್ಲಿ “ಎಲ್ಲೋ ಬೋರ್ಡ್’ ಹಾರನ್ ಥಿಯೇಟರ್‌ಗಳಲ್ಲಿ ಕೇಳಲಿದೆ.
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.