ಶೇ. 90ರಷ್ಟು ಸಾವುಗಳಿಗೆ ಬೇರೆ ಕಾರಣವಿದೆ !
Team Udayavani, Aug 23, 2020, 3:23 PM IST
ನ್ಯೂಯಾರ್ಕ್: ಕೋವಿಡ್ ದಿಂದ ಸಾವನ್ನಪ್ಪಿದ ಜನರ ನಿಖರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳುವುದು ಕಷ್ಟ ಎಂದು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ ಹೇಳಿದ್ದಾರೆ. ಕೋವಿಡ್ ಸೋಂಕು ಈ ಜಗತ್ತಿನಿಂದ ತೊಲಗುವ ಮೊದಲು ಲಕ್ಷಾಂತರ ಜನರು ಸಾಯುತ್ತಾರೆ. ಆದರೆ ಈ ಸಾವುಗಳನ್ನು ಕೋವಿಡ್ ದಿಂದ ಉಂಟಾದ ಸಾವು ಎಂದು ಹೇಳುವುದು ಕಷ್ಟ. ಕೋವಿಡ್ ಜಗತ್ತಿನ ಆರೋಗ್ಯ ವ್ಯವಸ್ಥೆ ಮತ್ತು ಆರ್ಥಿಕತೆಗಳ ಮೇಲೆ ಹೆಚ್ಚಿನ ಹೊರೆಯನ್ನು ಹೊರೆಸಿದೆ. ಬಡ ದೇಶಗಳಲ್ಲಿ ಕೊರೊನಾದಿಂದ ಉಂಟಾದ ಹಾನಿಯನ್ನು ನಿಖರವಾಗಿ ನಿರ್ಣಯಿಸುವುದು ಕಷ್ಟಕರವಾಗಿದೆ ಎಂದು ಉದ್ಯಮಿಯೂ ಆಗಿರುವ ಅವರು ಹೇಳಿದ್ದಾರೆ.
ಲಸಿಕೆ 2021ರ ಅಂತ್ಯದ ವೇಳೆಗೆ ಲಸಿಕೆ! : ಈಗಾಗಲೇ ಕೆಲವು ದೇಶಗಳು ಲಸಿಕೆಗಳನ್ನು ಉತ್ಪಾದಿಸುತ್ತಿವೆ. ಮುಂಬರುವ ದಿನಗಳಲ್ಲಿ ಇಂತಹ ನೂರಾರು ಲಸಿಕೆಗಳನ್ನು ಹಲವು ದೇಶಗಳು ಉತ್ಪಾದಿಸಲಿವೆ. ಆದರೆ ಸರಿಯಾಗಿ ಪರಿಣಾಮಕಾರಿಯಾದ ಲಸಿಕೆಯ ಹೆಚ್ಚಿನ ಉತ್ಪಾದನೆಯು 2021ರ ಬಳಿಕವಷ್ಟೇ ಸಾಧ್ಯವಾಗಲಿದೆ ಎಂದು ಮೈಕ್ರೋಸಾಫ್ಟ್ ಸ್ಥಾಪಕ ಅಂದಾಜಿಸಿದ್ದಾರೆ. ಲಸಿಕೆ ತಯಾರಾಗುವ ಸಂದರ್ಭದಲ್ಲಿ ಕೊರೊನಾ ರೋಗಿಗಳ ಪ್ರಮಾಣವೂ ಇಳಿಕೆಯಾಗಲಿದೆ. ಈ ತನಕ ಸಂಭವಿಸಿದ ಶೇ.90ರಷ್ಟು ಸಾವುಗಳಿಗೆ ಕೊರೊನಾ ಮಾತ್ರ ಕಾರಣವಾಗಿಲ್ಲ. ಇತರ ಕಾಯಿಲೆಗಳಿಂದಲೂ ನಡೆದಿವೆ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.
ಲಾಕ್‌ಡೌನ್ ಕಾರಣದಿಂದ ಜನರು ಇತರ ಕಾಯಿಲೆಗಳಿಗೆ ತುತ್ತಾಗಿದ್ದರು. ಈಗಾಗಲೇ ರೋಗ ಇದ್ದ ಕೆಲವರು ಔಷಧಿಯ ಕೊರತೆಯಿಂದ ಸಾವನ್ನಪ್ಪಿದ್ದರು. ಇದರಲ್ಲಿ ಇದು ಮಲೇರಿಯಾ ಮತ್ತು ಎಚ್‌ಐವಿಯಿಂದ ಸಂಭವಿಸುವ ಸಾವುಗಳೂ ಇದರಲ್ಲಿ ಸೇರಿವೆ.
350 ಮಿಲಿಯನ್ ಡಾಲರ್ ಕೊಡುಗೆ : ಸಾಂಕ್ರಾಮಿಕ ಸಮಯದಲ್ಲಿ ಬಿಲ್ ಗೇಟ್ಸ್ ಫೌಂಡೇಶನ್ 350 ಮಿಲಿಯನ್ ಡಾಲರ್ ಕೊಡುಗೆ ನೀಡಿದೆ ಎಂದು ಗೇಟ್ಸ್ ತನ್ನ ಸಂದರ್ಶನದಲ್ಲಿ ಹೇಳಿದ್ದಾರೆ. ಆದರೆ ಇದು ಸಾಕಾಗುವುದಿಲ್ಲ. ಇನ್ನೂ ಹೆಚ್ಚಿನ ಹಣದ ಅಗತ್ಯವಿದೆ. ಆರ್ಥಿಕ ನಷ್ಟವನ್ನು ತಡೆಗಟ್ಟಲು ಕೋವಿಡ್ -19 ಲಸಿಕೆ ತಯಾರಿಸಲು ನೆರವು ನೀಡುವುದಾಗಿ ಅವರು ಹೇಳಿದ್ದಾರೆ.
ಲಸಿಕೆಯನ್ನುಮಕ್ಕಳು,ವೃದ್ಧರಿಗೆ ಮೀಸಲಿಡಿ : ಮುಂಬರುವ ದಿನಗಳಲ್ಲಿ ಕೋವಿಡ್ ಲಸಿಕೆ ಅಭಿವೃದ್ಧಿಯಾಗಲಿದ್ದು, ಅವುಗಳನ್ನು ಮಕ್ಕಳು, ವೃದ್ಧರು ಅಂತಹ ಕೆಲವು ಗುಂಪುಗಳಿಗೆ ಮೀಸಲಿಡಿ, ಎಲ್ಲರೂ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ಅಮೆರಿಕ ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಂಥೊನಿ ಫಾಸಿ ಮಾತನಾಡಿ, ಯಾವುದೇ ಕಾರಣಕ್ಕೂ ಲಸಿಕೆಯನ್ನು ಪಡೆಯಲೇಬೇಕು ಎಂದು ಯಾರನ್ನೂ ಒತ್ತಾಯ ಮಾಡುವಂತಿಲ್ಲ, ಅವರಿಗೆ ತೆಗೆದುಕೊಳ್ಳಬೇಕೆನಿಸಿದರೆ ತೆಗೆದುಕೊಳ್ಳಬಹುದು, ಕಡ್ಡಾಯವಿಲ್ಲ ಎಂದರು. ಆರೋಗ್ಯ ಕಾರ್ಯಕರ್ತರು, ಮಕ್ಕಳು ಸೇರಿದಂತೆ ಕೆಲವೇ ಕೆಲವು
ಗುಂಪುಗಳಿಗೆ ಕಡ್ಡಾಯವಾಗಿ ನೀಡಬೇಕು. ಆರೋಗ್ಯ ಕಾರ್ಯಕರ್ತರು ಈ ಲಸಿಕೆ ಪಡೆದುಕೊಳ್ಳದೆ ರೋಗಿಗಳ ಸೇವೆ ಮಾಡಲು ಸಾಧ್ಯವಿಲ್ಲ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಮಾತನಾಡಿ, ಕೋವಿಡ್ ಲಸಿಕೆಗೆ ಒಮ್ಮೆ ಸಮ್ಮತಿ ಸಿಕ್ಕರೆ, ದೇಶದ ಜನತೆ ಕಡ್ಡಾಯವಾಗಿ ಲಸಿಕೆಯನ್ನು ತೆಗೆದುಕೊಳ್ಳಬೇಕು ಎಂದು ಘೋಷಿಸಿದ್ದಾರೆ. ಈ ರೀತಿ ಯಾರ ಮೇಲೂ ಒತ್ತಾಯ ಹೇರಬಾರದು ಎಂದಿದ್ದಾರೆ. ಟ್ರಂಪ್ 6 ಕಂಪನಿಗಳಿಗೆ ಮುಂಚಿತವಾಗಿಯೇ ಕೋವಿಡ್ ಲಸಿಕೆಯ ಬೇಡಿಕೆಯನ್ನಿಟ್ಟಿದೆ.
ವಿಶ್ವ ಆರೋಗ್ಯ ಸಂಸ್ಥೆಯಿಂದ ರಾಷ್ಟ್ರಗಳಿಗೆ ಪತ್ರ : ಜಿನೇವಾ: ತನ್ನ ಜಾಗತಿಕ ಲಸಿಕೆ ಕಾರ್ಯಕ್ರಮದಲ್ಲಿ ಸೇರಿಕೊಳ್ಳುವಂತೆ ಆಹ್ವಾನಿಸಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿಯೊಂದು ದೇಶಕ್ಕೆ ಮಂಗಳವಾರ ಪತ್ರವೊಂದನ್ನು ಬರೆದಿದೆ ಹಾಗೂ ತನ್ನ ಸಂಭಾವ್ಯ ಲಸಿಕೆ ಯಾರಿಗೆ ಮೊದಲು ಸಿಗುತ್ತ ದೆ ಎಂಬುದನ್ನೂ ಅದು ತಿಳಿಸಿದೆ.
ಅತಿ ಹೆಚ್ಚಿನ ಅಪಾಯಕ್ಕೆ ಗುರಿಯಾಗಿರುವ ಜಗತ್ತಿನ ಜನ ಸಮುದಾಯಕ್ಕೆ ಏಕಕಾಲದಲ್ಲಿ ಲಸಿಕೆಯನ್ನು ನೀಡದ ಹೊರತು, ಜಾಗತಿಕ ಆರ್ಥಿಕತೆಯನ್ನು ಪುನರ್ನಿರ್ಮಿಸುವುದು ಅಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಹೇಳಿದ್ದಾರೆ.
ಲಸಿಕೆ ಸಿದ್ಧವಾದ ಮೇಲೆ ಮೊದಲ ಸುತ್ತಿನ ಲಸಿಕೆಯನ್ನು ಪ್ರತಿ ದೇಶದ ಜನಸಂಖ್ಯೆಯ 20 ಶೇಕಡದಷ್ಟು ಮಂದಿಗೆ ನೀಡಲಾಗುವುದು. ಇದರಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುವ ಆರೋಗ್ಯ ಕಾರ್ಯಕರ್ತರು, 65 ವರ್ಷಕ್ಕಿಂತ ಹೆಚ್ಚಿನವರು ಮತ್ತು ಈಗಾಗಲೇ ಇತರ ಗಂಭೀರ ರೋಗಗಳಿಂದ ಬಳಲುತ್ತಿರುವವರು ಸೇರಿದ್ದಾರೆ ಎಂದು ಅವರು ತಿಳಿಸಿದರು. ವಿಶ್ವ ಆರೋಗ್ಯ ಸಂಸ್ಥೆಯ ನೇತೃತ್ವದಲ್ಲಿ “ಕೋವ್ಯಾಕ್ಸ್’ ಎಂಬ ಕಂಪೆನಿಯು ಕೋವಿಡ್ ಲಸಿಕೆಯ ಸಂಶೋಧನೆಯಲ್ಲಿ ತೊಡಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
ಗ್ರಾಮ ಪಂಚಾಯಿತಿ ವ್ಯಾಪ್ತಿಯ 90 ಲಕ್ಷ ಆಸ್ತಿಗಳಿಗೆ ಇ-ಸ್ವತ್ತು: ಸಚಿವ ಪ್ರಿಯಾಂಕ್
Conference: ಜ.18, 19ರಂದು ರಾಜ್ಯಮಟ್ಟದ ಬ್ರಾಹ್ಮಣ ಮಹಾ ಸಮ್ಮೇಳನ
Mahakumbh Mela 2025: 144 ವರ್ಷಗಳಿಗೆ ಒಮ್ಮೆ ನಡೆಯುವ ಆಧ್ಯಾತ್ಮಿಕ ವಿಸ್ಮಯ ಮಹಾ ಕುಂಭಮೇಳ
Udupi; ಮಕರ ಸಂಕ್ರಾಂತಿ ಸಂಭ್ರಮ: ಕೃಷ್ಣ ಗೀತಾನುಗ್ರಹ ಮಂಟಪ ಉದ್ಘಾಟನೆ
ಅಲಸಂಡೆ ಆಯಿತು, ಈಗ ಬಾಹ್ಯಾಕಾಶದಲ್ಲಿ ಚಿಗುರಿದ ಅಮಿಟಿ ವಿವಿಯ ಪಾಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.