ಕೋವಿಡ್ ಗೆ ಆನೆ ಲದ್ದಿ ಮದ್ದು…?
Team Udayavani, Aug 23, 2020, 4:05 PM IST
ವಿಂಡ್‌ಹೋಕ್: ಕೋವಿಡ್ ಬೇರೆ ಔಷಧ ಬೇಡ. ಆನೆ ಲದ್ದಿ ಇದ್ದರೆ ಸಾಕು, ಅದರಿಂದಲೇ ರೋಗ ಗುಣವಾಗುತ್ತದೆ! ಹೀಗಂತ ಒಂದು ಸುದ್ದಿ ನಮೀಬಿಯಾದಲ್ಲಿ ಸರಕಾರದ ಚಿಂತೆಗೆ ಕಾರಣವಾಗಿದೆ.
ಇದೊಂದು ಸುಳ್ಳು ಸುದ್ದಿಯಾಗಿದ್ದು ಅಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. ಜತೆಗೆ ಅಂತರ್ಜಾಲದಲ್ಲಿ ಆನೆ ಲದ್ದಿ ಎಂದು ಹಲವರು ಭಾರೀ ಬೆಲೆಗೆ ಮಾರಾಟ ಮಾಡತೊಡಗಿದ್ದಾರೆ. ಜನರು ಇದನ್ನು ನಂಬುತ್ತಿರುವುದರಿಂದ ಮತ್ತು ಇದು ಅವಾಂತರ ಸೃಷ್ಟಿಸುವ ಭಯದಿಂದ ನಮೀಬಿಯಾ ಸರಕಾರ, ಈ ಬಗ್ಗೆ ಜಾಗೃತಿಗೆ ಮುಂದಾಗಿದೆ. ಅಲ್ಲಿನ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಆರೋಗ್ಯ ಇಲಾಖೆಗಳು ಆನೆ ಲದ್ದಿಯಿಂದ ಕೋವಿಡ್ ಗುಣವಾಗಲ್ಲ ಎಂದು ಹೇಳುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟನೆಯನ್ನೂ ನೀಡಿವೆ.
ಜಗತ್ತಿನಲ್ಲಿ 2.23 ಕೋಟಿ ಕೋವಿಡ್ ಸೋಂಕಿತರು : ಜಿನೇವಾ: ಜಗತ್ತಿನಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಸರ್ವಾಧಿಕ 2.23 ಕೋಟಿಗೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 8 ಲಕ್ಷದ ಸನಿಹದಲ್ಲಿದೆ ಎಂದು ಜಾನ್ಸ್ ಹಾಪಿRನ್ಸ್ ವಿಶ್ವವಿದ್ಯಾಲಯ ಹೇಳಿದೆ. ಅಮೆರಿಕದಲ್ಲಿ ಅತ್ಯಧಿಕ ಸಂಖ್ಯೆಯ ಪ್ರಕರಣಗಳಿದ್ದು, 54.80 ಲಕ್ಷಕ್ಕೇರಿದೆ. 1.71 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಬ್ರಜಿಲ್ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ 34 ಲಕ್ಷ ಮಂದಿ ಸೋಂಕಿತರಿದ್ದರೆ, ಸಾವಿನ ಪ್ರಮಾಣ 1.09 ಲಕ್ಷಕ್ಕೇರಿದೆ.
ಇರಾನ್ : 20 ಸಾವಿರ ಗಡಿ ದಾಟಿದ ಸಾವಿನ ಪ್ರಮಾಣ :ಟೆಹ್ರಾನ್ : ಇರಾನ್ ದೇಶದಲ್ಲಿ ಕೋವಿಡ್ ಸೋಂಕಿನಿಂದಾಗಿ ಮೃತಪಡುವರ ಪ್ರಮಾಣ ಹೆಚ್ಚಾಗಿದ್ದು, ಅಲ್ಲಿನ ಆರೋಗ್ಯ ಸಚಿವಾಲಯ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ದೇಶದ ಒಟ್ಟಾರೆ ಮರಣ ಪ್ರಮಾಣ ಇಪ್ಪತ್ತು ಸಾವಿರ ಗಡಿ ದಾಟಿದ್ದು, ಮಧ್ಯಪ್ರಾಚ್ಯ ಪ್ರದೇಶಗಳಲ್ಲಿಅತೀ ಹೆಚ್ಚು ಸೋಂಕು ಸಾವು ಪ್ರಕರಣಗಳು ವರದಿಯಾದ ದೇಶ ಇದಾಗಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.