ಸೈಕಲ್ ಲೇನ್‌ಗಳಿಂದ ಭರ್ಜರಿ ಆರ್ಥಿಕ ಲಾಭ
Team Udayavani, Aug 23, 2020, 6:20 PM IST
ಪ್ಯಾರಿಸ್: ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಜಗತ್ತಿನಾದ್ಯಂತ ಲಾಕ್ ಡೌನ್ ಆಗಿದ್ದಾಗ ಜನರು ಹೆಚ್ಚು ಹೆಚ್ಚಾಗಿ ಸೈಕಲ್‌ಗಳನ್ನೇ ಬಳಸಿದರು. ಇದರಿಂದಾಗಿ ಯುರೋಪ್ ಸೇರಿದಂತೆ ವಿವಿಧ ದೇಶಗಳಲ್ಲಿ ಕೋವಿಡ್ ಸೈಕಲ್ ಮಾರ್ಗಗಳನ್ನು ಮಾಡಲಾಗಿದ್ದು, ಜನರೂ ಇದಕ್ಕೆ ಹೊಂದಿಕೊಂಡಿದ್ದಾರೆ.
ಇದರ ಪರಿಣಾಮ ಯುರೋಪ್ ಒಂದರಲ್ಲೇ ಸುಮಾರು 21 ಸಾವಿರ ಕೋಟಿ ರೂ.ಗಳಷ್ಟು ಆರೋಗ್ಯಕ್ಕೆ ಲಾಭವಾಗಲಿದೆ ಎಂದು ಜರ್ಮನಿಯ ಹವಾಮಾನ ಬದಲಾವಣೆ ಕುರಿತ ಸಂಶೋಧನ ತಜ್ಞರು ವರದಿಯೊಂದರಲ್ಲಿ ಹೇಳಿದ್ದಾರೆ. ಕೋವಿಡ್ ಬಳಿಕ ಯುರೋಪ್‌ನ 106 ನಗರಗಳಲ್ಲಿ ಸೈಕ್ಲಿಂಗ್ ಲೇನ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಅಲ್ಲದೇ ಇಲ್ಲಿ ಶೇ.7ರಷ್ಟು ಸೈಕ್ಲಿಂಗ್ ಹೆಚ್ಚಾಗಿದೆ. ಜತೆಗೆ ಪ್ರತಿ ನಗರಗಳಲ್ಲಿ ಸೈಕಲ್‌ಗಾಗಿ ಸ್ಥಳ ಕಾದಿರಿಸುವ ಪ್ರಮಾಣವೂ ಶೇ.0.6ರಷ್ಟು ಹೆಚ್ಚಾಗಿದೆ.
ಸದ್ಯ ಸೈಕಲ್ ಸವಾರರಿಗಾಗಿ ಮಾಡಿದ ಮಾರ್ಗ, ಪಾರ್ಕಿಂಗ್ ವ್ಯವಸ್ಥೆ ಇತ್ಯಾದಿಗಳಿಂದ ಆರೋಗ್ಯ ವಲಯದಲ್ಲಿ 21 ಸಾವಿರ ಕೋಟಿ ರೂ.ಗಳಷ್ಟು ಲಾಭವಾಗಲಿದೆ. ಕೋವಿಡ್ ಸಂದರ್ಭದಲ್ಲಿ ಯುರೋಪ್‌ನಲ್ಲಿ 2315 ಕಿ.ಮೀ. ಸೈಕಲ್ ಲೇನ್‌ಗಳು ನಿರ್ಮಾಣವಾಗಿದ್ದು, ಬಳಕೆಯಾಗುತ್ತಿದೆ. ಸೈಕ್ಲಿಂಗ್, ನಡೆದಾಡುವುದರಿಂದ ದೈಹಿಕ ವ್ಯಾಯಾಮ ಹೆಚ್ಚಿ ರೋಗ ನಿರೋಧಕ ಶಕ್ತಿ ಬೆಳೆಯಲು ಕಾರಣವಾಗುತ್ತದೆ. ಇದು ಪರಿಸರ ಸಹ್ಯ, ಕಡಿಮೆ ಖರ್ಚು ಸಾಕಾಗುತ್ತದೆ. ಜತೆಗೆ ಮೋಟಾರು ವಾಹನಗಳಿಗೆ ಬಳಕೆಯಾಗುವ ಇಂಧನ, ಹೊಗೆ ಸೂಸುವ ಪ್ರಮಾಣ ಇಳಿಕೆಯಾಗುತ್ತದೆ. ಜನರು ಆರೋಗ್ಯವಂತರಾದಷ್ಟು, ಸರಕಾರ ಆರೋಗ್ಯ ವಲಯಕ್ಕೆ ಹೂಡಿಕೆ ಮಾಡುವುದು ತಪ್ಪುತ್ತದೆ ಎಂದು ಸಂಶೋಧನ ವರದಿಯಲ್ಲಿ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.