ನೇಪಾಲ: ಅಂತಾರಾಷ್ಟ್ರೀಯ ವಿಮಾನ ಸೇವೆ ಆರಂಭಿಸಲು ತೀರ್ಮಾನ
Team Udayavani, Aug 24, 2020, 11:35 AM IST
ಕಠ್ಮಂಡು: ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ನೇಪಾಲದ ಪ್ರಜೆಗಳನ್ನು ಕರೆತರಲು ಸೆಪ್ಟೆಂಬರ್ 1ರಂದು ಅಂತಾರಾಷ್ಟ್ರೀಯ ವಿಮಾನ ಸೇವೆಗಳನ್ನು ಪುನರಾರಂಭಿಸಲು ನೇಪಾಲ ಸರಕಾರ ತೀರ್ಮಾನಿಸಿದೆ.
ಆರ್‌ಟಿ- ಪಿಸಿಆರ್ ಪರೀಕ್ಷೆ ಗಳನ್ನು ನಡೆಸುತ್ತಿರುವ ರಾಷ್ಟ್ರಗಳಲ್ಲಿರುವ ನೇಪಾಲದ ಪ್ರಜೆಗಳನ್ನು ಕರೆತರಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪ್ರತಿದಿನ 500 ಪ್ರಜೆಗಳನ್ನು ವಾಪಸ್ ಕರೆತರಲಾಗುವುದು.
6 ತಿಂಗಳ ನಂತರ ನೇಪಾಲದಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಪುನರಾರಂಭಗೊಂಡಿದೆ.
ಬರ್ಲಿನ್: 41 ಶಾಲೆಗಳಲ್ಲಿ ಸೋಂಕು ಪತ್ತೆ
ಬರ್ಲಿನ್: ಜರ್ಮನಿಯ ರಾಜಧಾನಿ ಬರ್ಲಿನ್‌ನ 41 ಶಾಲೆಗಳ ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಸೋಂಕು ದೃಢಪಟ್ಟ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದ್ದು, ಶಾಲೆಗಳನ್ನು ಮತ್ತೆ ಆರಂಭಿಸುವುದರಿಂದ ಸೋಂಕು ಹರಡುವುದು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.
ಇನ್ನು ದೇಶದಲ್ಲಿ ಶಿಕ್ಷಣ ಕ್ಷೇತ್ರ ಅಲ್ಲಿನ ಕೇಂದ್ರ ಸರಕಾರದ ಅಧೀನದಲ್ಲಿಲ್ಲ. ಹಾಗೇ ಇಲ್ಲಿನ 16 ರಾಜ್ಯಗಳು ಶಿಕ್ಷಣದ ನೀತಿಗಳನ್ನು ಸ್ವತಂತ್ರವಾಗಿ ರೂಪಿಸುತ್ತಿದ್ದು, ಈ ಅಂಶಗಳಿಂದಲ್ಲೇ ಕೋವಿಡ್ ಸೋಂಕು ನಿರ್ವಹಣೆ ವಿಚಾರದಲ್ಲಿ ಒಮ್ಮತಕ್ಕೆ ಬರಲು ಜರ್ಮನಿಗೆ ಈವರೆಗೂ ಸಾಧ್ಯವಾಗಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಜತೆಗೆ ಶಾಲೆಗಳಿಂದ ಮನೆಗಳಿಗೆ, ಮನೆಗಳಿಂದ ಸಮುದಾಯಕ್ಕೆ ಸೋಂಕು ಹರಡಬಹುದು ಎಂದು ಜರ್ಮನಿಯಲ್ಲಿ ತೀವ್ರ ಚರ್ಚೆಗಳು ನಡೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.