ಮಾರ್ಗ ಮಧ್ಯೆ ಸಿಕ್ಕಳು ರೀಷ್ಮಾ
ಏಕ್ ಲವ್ ಯಾ ನಾಯಕಿಯ ಹೊಸಚಿತ್ರ
Team Udayavani, Aug 24, 2020, 6:36 PM IST
ಕೆಲವು ನಾಯಕ ನಟಿಯರೇ ಹಾಗೆ. ಚಿತ್ರರಂಗಕ್ಕೆ ಕಾಲಿಟ್ಟು ತಮ್ಮ ಮೊದಲ ಸಿನಿಮಾ ಸ್ಕ್ರೀನ್‌ಗೆ ಬರುವ ಮೊದಲೇ, ಒಂದಷ್ಟು ಗುರುತಿಸಿಕೊಂಡು ಒಂದರ ಹಿಂದೊಂದು ಸಿನಿಮಾ ಗಳಲ್ಲಿ ಬ್ಯುಸಿಯಾಗುತ್ತಾರೆ. ಸದ್ಯ ಆ ಸಾಲಿಗೆ ಸೇರುತ್ತಿರುವ ಮತ್ತೂಬ್ಬ ನಾಯಕಿಯ ಹೆಸರು ರೀಷ್ಮಾ.
ಅಂದಹಾಗೆ, ಯಾರು ಈ ರೀಷ್ಮಾ ಅಂತ ನೀವು ಕೇಳಬಹುದು. ಅದಕ್ಕೆ ಉತ್ತರ ಜೋಗಿ ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’. ಹೌದು, ಜೋಗಿ ಪ್ರೇಮ್ ನಿರ್ದೇಶನದ ಮತ್ತು ನಟಿ ರಕ್ಷಿತಾ ಸೋದರ ರಾಣಾ ನಾಯಕನಾಗಿ ಬೆಳ್ಳಿತೆರೆಗೆ ಕಾಲಿಡುತ್ತಿರುವ ಹೊಸಚಿತ್ರ “ಏಕ್ ಲವ್ ಯಾ’ ಚಿತ್ರದ ನಾಯಕಿಯೇ ಈ ರೀಷ್ಮಾ. ಈಗಾಗಲೇ ತಮ್ಮ ಮೊದಲ ಚಿತ್ರ “ಏಕ್ ಲವ್ ಯಾ’ ಮುಗಿಸಿರುವ ರೀಷ್ಮಾ, ಆ ಚಿತ್ರ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ.
ಅದರ ನಡುವೆಯೇ ರೀಷ್ಮಾ ಮತ್ತೂಂದು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆ ಚಿತ್ರದ ಹೆಸರು “ಮಾರ್ಗ’. “ಆ ದಿನಗಳು’ ಖ್ಯಾತಿಯ ಚೇತನ್ ನಾಯಕನಾಗಿ ಅಭಿನಯಿಸುತ್ತಿರುವ “ಮಾರ್ಗ’ ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. ಈ ಚಿತ್ರದಲ್ಲಿ ರೀಷ್ಮಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ತಮ್ಮ ಹೊಸಚಿತ್ರದ ಪಾತ್ರದ ಬಗ್ಗೆ ಮಾತನಾಡುವ ರೀಷ್ಮಾ, “”ಏಕ್ ಲವ್ ಯಾ’ ಆದಮೇಲೆ ನಾನು ನಿರೀಕ್ಷಿಸುತ್ತಿದ್ದಂಥ ಪಾತ್ರ ಈ ಸಿನಿಮಾದಲ್ಲಿ ಸಿಕ್ಕಿದೆ. ಆಫೀಸ್ ವರ್ಕ್ ಮಾಡುವ ಹುಡುಗಿಯಾಗಿ ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಂಥರಾ ಫಾರ್ಮಲ್ ಲುಕ್ ಇರುವಂಥ ಡಿಫರೆಂಟ್ ಕ್ಯಾರೆಕ್ಟರ್ ಇದರಲ್ಲಿದೆ. ಈಗಾಗಲೇ ಈ ಸಿನಿಮಾದ ಕ್ಯಾರೆಕ್ಟರ್‌ಗೆ ಒಂದಷ್ಟು ಹೋಂ ವರ್ಕ್ ಮಾಡಿಕೊಳ್ಳುತ್ತಿದ್ದೇನೆ. ಇದೇ ಸೆಪ್ಟೆಂಬರ್ ನಿಂದ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.
ಇದೊಂದು ಸಸ್ಪೆನ್ಸ್ – ಥ್ರಿಲ್ಲರ್ ಸಬ್ಜೆಕ್ಟ್ ಸಿನಿಮಾ. ಆಡಿಯನ್ಸ್‌ಗೆ ಅನೇಕ ಅನಿರೀಕ್ಷಿತ ಅಚ್ಚರಿಗಳು ಇದರಲ್ಲಿರುತ್ತವೆ’ ಎನ್ನುತ್ತಾರೆ. ಇನ್ನು “ಮಾರ್ಗ’ ಚಿತ್ರದಲ್ಲಿ ಚೇತನ್ ಅವರಿಗೆ ನಾಯಕಿಯಾಗಿ ಜೋಡಿಯಾಗುತ್ತಿರುವ ರೀಷ್ಮಾ ಅವರಿಗೆ ಚಿತ್ರದಲ್ಲಿ ಬ್ಯುಟಿಫುಲ್ ಸಾಂಗ್ಸ್ ಕೂಡ ಇದೆಯಂತೆ. “ಚೇತನ್ ಮತ್ತು ನನ್ನ ಕೆಮಿಸ್ಟ್ರಿ ಸ್ಕ್ರೀನ್ ಮೇಲೆ ವರ್ಕೌಟ್ ಆಗಲಿದೆ. ಇಂಡಸ್ಟ್ರಿಗೆ ಬರುತ್ತಿದ್ದಂತೆ, ಇಂಥ ಒಳ್ಳೆಯ ಸಿನಿಮಾಗಳು, ಕ್ಯಾರೆಕ್ಟರ್‌ಗಳು ಸಿಗುತ್ತಿರುವುದು ನಿಜಕ್ಕೂ ಖುಷಿಯಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದ್ರೆ, ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ಬರೋದು ಗ್ಯಾರೆಂಟಿ’ ಎನ್ನುತ್ತಾರೆ ರೀಷ್ಮಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.