ಬೆಳೆ ಸಮೀಕ್ಷೆ: ಕೈಕೊಡುತ್ತಿದೆ ಜಿಪಿಎಸ್
ಮಂಗಳೂರಿನಲ್ಲಿ ಗರಿಷ್ಠ ನೋಂದಣಿ; ಅಧಿಕೃತವಾಗದ ನೋಂದಣಿ ಅವಧಿ ವಿಸ್ತರಣೆ
Team Udayavani, Aug 24, 2020, 10:03 PM IST
ಬೆಳ್ತಂಗಡಿಯ ವಿವಿಧೆಡೆ ಬೆಳೆ ಸಮೀಕ್ಷೆ ನಡೆಸಲಾಯಿತು.
ಬೆಳ್ತಂಗಡಿ: ರೈತರೇ ಮೊಬೈಲ್ ಆ್ಯಪ್ ಮೂಲಕ ತಮ್ಮ ಜಮೀನು ಬೆಳೆ ಸಮೀಕ್ಷೆ ಮಾಡುವ ಬೆಳೆ ಸಮೀಕ್ಷೆ ಉತ್ಸವಕ್ಕೆ ಆರಂಭದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತರೂ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಜತೆಗೆ ಗುಡ್ಡಗಾಡು ಪ್ರದೇಶದಲ್ಲಿ ಜಿಪಿಎಸ್ ಸಿಗ್ನಲ್ ಸಮಸ್ಯೆಯಿಂದ ಸಮೀಕ್ಷೆಗೆ ನಿರೀಕ್ಷಿತ ಮಟ್ಟದ
ವೇಗ ಸಿಕ್ಕಿಲ್ಲ
ರೈತರೇ ತಮ್ಮ ಮೊಬೈಲ್‌ನಲ್ಲಿ ಬೆಳೆ ಸಮೀಕ್ಷೆ ನಡೆಸಲು ಸರಕಾರ ಆ. 10ರಿಂದ 24ರ ವರೆಗೆ ಮುಕ್ತ ಅವಕಾಶ ನೀಡುವ ಮೂಲಕ ರೈತರರನ್ನು ಡಿಜಿಟಲ್ ಕ್ರಾಂತಿಗೊಳಪಡಿಸಿತ್ತು. ಆದರೆ ದ.ಕ. ಜಿಲ್ಲೆಯಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ದ.ಕ. ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ಇದೇ ಪರಿಸ್ಥಿತಿ ಇದೆ.
ಅವಧಿ ವಿಸ್ತರಣೆ: ಇಲಾಖೆಗಿಲ್ಲ ಅಧಿಕೃತ ಮಾಹಿತಿ
ಮೊಬೈಲ್ ಮೂಲಕ ರೈತರೇ ಬೆಳೆ ಸಮೀಕ್ಷೆ ನಡೆಸಲು ಈ ಹಿಂದೆ ಆ. 24 ಕೊನೆ ದಿನಾಂಕವಾಗಿದ್ದು, ಬಳಿಕ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಸೆ. 23ರ ವರೆಗೆ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಇಲಾಖೆಗೆ ಈ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಇನ್ನು ಮುಂದೆ ಕೃಷಿ ಇಲಾಖೆ ನೇಮಿಸಿದ ಖಾಸಗಿ ವ್ಯಕ್ತಿಗಳ ಸಹಾಯದಿಂದ ನೋಂದಣಿ ಮಾಡಬೇಕಿದೆ. ಅವರಿಗೆ ಸರಕಾರ ಒಂದು ಪ್ಲಾಟ್ ನೋಂದಣಿಗೆ ಇಂತಿಷ್ಟು ಕಮಿಷನ್ ರೂಪದಲ್ಲಿ ಟಾರ್ಗೆಟ್ ನೀಡಿದೆ.
ರೈತರ ನೇರ ಸಹಭಾಗಿತ್ವದದ ಕೃಷಿ ಇಲಾಖೆ ಈ ಯೋಜನೆಯಿಂದ ನಿಖರ ಮಾಹಿತಿ ಸಂಗ್ರಹಿಸಲು ಪೂರಕವಾಗಿದ್ದರೂ ನೋಂದಣಿಯಿಂದ ಹಿಂದುಳಿದಿದೆ. ರಾಜ್ಯದಲ್ಲಿ 2.12 ಕೋಟಿ ಕೃಷಿ ಕ್ಷೇತ್ರದ ಬೆಳೆ ಸಮೀಕ್ಷೆಗೆ ಉದ್ದೇಶಿಸಿದ್ದರೂ 14 ದಿನಗಳಲ್ಲಿ 10 ಲಕ್ಷ ರೈತರಷ್ಟೇ ಖುದ್ದಾಗಿ ಬೆಳೆ ಸಮೀಕ್ಷೆ ಕೈಗೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಡಿಜಿಟಲ್ ತಂತ್ರಜ್ಞಾನಕ್ಕೆ ರೈತರು ಒಗ್ಗಿಕೊಳ್ಳದೇ ಇರುವುದು ಒಂದೆಡೆಯಾದರೆ, ಪಟ್ಟಣಗಳಲ್ಲೇ ನಿರ್ಲಕ್ಷéಕೊಳಗಾಗಿದೆ.
ಸರ್ವೆ ನಂ. ಆಧಾರದಲ್ಲಿ ನೋಂದಣಿ ಮಾಡಬೇಕಿದೆ
ಪರಿವರ್ತಿತ ಭೂ ಪ್ರದೇಶ ಹೊರತುಪಡಿಸಿ ಪಾಳು ಬಿದ್ದ ಭೂಮಿ ಇದ್ದಲ್ಲಿಯೂ ಸರ್ವೆ ನಂ. ಆಧಾರದಲ್ಲಿ ನೋಂದಣಿ ಮಾಡಬೇಕಿದೆ. ಕೃಷಿ ಮಾತ್ರವಲ್ಲದೆ, ಹಟ್ಟಿ, ಫಾರ್ಮ್, ಇನ್ನಿತರ ಉಪ ಬೆಳೆಗಳ ಬಗ್ಗೆ ನೋಂದಣಿ ಕಡ್ಡಾಯವಾಗಿದೆ. ಕೋವಿಡ್ ನಡುವೆ ಹೆಚ್ಚಿನ ಮಂದಿ ಸಮೀಕ್ಷೆಗೆ ಆಸಕ್ತಿ ತೋರಿಲ್ಲ. ಇತ್ತ ಪ್ರತಿ ತಾಲೂಕುವಾರು ಕೃಷಿ ಇಲಾಖೆಯಲ್ಲಿ 20ಕ್ಕೂ ಹೆಚ್ಚು ಸಿಬಂದಿ ಕೊರತೆಗಳಿರುವುದರಿಂದ ಸಂಪೂರ್ಣವಾಗಿ ರೈತರ ಬಳಿಗೆ ತಲುಪಲೂ ಸಾಧ್ಯವಾಗತ್ತಿಲ್ಲ. ಪ್ರಸಕ್ತ ಇಲಾಖೆ ಕೆಲಸದ ಒತ್ತಡದಿಂದಾಗಿ ವೃತ್ತಿಗೆ ರಾಜೀನಾಮೆ ನೀಡುವ ಮಟ್ಟಕ್ಕೆ ಸಿಬಂದಿ ಹೈರಾಣಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿ ಜಿಪಿಎಸ್ ಅಡ್ಡಿಯಾಗುವುದರಿಂದ 4ಜಿ ನೆಟ್‌ವರ್ಕ್ ವ್ಯಾಪ್ತಿಯಲ್ಲೂ ಅಪ್ಲೋಡಿಂಗ್ ಸಮಸ್ಯೆ ಕಂಡುಬರುತ್ತಿದೆ. ಬಿಎಸ್‌ಎನ್‌ಎಲ್ ಇನ್ನೂ 3ಜಿ ಸೇವೆಯಲ್ಲಿರುವುದು ಒಂದೆಡೆಯಾದರೆ, ಗ್ರಾಮೀಣ ಭಾಗದ ಬಹುತೇಕ ರೈತರು ಸ್ಮಾರ್ಟ್ ಫೋನ್ ಹೊಂದಿಲ್ಲ. ಹಿರಿಯ ರೈತರಿಗೆ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡುವ ಮಾಹಿತಿ ಇಲ್ಲ. ಮಕ್ಕಳು ಹಾಗೂ ಅನ್ಯರನ್ನು ಅವಲಂಬಿತವಾಗಬೇಕಿದೆ.
ಕೃಷಿಕರೇ ಹೆಚ್ಚಿನ ಆಸಕ್ತಿ ತೋರಬೇಕಿದೆ
ಈ ನಡುವೆ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ ಪುತ್ತೂರು-65, ಬಂಟ್ವಾಳ-165, ಬೆಳ್ತಂಗಡಿ-152, ಮಂಗಳೂರು-165, ಮೂಡುಬಿದಿರೆ -50, ಸುಳ್ಯ-60 ಕಡಬ-55 ಸಹಿತ 712 ಮಂದಿ ಖಾಸಗಿ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಇವರ ಮೂಲಕ ಬೆಳೆ ಸಮೀಕ್ಷೆ ನಡೆಸಬಹುದಾಗಿದೆ.
ಮುಖ್ಯವಾಗಿ ಕೃಷಿಕರೇ ಹೆಚ್ಚಿನ ಆಸಕ್ತಿ ತೋರಿ ಬೆಳೆ ಸಮೀಕ್ಷೆಗೆ ಮುಂದಾದಾಗ ಸರಕಾರದ ಯೋಜನೆ ಫಲಪ್ರದವಾಗಲಿದೆ.
ಮಂಗಳೂರಿನಲ್ಲಿ 6,859 ಪ್ಲಾಟ್‌ಗಳು ನೋಂದಣಿ
ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ಗರಿಷ್ಠ 6,859 ಪ್ಲಾಟ್‌ಗಳು ನೋಂದಣಿಯಾಗಿದ್ದು, 2ನೇ ಸ್ಥಾನದಲ್ಲಿ ಬೆಳ್ತಂಗಡಿ 6,307 ಪ್ಲಾಟ್‌ಗಳು ನೋಂದಣಿ ಯಾಗಿವೆ. ಉಳಿದಂತೆ ಬಂಟ್ವಾಳ 4,703, ಮೂಡು ಬಿದಿರೆ 4,422, ಸುಳ್ಯ 3,424, ಪುತ್ತೂರು 5,422, ಕಡಬ 3,726 ಪ್ಲಾಟ್‌ಗಳು ನೋಂದಣಿಯಾಗಿವೆ. ಜಿಲ್ಲೆಯಲ್ಲಿ ಒಟ್ಟು 9,62,012 ಪ್ಲಾಟ್‌ಗಳ ಪೈಕಿ ಕೇವಲ 34,863 (ಆ. 24ರ ವರೆಗೆ ) ಪ್ಲಾಟ್‌ಗಳಷ್ಟೆ ನೋಂದಣಿಗೊಂಡಿವೆ. ತಾಂತ್ರಿಕ ತೊಂದರೆಗಳು, ಮಾಹಿತಿ ಕೊರತೆ, ನೋಂದಣಿಗೆ ರೈತರ ನಿರಾಸಕ್ತಿ, ಜಿಪಿಎಸ್ ಸಮಸ್ಯೆಗಳಿಂದ ಗುರಿ ತಲುಪದಿರುವ ಸಾಧ್ಯತೆ ಹೆಚ್ಚಿದೆ.
ಅಧಿಕೃತ ಮಾಹಿತಿ ಬರಬೇಕಿದೆ
ರೈತರೇ ಬೆಳೆ ಸಮೀಕ್ಷೆ ಮಾಡುವ ಉತ್ತಮ ಅವಕಾಶ ಇದಾಗಿದ್ದು, ಸೆ. 23ರ ವರೆಗೆ ದಿನಾಂಕ ವಿಸ್ತಾರ ಮಾಡಿರುವುದಾಗಿ ಮಾಹಿತಿ ಇದೆ. ಈ ಕುರಿತು ಇಲಾಖೆಗೆ ಅಧಿಕೃತ ಮಾಹಿತಿ ಬರಬೇಕಿದೆ. ರೈತರು ಹೆಚ್ಚಾಗಿ ಆಸಕ್ತಿ ತೋರಿ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಲ್ಲಿ ಯೋಜನೆಗೆ ಮಹತ್ವ ಬರಲಿದೆ.
-ಸೀತಾ, ಜಂಟಿ ಕೃಷಿ ನಿರ್ದೇಶಕರು ದ.ಕ. ಜಿಲ್ಲೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.