ಅಧ್ಯಯನ ವರದಿ ; ಹಾಲುಣಿಸಿದರೆ ಸೋಂಕು ಹರಡುವುದಿಲ್ಲ
Team Udayavani, Aug 25, 2020, 6:22 AM IST
ಲಂಡನ್: ಇಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ನೇಮಕಗೊಂಡಿರುವ ಪೊಲೀಸ್ ಸಿಬಂದಿ.
ನ್ಯೂಯಾರ್ಕ್: ಈ ಹಿಂದೆ ಗರ್ಭಿಣಿ ತಾಯಿಯಿಂದ ನವಜಾತ ಶಿಶುವಿಗೆ ಸೋಂಕು ತಗಲುತ್ತದೆ ಅಥವಾ ತಾಯಿ ಎದೆ ಹಾಲುಣಿಸುವುದರಿಂದ ಸೋಂಕು ಹರಡುತ್ತದೆ ಎಂಬ ವಿಷಯಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಆದರೀಗ ಈ ಎಲ್ಲ ಗೊಂದಲ ಗಳಿಗೆ ಇದೀಗ ತೆರೆ ಬಿದಿದ್ದು, ತಾಯಿಯ ಎದೆ ಹಾಲು ಮೂಲಕ ಕೋವಿಡ್ ಸೋಂಕು ಹರಡುವ ಸಾಧ್ಯತೆ ಇಲ್ಲ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ಅಧ್ಯಯನದ ಪ್ರಕಾರ ಕೊರೊನಾ ಸೋಂಕು ದೃಢಪಟ್ಟ ತಾಯಿಯಿಂದ ಶಿಶುಗಳಿಗೆ ಎದೆ ಹಾಲುಣಿಸುವುದರಿಂದ ಸೋಂಕು ಹರಡುವುದಿಲ್ಲ ಎಂದು ಹೇಳಲಾಗಿದೆ. ಅಧ್ಯಯನಕ್ಕಾಗಿ ಯುನೈಟೆಡ್ ಸ್ಟೇಟ್ಸ್‌ನ ತೀವ್ರ ಉಸಿರಾಟದ ತೊಂದರೆ ಸಮಸ್ಯೆ ಯಿಂದ ಬಳಲುತ್ತಿರುವ ಸುಮಾರು 18 ಕೊರೊನಾ ಸೋಂಕಿತ ಮಹಿಳೆಯರಿಂದ ಬಯೋರೆಪೊಸಿಟರಿ ಸಂಗ್ರಹಿಸಿ 64 ಎದೆ ಹಾಲಿನ ಮಾದರಿಗಳನ್ನು
ಪರಿಶೀಲಿಸಿ ಈ ವರದಿ ಸಿದ್ಧಪಡಿಸಿದ್ದು, JAMA ಜರ್ನಲ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.
ಒಂದು ಮಾದರಿಯು ವೈರಲ್ ಆರ್‌ಎನ್‌ಎಗೆ ಪಾಸಿಟಿವ್ ಎಂದು ಕಂಡುಬಂದರೂ, ಅನಂತರದ ಪರೀಕ್ಷೆಗಳಲ್ಲಿ ವೈರಸ್ ಪುನರಾವರ್ತನೆ ಕಾಣಿಸಿಲ್ಲ, ಇದರಿಂದಾಗಿ ಎದೆಹಾಲು ಕುಡಿದ ಶಿಶುಗಳಲ್ಲಿ ಸೋಂಕು ಉಂಟಾಗಲು ಸಾಧ್ಯವಾಗಲಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.
ವೈರಲ್ ಆರ್‌ಎನ್‌ಎ ಪತ್ತೆ ಸೋಂಕಿಗೆ ಸಮನಾಗಿಲ್ಲ. ಏಕೆಂದರೆ ಸೋಂಕು ಸಾಂಕ್ರಾಮಿಕ ರೋಗವಾಗಲು ಇದಿನ್ನೂ ಬೆಳಯಬೇಕು, ನಮ್ಮ ಯಾವುದೇ ಮಾದರಿಗಳಲ್ಲಿ ನಾವು ಅದನ್ನು ಕಂಡುಕೊಂಡಿಲ್ಲ ಎಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಸ್ಯಾನ್ ಡಿಯಾಗೋ ಸ್ಕೂಲ್ ಆಫ್ ಮೆಡಿಸಿನ್ ಅಲ್ಲಿನ ಅಧ್ಯಯನದ ಸಹ ಪ್ರಧಾನ ಸಂಶೋಧಕ ಮತ್ತು ಪ್ರಾಧ್ಯಾಪಕ ಕ್ರಿಸ್ಟಿನಾ ಚೇಂಬರ್ಸ್ ಹೇಳಿದ್ದಾರೆ.
ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವಿ
ಲಂಡನ್: ವಿಶ್ವದೆಲ್ಲೆಡೆ ಅನ್‌ಲಾಕ್ ಪ್ರಕ್ರಿಯೆ ಶುರುವಾಗಿದ್ದು, ಕೆಲವೊಂದು ದೇಶಗಳಲ್ಲಿ ಶಾಲಾ ಕಾಲೇಜುಗಳು ಶೈಕ್ಷಣಿಕ ಚಟುವಟಿಕೆಗಳಿಗೆ ತೆರೆದುಕೊಂಡಿವೆ. ಈ ಹಿನ್ನೆಲೆ ಯಲ್ಲಿಯೇ ಕಳೆದ 5 ತಿಂಗಳಿನಿಂದ ಮುಚ್ಚಿದ್ದ ಶಾಲೆಗಳನ್ನು ಮುಂದಿನ ತಿಂಗಳಿನಿಂದ ಪುನರಾರಂಭಿಸಲು ಬ್ರಿಟನ್ ಸರಕಾರ ನಿರ್ಧರಿಸಿದ್ದು, ಮಕ್ಕಳನ್ನು ಶಾಲೆಗೆ ಕಳಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಪೋಷಕರಲ್ಲಿ ಮನವಿ ಮಾಡಿದೆ.
ಕಳೆದ ಮಾರ್ಚ್ 23ರಂದು ಲಾಕ್‌ಡೌನ್ ಘೋಷಣೆಯಾದಾಗಿನಿಂದ ಬ್ರಿಟನಾದ್ಯಂತ ಶಾಲೆಗಳನ್ನು ಬಂದ್ ಮಾಡಲಾಗಿದ್ದು, ಜೂನ್‌ನಲ್ಲಿ ಕೆಲವು ಕಡೆ ಶಾಲೆಗಳನ್ನು ಪುನರರಾಂಭಿಸಿದರೂ. ಆದರೆ ಸರಕಾರ ಶಾಲೆಗೆ ಬರುವುದನ್ನು ಕಡ್ಡಾಯ ಗೊಳಿಸಿರದ ಕಾರಣ ಕೇವಲ ಶೇ.18ರಷ್ಟು ಮಕ್ಕಳು ಮಾತ್ರ ಶಾಲೆಗೆ ಬಂದಿದ್ದರು. ಆದರೀಗ ಕೋವಿಡ್ ನಿಂದಾಗುವ ಅಪಾಯಕ್ಕಿಂತ, ಶಾಲೆಗಳನ್ನು ಮುಚ್ಚಿರುವುದರಿಂದ ಮಕ್ಕಳ ಮೇಲಾಗುವ ಪರಿಣಾಮಗಳು ಎಷ್ಟು ಅಪಾಯಕಾರಿ ಎಂಬುದರ ಕುರಿತು ಬ್ರಿಟನ್‌ನ ಉನ್ನತಮಟ್ಟ ವೈದ್ಯ ಕೀಯ ತಜ್ಞರ ಸಲಹೆ ಮೇರೆಗೆ ಶಾಲಾ ಕಾಲೇಜುಗಳನ್ನು ಪುನ ತೆರೆಯಲು ಬ್ರಿಟನ್ ಸರಕಾರ ನಿರ್ಧರಿಸಿದೆ. ಇನ್ನು ಮಕ್ಕಳಲ್ಲಿರುವ ಕೊರೊನಾ ಭಯವನ್ನು ಹೋಗಲಾಡಿಸಿ ಸೆಪ್ಟೆಂಬರ್‌ನಿಂದ ಆರಂಭವಾಗುವ ಶಾಲೆಗಳಿಗೆ ಕಳುಹಿಸಲು ಸಜ್ಜುಗೊಳಿಸುವಂತೆ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪೋಷಕರಿಗೆ ಕರೆ ನೀಡಿದ್ದು, ಶಾಲೆಯನ್ನು ಪುನರಾರಂಭಿಸುವುದು ಸರಕಾರದ ನೈತಿಕ ಕರ್ತವ್ಯ. ಮಕ್ಕಳು ಪುನಃ ಶಾಲೆಗೆ ಮರಳಬೇಕು. ತರಗತಿಯಲ್ಲಿ ಕುಳಿತು ಪಾಠ ಕೇಳಬೇಕು ಎಂದಿದ್ದಾರೆ. ಸೋಂಕಿನ ಭೀತಿಯಿಂದಾಗಿ ಶಾಲೆಗಳಲ್ಲಿ ಮಕ್ಕಳು ಅಂತರ ಕಾಪಾಡುವುದಿಲ್ಲ ಎಂದು ಶಾಲೆ ಪುನರಾರಂಭದ ಬಗ್ಗೆ ಪೋಷಕರುಕಳವಳ ವ್ಯಕ್ತಪಡಿಸಿದ್ದು, ಶಾಲೆ ಪುನರರಾಂಭಕ್ಕೆ ಮುನ್ನ ಶಾಲೆಗಳಲ್ಲಿ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆ ಸ್ಪಷ್ಟಪಡಿಸಬೇಕೆಂದು ಶೈಕ್ಷಣಿಕ ಸಂಘಟನೆಗಳು ಜಾನ್ಸನ್ ಸರಕಾರವನ್ನು ಒತ್ತಾಯಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.